ರಾಜ್ಯೋತ್ಸವಕ್ಕೂ ಮುನ್ನ ಕೇಂದ್ರದ ವಿರುದ್ಧ ಸಿಎಂ ‘ಕನ್ನಡ’ ಅಸ್ತ್ರ?

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿರುವುದು ಗೊತ್ತಿರುವ ವಿಚಾರ. ಅದರಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು, ಪದೇ ಪದೆ ಮಲತಾಯಿ ದೋರಣೆ ಆರೋಪ ಹೊರಿಸುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ, ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಇದೇ ಅಸ್ತ್ರವನ್ನ ಪ್ರಯೋಗ ಮಾಡಿದ್ದಾರೆ.

ಅಷ್ಟಕ್ಕೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ, ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಗಂಭೀರ ಆರೋಪಗಳ ಪೈಕಿ ಕರ್ನಾಟಕದ ಬಗ್ಗೆ ಕೇಂದ್ರ ಮಲತಾಯಿ ದೋರಣೆ ತೋರುತ್ತಿದೆ ಎಂಬ ಆರೋಪ ಕೂಡ ಒಂದಾಗಿತ್ತು. ಎರಡೂ ಪಕ್ಷಗಳ ನಾಯಕರು, ಇದೇ ವಿಚಾರದಲ್ಲಿ ಪರಸ್ಪರ ಆರೋಪ & ಪ್ರತ್ಯಾರೋಪ ಮಾಡಿದ್ದರು. ನಂತರ ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಿತ್ತಾಟ ಶುರುವಾದಾಗಲೂ ಈ ವಿಷಯ ಮುನ್ನೆಲೆಗೆ ಬಂದಿತ್ತು. ಇದೀಗ ರಾಜ್ಯೋತ್ಸವದ ಸಮಯದಲ್ಲಿ ಮತ್ತೆ ಅದರ ಬಗ್ಗೆ ಪ್ರಸ್ತಾಪವಾಗಿದೆ.

This Is How Karnataka CM Siddaramaiah Is Questioned NDA Government

ಕನ್ನಡಿಗರ ಬೇಡಿಕೆಯನ್ನು ಪುರಸ್ಕರಿಸಿ 2008ರಲ್ಲಿ...

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 'ಕನ್ನಡಿಗರ ಬೇಡಿಕೆಯನ್ನು ಪುರಸ್ಕರಿಸಿ 2008ರಲ್ಲಿ ಯುಪಿಎ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಆದರಿಸುವ ಕೆಲಸ ಮಾಡಿತ್ತು. ಆದರೆ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರವು ಕನ್ನಡ ಭಾಷೆಯ ಅಭಿವೃದ್ಧಿ ಕಾರ್ಯಗಳಿಗೆ ಬೇಕಿರುವ ಅನುದಾನ ಮತ್ತು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡದೆ ಕನ್ನಡ ಭಾಷೆಗೆ ಸಿಕ್ಕ ಶಾಸ್ತ್ರೀಯ ಸ್ಥಾನಮಾನದ ಲಾಭಗಳನ್ನು ಕಸಿದುಕೊಂಡಿದೆ. ಕೇಂದ್ರ @BJP4India ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ #AnswerMadiModi' ಎಂದು ಪೋಸ್ಟ್ ಮಾಡಿದ್ದಾರೆ ಸಿಎಂ.

ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಮೇಲಿನ...

ಹಾಗೇ ಮತ್ತೊಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ, 'ಕೇಂದ್ರ @BJP4India ಸರ್ಕಾರದಿಂದ ಕರುನಾಡಿಗೆ ಆಗುತ್ತಿರುವ ಅನ್ಯಾಯವವನ್ನು ಪಕ್ಷಾತೀತವಾಗಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. ಕರ್ನಾಟಕದ ಪಾಲಿನ ತೆರಿಗೆ, ಬರಪರಿಹಾರ, ಅನುದಾನಗಳ ನ್ಯಾಯಯುತ ಪಾಲು ನಾಡಿಗೆ ಬರಬೇಕು, ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಮೇಲಿನ ದಾಳಿಗಳು ಕೊನೆಯಾಗಬೇಕು. ರಾಜಕೀಯಕ್ಕಿಂತ ನನ್ನ ನಾಡು, ನನ್ನ ಭಾಷೆ, ನನ್ನ ಜನ ನನಗೆ ಮುಖ್ಯ. ಪ್ರಧಾನಿ @narendramodi ಅವರೇ, ಇನ್ನಾದರೂ ಕನ್ನಡ ನಾಡಿಗೆ ನ್ಯಾಯ ಒದಗಿಸುತ್ತೀರೆಂದು ನಾವು ನಿರೀಕ್ಷಿಸಬಹುದೇ? #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ #AnswerMadiModi'ಎಂದು ಪ್ರಶ್ನೆ ಮಾಡಿದ್ದಾರೆ ಸಿಎಂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+