ಕಾರ್ಕಳದ ಜೈನ ಬಸದಿಯಲ್ಲಿ ನಾನಾ ವಿಗ್ರಹಗಳು ಕಳವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಫೆಬ್ರವರಿ,22: ಲಕ್ಷಾಂತರ ಬೆಲೆಬಾಳುವ ಅಮೂಲ್ಯ ಪಂಚಲೋಹ ವಿಗ್ರಹ ಸಹಿತ ಚಿನ್ನ,ಬೆಳ್ಳಿ ಅಭರಣಗಳ ಕಳವು ಮಾಡಿದ ಘಟನೆ ಭಾನುವಾರದ ನಸುಕಿನಲ್ಲಿ ಕಾರ್ಕಳದ ಶಿರ್ಲಾಲು ಶ್ರೀ ಆದಿನಾಥಸ್ವಾಮಿ ಬಸದಿಯಲ್ಲಿ ನಡೆದಿದೆ.

ಐತಿಹಾಸಿಕ ಹಿನ್ನಲೆಯುಳ್ಳ ಶಿರ್ಲಾಲು ಶ್ರೀ ಆದಿನಾಥ ಸ್ವಾಮಿಯ ಬಾಗಿಲು ಮುರಿದು ದುಷ್ಕರ್ಮಿಗಳು ಅಕ್ರಮವಾಗಿ ಪ್ರವೇಶಗೈದು ಅಲ್ಲಿನ ಪದ್ಮಾವತಿ ಅಮ್ಮನ, ಬಾಹುಬಲಿ, ಮೂಲ ಆದಿನಾಥ ಸ್ವಾಮಿ, ಭರತ ದೇವರುಗಳ ವಿಗ್ರಹಗಳು, ಚಿನ್ನದ ಮುಖವಾಡ, ಬಂಗಾರದ ನಾಗ ಹೆಡೆ, ಬೆಳ್ಳಿಯ ಪ್ರಭಾವಳಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಕಳವುಗೈದಿದ್ದಾರೆ.[ಕಾರ್ಕಳದಲ್ಲಿ ನೋಡಬೇಕಾದ ಸ್ಥಳಗಳು]

Udupi

ಶ್ವಾನಗಳ ಮಾರಣ ಹೋಮವೂ, ಕಳ್ಳತನವೂ...

ಬಸದಿ ಹಾಗೂ ಪರಿಸರದಲ್ಲಿ ಇದ್ದಂತಹ ಸಾಕು ನಾಯಿಗಳು ಕಳೆದ ಐದು ದಿನಗಳ ಅಂತಹದಲ್ಲಿ ಸರಣಿಯಂತೆ ಸಾವಿಗೀಡಾಗಿದ್ದವು. ಇವುಗಳಿಗೆ ಯಾವುದಾದರೂ ವಿಷ ಪಾಷಣ ನೀಡಿ ಇದೇ ತಂಡ ಮಾರಣಹೋಮ ನಡೆಸಲಾಗಿತ್ತೇ ಎಂಬ ಯಕ್ಷ ಪ್ರಶ್ನೆಗಳು ಸ್ಥಳೀಯರಲ್ಲಿ ಕಾಡತೊಡಗಿದೆ.

ಬೆರಳಚ್ಚು ತಜ್ಞರು, ಶ್ವಾನದಳ

ಮಾಹಿತಿ ತಿಳಿಯುತ್ತಿದ್ದಂತೆ ಉಡುಪಿ ಜಿಲ್ಲಾ ಬೆರಳಚ್ಚು ತಂಡ ಹಾಗೂ ಪೊಲೀಸ್ ಶ್ವಾನದಳ ಅಗಮಿಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ತಮ್ಮ ಹೆಜ್ಜೆ ಗುರುತುಗಳೇ ಸಿಗದಂತೆ ಮಾಡಲು ಬಸದಿಯೊಳಗೆ ಕಳ್ಳರು ಶೂ ಧರಿಸಿ ಪ್ರವೇಶಿಸಿರುವುದು ಇದರಿಂದ ಧೃಢ ಪಟ್ಟಿದೆ.[ಪತಿ ಕದ್ದ ದೇಗುಲ ಚಿನ್ನವನ್ನು ದೇವಸ್ಥಾನಕ್ಕೆ ಹಿಂತಿರುಗಿಸಿದ ಪತ್ನಿ]

ವಿದ್ಯುತ್ ಸ್ಪರ್ಶಿಸಿದ ಕೇಬಲ್ ಆಪರೇಟರ್ ಸ್ಥಿತಿ ಚಿಂತಾಜನಕ

ಮಂಗಳೂರು, ಫೆಬ್ರವರಿ,22: ವಿದ್ಯುತ್ ಸ್ಪರ್ಶಿಸಿ ಕೇಬಲ್ ಅಪರೇಟರ್ ಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಚಿಂತಾಜನಕವಾದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸೋಮವಾರ ನಡೆದಿದೆ.

Mangaluru

ಗಾಯಗೊಂಡ ಕೇಬಲ್ ಆಪರೇಟರ್ ಉಳ್ಳಾಲ ಕೃಷ್ಣಾ ನಗರ ನಿವಾಸಿ ನಿಶಾಂತ್ (29) ಎಂದು ಗುರುತಿಸಲಾಗಿದೆ. ನಿಶಾಂತ್ ನನ್ನು ದೇರಳಕಟ್ಟೆ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ತೊಕ್ಕೊಟು ಪ್ರದೇಶದಲ್ಲಿ ಕೇಬಲ್ ವ್ಯತ್ಯಯ ಉಂಟಾದ ಹಿನ್ನಲೆ ವಿದ್ಯುತ್ ಟ್ರಾನ್ಸ್ ಫರ್ ಕಂಬವನ್ನೇರಿ ಕೇಬಲ್ ತಂತಿಗಳನ್ನು ಜೋಡಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. [ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thieves stolen some staues like in Shirlalu Sri Aadinath swamy temple of Karkal, Udupi on Sunday, February, 21st.
Please Wait while comments are loading...