ಮಂಡ್ಯ : ಚಿಕ್ಕರಸಿನಕೆರೆಯಲ್ಲಿ ಮೀನುಗಳ ಮಾರಣ ಹೋಮ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 12 : ಕಲುಷಿತ ನೀರಿನಿಂದಾಗಿ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪುತ್ತಿವೆ. ಈಗಾಗಲೇ ಸಾವಿರಾರು ಮೀನುಗಳು ಮೃತಪಟ್ಟು ತೇಲುತ್ತಿವೆ. ಇದರಿಂದ ಸುತ್ತ-ಮುತ್ತಲಿನ ವಾತಾವರಣ ಕಲುಷಿತವಾಗಿದೆ.

ಸುಮಾರು 50 ಎಕರೆ ವಿಸ್ತೀರ್ಣವುಳ್ಳ ಕೆರೆಯಲ್ಲಿ ಮೀನು ಸಾಕಲಾಗುತ್ತದೆ. ಮೀನುಗಾರಿಕಾ ಇಲಾಖೆಯು ರವೀಂದ್ರ ಎಂಬುವವರಿಗೆ ಮೀನು ಸಾಕಣೆಯ ಟೆಂಡರ್ ಕೊಟ್ಟಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. [ಮೀನಿನ ತಲೆ ಮಾಂಸ ತಿಂದ 14 ಮಂದಿ ಅಸ್ವಸ್ಥ]

chikkarasinakere lake

ಮೀನುಗಳು ಚೆನ್ನಾಗಿ ಬೆಳೆದು 2 ರಿಂದ 3 ಕೆಜಿಯಷ್ಟು ಗಾತ್ರದ್ದಾಗಿದ್ದವು. ಆದರೆ, ಈ ಬಾರಿ ಮಳೆ ಬಾರದೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮ ಮತ್ತು ಕೆರೆ ನೀರು ಕಲುಷಿತಗೊಂಡಿದ್ದರಿಂದ ಮೀನುಗಳು ಮೃತಪಟ್ಟಿವೆ. [ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]

ಕೆರೆಯಲ್ಲಿ ಮೀನುಗಳು ಇರುವುದರಿಂದ ದುಷ್ಕರ್ಮಿಗಳು ವಿಷ ಹಾಕಿರಬಹುದೇ ಎಂಬ ಸಂಶಯವೂ ಕಾಡುತ್ತಿದೆ. ಎರಡು ವಾರಗಳ ಹಿಂದೆ ಕೆರೆಗೆ ದುಷ್ಕರ್ಮಿಗಳು ವಿದ್ಯುತ್ ಪ್ರವಹಿಸಿದ್ದುದರಿಂದ ಹಲವಾರು ಮೀನುಗಳು ಮೃತಪಟ್ಟಿದ್ದವು. ಹೀಗಿರುವಾಗ ಈ ಮೀನುಗಳ ಮಾರಣ ಹೋಮದ ಹಿಂದೆ ದುಷ್ಕರ್ಮಿಗಳ ಕೈವಾಡವೂ ಇದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. [ಹಲಸೂರು ಕೆರೆ ಸಂರಕ್ಷಣೆ ಹೊಣೆ ಯಾರದ್ದು?]

ಸತ್ತ ಮೀನುಗಳು ಕೊಳೆಯುವ ಹಂತ ತಲುಪಿದ್ದು, ಅವುಗಳನ್ನು ಶುಚಿಗೊಳಿಸುವಂತೆಯೂ ಟೆಂಡರ್ ಪಡೆದವರಿಗೆ ಸೂಚನೆ ನೀಡಲಾಗಿದೆ. ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರಿಂದ ಕಂಗಾಲಾಗಿರುವ ಟೆಂಡರ್ ಪಡೆದ ರವೀಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thousand of dead fish washed ashore of chikkarasinakere lake Madduru, Mandya district due to water pollution.
Please Wait while comments are loading...