ವಕ್ಫ್ ಆಸ್ತಿ ಹೊಡೆದುಕೊಂಡು ಆ ಮೂವರು ಶ್ರೀಮಂತರಾಗಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್‌

ವಿಜಯಪುರ, ನವೆಂಬರ್‌ 04: ವಕ್ಪ್ ಬೋರ್ಡ್ ನಲ್ಲಿ ಲಕ್ಷಾಂತರ ಕೋಟಿ ಅವ್ಯವಹಾರವಾಗಿರುವ ಬಗ್ಗೆ ಅನ್ವರ್ ಮಾನ್ಪಾಡಿ ವರದಿಯ ಮಾಹಿತಿ ನೀಡಲಾಗಿದೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಆಸ್ತಿ ಹೊಡೆದುಕೊಂಡಿದ್ದಾರೆ. ಖಮರುಲ್ ಇಸ್ಲಾಂ, ರೆಹಮಾನಖಾನ್, ಸಿ. ಎಂ. ಇಬ್ರಾಹಿಂ, ಕೇರಳದ ಶಾಸಕರೊಬ್ಬರು ವಕ್ಪ್ ಆಸ್ತಿ ಹೊಡೆದುಕೊಂಡಿದ್ದಾರೆ. ಇವರೆಲ್ಲ ವಕ್ಪ್ ಆಸ್ತಿ ಹೊಡೆದುಕೊಂಡು ಶ್ರೀಮಂತರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ.

ವಕ್ಪ್ ಆಸ್ತಿ ಬಗ್ಗೆ ನಿಜವಾದ ಕಳಕಳಿ ಇದ್ದರೆ ಅನ್ವರ್ ಮಾನ್ಪಾಡಿ ವರದಿಯನ್ನು ಬಹಿರಂಗ ಮಾಡಿ ಎಂದು ಅವರು ಸವಾಲು ಹಾಕಿದ ಯತ್ನಾಳ್‌ ಅವರು, ಹಿಂದೂಗಳನ್ನು ಸೈತಾನರಿಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಸಚಿವರಾದ ನಂತರ ವಕ್ಫ್ ಹೆಸರಿನಲ್ಲಿ ಹಿಂದೂಗಳ ವಿರುದ್ಧ ಕೆಲಸ ಹೆಚ್ಚಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

They have become rich by plundering Waqf property Says Basanagouda Patil Yatnal

ಫಾರ್ಮ್ ನಂ. 11ರಲ್ಲಿ ವಕ್ಫ್ ಎಂದು ಸೇರಿಸಿದ್ದಾರೆ. ಅನೇಕ ರೈತರಿಗೆ ನೊಟೀಸ್ ನೀಡದೇ ವಕ್ಫ್ ಹೆಸರು ಸೇರಿಸಿದ್ದಾರೆ. ಇದು ವಿಜಯಪುರ ಅಷ್ಟೇ ಅಲ್ಲ, ಮಂಗಳೂರುವರೆಗೂ ಹರಡಿದೆ. ಮಂಗಳೂರಿನಲ್ಲಿ ಒಂದು ಊರಿನ ಹೆಸರು ಬದಲಾವಣೆ ಮಾಡಿ ಸುಲ್ತಾನಪುರ ಎಂದು ಇಟ್ಟಿದ್ದಾರೆ ಎಂದು ಆರೋಪಿಸಿದರು. ಬಹಳ ದಿನಗಳಿಂದ ಷಡ್ಯಂತ್ರ ನಡೆದಿದೆ. ಜಮೀರ್ ಅಧಿಕಾರ ತೆಗೆದುಕೊಂಡ ಬಳಿಕ ಹೆಚ್ಚಾಗಿದೆ.

ಇವರು ಹಿಂದೂ ಸಮಾಜವನ್ನು ಸೈತಾನ್ ಗೆ ಹೋಲಿಸಿ ಮಾತನಾಡುತ್ತಿದ್ದಾರೆ. 1974-75ರ ಗೆಜೆಟ್ ನೊಟೀಫಿಕೇಶನ್ ರದ್ದಾಗಬೇಕು. ಆ ಕಾಲದಲ್ಲಿ ಏನೆಲ್ಲಾ ಅಗಿದೆ ಅದು ರದ್ದಾಗಬೇಕು. ಯಾವುದೇ ರೈತನ ಜಮೀನಿನಲ್ಲಿ ವಕ್ಪ್ ಎಂದು ಬರಬಾರದು. ಬ್ಯಾಂಕುಗಳು ರಾಷ್ಟ್ರೀಕರಣ ಆದಂತೆ ವಕ್ಫ್ ಆಸ್ತಿಗಳು ರಾಷ್ಟ್ರೀಕರಣ ಆಗಬೇಕು. ಈ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಯತ್ನಾಳ್‌ ಅವರು ಹೇಳಿದರು.

ಕಾಶ್ಮೀರದಲ್ಲಿ 370ನೇ ಕಲಂ ತೆಗೆದು ಹಾಕಲಾಗಿದೆ. ಅಯೋಧ್ಯೆಯ ವಿಚಾರದಲ್ಲಿ ನಾವು ಗೆದ್ದಿದ್ದೇವೆ. ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಆಗುವಷ್ಟು ಜಮೀನು ವಕ್ಪ್ ಕೈಯಲ್ಲಿದೆ. ಅವರು ಸುರಕ್ಷಿತವಾಗಿ ನಮ್ಮ ದೇಶದಲ್ಲಿ ಇರ್ತಾರಾ ಎಂದು ಪ್ರಶ್ನೆಸಿದ ಅವರು, ಬದರಿನಾಥ ದೇವಾಲಯವು ಸಹ ಭದ್ರದ್ದೀನ್ ಶಹಟದ್ದು ಎಂದು ಹೇಳುತ್ತಾರೆ. ನಿತ್ಯ ಒಂದೊಂದು ಆಸ್ತಿ ನಮ್ಮದೇ ಎಂದು ಹೇಳುತ್ತಿದ್ದಾರೆ. ಇದೇ ರೀತಿಯಾದರೆ ಭಾರತ ಭಾರತವಾಗಿ ಉಳಿಯಲ್ಲ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ವಕ್ಪ್ ಬೋರ್ಡ್ ವಿಚಾರವಾಗಿ ಮುಲ್ಲಾ, ಇನಾಮದಾರ ಹಾಗೂ ಇತರರು ಸಹ ಹೋರಾಟ ಮಾಡಿದ್ದಾರೆ. ಈಗ ಹಿಂದೂಗಳ ಅಸ್ತಿ ಪಡೆಕೊಂಡ‌ ಬಳಿಕ ಮುಲ್ಲಾ, ಜಾಹಗೀರದಾರ, ಇನಾಮದಾರ ಅವರ ಜಮೀನು ವಾಪಸ್ ನೀಡುತ್ತೇವೆ ಎಂದು ಒಳ ಒಪ್ಪಂದ ಮಾಡಿಕೊಳ್ಳಬಹುದು ಎಂದು ಬಿಜೆಪಿ ಶಾಸಕ ಯತ್ನಾಲ್‌ ಹೇಳಿದರು.

1939 ರಿಂದ ದೇಶದಲ್ಲಿ ಆಸ್ತಿ ಪತ್ರಗಳು ಇವೆ. ಅದರಲ್ಲಿ ಮುಸ್ಲಿಮ್ ಆಸ್ತಿ ಎಂದು ಉಲ್ಲೇಖವಿಲ್ಲ. ಅಲ್ಲಾಹಗೆ ದಾನ ನೀಡಿದ ದಾನ ಪತ್ರವೂ ಇಲ್ಲ. ಯಾವುದೇ ದಾಖಲೆಗಳಲ್ಲಿ ಅಲ್ಲಗಾಗಿ ದಾನ ನೀಡಿದ ಕುರುಹು ಇಲ್ಲ. ಹೀಗಾಗಿ ನಮ್ಮ ಹೋರಾಟ ನಡೆಯಲಿದೆ. ಇದು ಒಂದು ದಿನದ ಹೋರಾಟ ಅಲ್ಲ. ರಾಜ್ಯದಲ್ಲಿ ಈ ಕುರಿತು ಜನಜಾಗೃತಿ ಮಾಡುತ್ತೇವೆ. ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ 2500 ಎಕರೆ ವಕ್ಪ್ ಎನ್ನಲಾಗುತ್ತಿದೆ. ಹಿಂದಿನಿಂದಲೂ ಒಳಗಿಂದೊಳಗೆ ರೈತರ ಜಮೀನಿನಲ್ಲಿ ನಮೂದು ಮಾಡುತ್ತಾ ಬಂದಿದ್ದಾರೆ. ಆ ಸರಕಾರ, ಈ ಸರ್ಕಾರ ಎಂಬುವುದಿಲ್ಲ. ಎಲ್ಲ ಸರಕಾರಗಳು ಇದ್ದಾಗ ಇದೇ ರೀತಿ ಆಗಿದೆ. ಅದನ್ನು ಯಾರು ಮಾಡಿದರು ತಪ್ಪೇ. ಯಾರನ್ನೂ ಸಮರ್ಥನೆ ಮಾಡಿಕೊಳ್ಳಲ್ಲ. ನಮ್ಮ ಹಿಂದೂ ಸಮಾಜದ ಆಸ್ತಿ ಭಾರತದ ಆಸ್ತಿಯಾಗಿ ಉಳಿಯಬೇಕು ಎಂದು ಅವರು ಹೇಳಿದರು.

ಸೋಮವಾರ ಮಹಾರಾಷ್ಟ್ರದ ಕೊಲ್ಹಾಪುರ ಕನ್ಹೇರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ. ಐತಿಹಾಸಿಕ ಸ್ಮಾರಕಗಳು ನಮ್ಮದೆಂದು ಪುರಾತತ್ವ ಇಲಾಖೆಗೆ ವಕ್ಪ್ ಬೋರ್ಡ್ ನೋಟಿಸ್ ನೀಡಿದೆ. ನೋಟಿಸ್ ನೀಡಿಲ್ಲ ಎಂದು ಸಚಿವ ಜಮೀರ್ ಹೇಳುತ್ತಾರೆ. ಆದರೆ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಸ್ಮಾರಕಗಳು ನಮಗೆ ಸೇರಿವೆ ಎಂದು ಅವರು ನೋಟಿಸ್ ನೀಡುತ್ತಲೇ ಇದ್ದಾರೆ. ಇಲಾಖೆಗೂ ಮಾಹಿತಿ ನೀಡದೆ ವಕ್ಪ್ ಎಂದು ಸೇರಿಸಿದ್ದಾರೆ. ರಾಷ್ಟ್ರೀಯ ಸ್ಮಾರಕಗಳು ಸಹ ವಕ್ಪ್ ಎನ್ನುತ್ತಿದ್ದಾರೆ. ಜಮೀರ್ ಅಹ್ಮದ್ ವಕ್ಪ್ ಸಚಿವರಾದ ಮೇಲೆ ಇದಕ್ಕೆ ವೇಗ ಸಿಕ್ಕಂತಾಗಿದೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಆಸ್ತಿ ವಕ್ಪ್ ಎನ್ನುತ್ತಾರೆ ಎಂದು ಅವರು ಹೇಳಿದರು.

ಅನ್ವರ್ ಮಾನಪ್ಪಾಡಿ ಮೇಲೆ ವಿಶ್ವಾಸ ಇಲ್ಲದಿದ್ದರೆ ಸಿಬಿಐ ತನಿಖೆಗೆ ಕೊಡಿ. ವಕ್ಪ್ ಆಸ್ತಿ ವಿಚಾರವಾಗಿ ಖರ್ಗೆಯವರು ಯಾವುದೇ ಹೇಳಿಕೆ ನೀಡುತ್ತಿಲ್ಲ. ವಕ್ಪ್ ನ‌ಜಂಟಿ ಸಮಿತಿಯಲ್ಲಿ ಖರ್ಗೆ ಸದಸ್ಯರಾಗಿದ್ದಾರೆ. ಆ ಕಮಿಟಿಯ ಸಭೆಗೆ ಖರ್ಗೆ ಅವರು ಹೋಗಲ್ಲ. ಚರ್ಚೆಯಲ್ಲಿ ಭಾಗಿಯಾಗಲ್ಲ. ಮುಸ್ಲಿಮರ ತೋರಿಕೆಗೆ ನಾವು ವಿರೋಧ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಜಂಟಿ ಸಂಸದೀಯ ಸಮಿತಿಯನ್ನು ಸಮಗ್ರ ಅಧ್ಯಯನಕ್ಕಾಗಿ ರಚಿಸಲಾಗಿದೆ. ಖರ್ಗೆ ಅವರು ಗೈರಾಗುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಾಗಿರದಿದ್ದರೆ ಈ ಸಮಿತಿ ಸಭೆಗೆ ಹಾಜರಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಈ ಸಮಿತಿಯಲ್ಲಿ ವಿಚಾರ ವಿನಿಮಯಕ್ಕೆ ಅವಕಾಶವಿದೆ ಎಂದು ಎಐಸಿಸಿ ಅಧ್ಯಕ್ಷರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+