ಬಿಎಸ್ವೈ ಸರಕಾರವನ್ನು 'ಕಲಿಯುಗದ ಕೌರವರು'ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು, ಜುಲೈ 23: ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು, ಯಡಿಯೂರಪ್ಪ ನೇತೃತ್ವದ ಸರಕಾರದ ವಿರುದ್ದ ಕಾಂಗ್ರೆಸ್, ದಾಖಲೆಗಳ ಮೇಲೆ ದಾಖಲೆಯನ್ನು ಬಿಡುಗಡೆ ಮಾಡುತ್ತಿದೆ.

Recommended Video

      India vs China : ಪಾಕಿಸ್ತಾನವನ್ನು ಬಿಟ್ಟು ಚೀನಾವನ್ನು ಟಾರ್ಗೆಟ್ ಮಾಡಿದ ಭಾರತ | Oneindia Kannada

      ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, "ಮಹಾಭಾರತ ಯುದ್ದ ಮುಗಿಯಲು ಹದಿನೆಂಟು ದಿನಬೇಕಾಯಿತು. ಕೊರೂನಾ ವಿರುದ್ದ ಜಯಸಾಧಿಸಲು 21ದಿನಗಳು ಸಾಕು ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಈಗ 121 ದಿನವಾದರೂ, ಕೊರೊನಾದಿಂದ ಮುಕ್ತಿಸಿಗಲಿಲ್ಲ"ಎಂದು ಡಿಕೆಶಿ ಹೇಳಿದರು.

      "ಯಾವುದೇ ದೂರದೃಷ್ಟಿಯಿಲ್ಲದ, ಬರೀ ಭ್ರಷ್ಟಾಚಾರದಲ್ಲೇ ತೊಡಗಿರುವ ಯಡಿಯೂರಪ್ಪನವರ ಸರಕಾರ ಕಲಿಯುಗದ ಕೌರವರು ಇದ್ದಂತೆ"ಎಂದು ಡಿ.ಕೆ.ಶಿವಕುಮಾರ್, ಸರಕಾರದ ವಿರುದ್ದ ಕಿಡಿಕಾರಿದರು.

      This Is A Government Of Kaliyugada Kauravas, D K Shivakumar On Yediyurappa Government

      "ನಮ್ಮ ನಾಯಕರಾದ ಸಿದ್ದರಾಮಯ್ಯನವರು ಸರಕಾರದ ಎರಡು ಸಾವಿರ ಕೋಟಿ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ. ಕೊರೊನಾಗಿಂತಲೂ ದೊಡ್ಡ ಸಮಸ್ಯೆಯಲ್ಲಿ ಬಿಜೆಪಿ ತಗಲಾಕಿಕೊಂಡಿದೆ"ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದರು.

      "ಸರಕಾರದ ಮೂಲ ಧ್ಯೇಯ ಲೂಟಿ ಹೊಡೆಯುವುದು. ರಾಜ್ಯದಲ್ಲಿನ ಆಡಳಿತಯಂತ್ರ ದಾರಿತಪ್ಪಿ ಹೋಗಿದೆ. ಹಾಲೀ ನ್ಯಾಯಧೀಶರ ನೇತೃತ್ವದಲ್ಲಿ ಕೊರೊನಾ ಅಕ್ರಮದ ಬಗ್ಗೆ ತನಿಖೆ ನಡೆಯಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ"ಎಂದು ಡಿಕೆಶಿ ಹೇಳಿದರು.

      ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೊರೊನಾ ಭ್ರಷ್ಟಾಚಾರದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುತ್ತಿದ್ದಂತೆಯೇ, 'ಉತ್ತರಕೊಡಿ ಬಿಜೆಪಿ' ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+