ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜಿಲ್ಲೆಗೆ ಆರ್ ಅಶೋಕ್ ಉಸ್ತುವಾರಿ; ನಮ್ಮ ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ ಎಂದ ಸಿಎಂ

|
Google Oneindia Kannada News

ಮೈಸೂರು,ಜನವರಿ27: ವಿಧಾನಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನ ಬದಲಾಯಿಸಿರುವ ಕುರಿತು ಬಿಜೆಪಿಯಲ್ಲಿ ಬಾರಿ ವಿರೋಧ ಕೇಳಿ ಬಂದಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಮಂಡ್ಯದಲ್ಲಿ ಆರ್ ಅಶೋಕ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಕಾರಣ ಪಕ್ಷದಲ್ಲಿ ಯಾವುದೇ ವಿರೋಧ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚಿರತೆ ಹಾವಳಿ ನಿಯಂತ್ರಣಕ್ಕೆ ರಾಜ್ಯಾದ್ಯಂತ ಟಾಸ್ಕ್ ಫೋರ್ಸ್ ಇದ್ದು, ಸದಾ ಕಾಲ ಕಾರ್ಯನಿರ್ವಹಿಸುತ್ತದೆ. ಚಿರತೆ ದಾಳಿ ಹೆಚ್ಚಾದ್ದರಿಂದ ನಾನೇ ಸಭೆ ನಡೆಸಿ, ಆನೆಗಳ ವಿಚಾರಕ್ಕೆ ಶಾಶ್ವತ ಟಾಸ್ಕ್ ಫೋರ್ಸ್ ರಚಿಸಿ, ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ. ಚಿರತೆ ಹಿಡಿಯಲೂ ಕೂಡ ಅಗತ್ಯ ಮಾನವ ಸಂಪನ್ಮೂಲ, ಪರಿಕರ, ವಾಹನ ನೀಡಲಾಗುವುದು.

Mandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತMandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತ

ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆ ಕರೆದು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯಬೇಕು. ಗ್ರಾಮಸ್ಥರನ್ನೊಳಗೊಂಡ ತಂಡ ರಚಿಸಿ ಅವರಿಗೆ ತರಬೇತಿ ನೀಡುವುದು, ಗಸ್ತು ತಿರುಗುವುದು ಮಾಡಬೇಕು. ಅರಣ್ಯದ ಅಂಚಿನಲ್ಲಿರುವವರಿಗೆ ವಿಶ್ವಾಸ, ಸ್ಥೈರ್ಯ ನೀಡುವ ಕೆಲಸವಾಗಬೇಕು. ಈ ಪ್ರಾಣಿಗಳ ಚಲನವಲನ, ನಡವಳಿಕೆ, ಗುಂಪಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಮಾಹಿತಿ ಗ್ರಾಮದವರಿಗೆ ನೀಡಿದರೆ ಅನುಕೂಲವಾಗುತ್ತದೆ. ಸಂಜೆ ಮೇಲೆ ಹೊರಗೆ ಹೋಗದಂತೆ ಲಿಖಿತ ಮಾಹಿತಿ ನೀಡಬೇಕು. ಚಿರತೆ ಹಾವಳಿಯನ್ನು ನಿಯಂತ್ರಣ ಮಾಡಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದರು.

There Is No Opposition In Our Party To Appoint R Ashok In Charge Of Mandya District Said Bommai

ಇನ್ನೂ ಕಳೆದ ಬಾರಿ ಜನಪರ ಬಜೆಟ್ ನೀಡಿದಂತೆ ಈ ಬಾರಿಯೂ ಜನಪರ ಆಯವ್ಯಯ ನೀಡಲಾಗುವುದು. ಇಡೀ ಕರ್ನಾಟಕವೇ ಬಜೆಟ್ ನಿರೀಕ್ಷೆ ಮಾಡಬಹುದು ಎಂದರು.

ಸಿದ್ದರಾಮಯ್ಯ ನವರು ಮುಖ್ಯ ಮಂತ್ರಿಯಾಗಿ ಶಾದಿಭಾಗ್ಯ ರೂಪಿಸಿದ್ದರು. ಆದರೆ ಶಾದಿಭಾಗ್ಯ ನೀಡಿದ್ದರಿಂದ ಅವರಿಗೆ ಹಾಗೂ ಅವರ ಪಕ್ಷದವರಿಗೆ ದೌರ್ಭಾಗ್ಯ ಉಂಟಾಗಿದೆ. ಶಾದಿಭಾಗ್ಯ ಬೇಕು ಎಂದರೆ ಮುಂದುವರೆಸಿ ನಮ್ಮ ತರಕಾರಿಲ್ಲ ಎಂದರು. ಇನ್ನೂ ಬಿಜೆಪಿ ಚುನಾವಣಾ ತಂತ್ರಗಳು ವಿಭಿನ್ನವಾಗಿದೆ. ಬೇರೆಯವರು ಮಾಡಿದಂತೆ ನಾವು ಮಾಡಬೇಕೆಂದಿಲ್ಲ. ಜೆಡಿಎಸ್ ಅವರ ತಂತ್ರಗಳನ್ನು ಮಾಡಲಿ ಎಂದರು.

ಕಾಂಗ್ರೆಸ್ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಿಣಿಯರಿಗೆ 2000 ರೂ.ಗಳನ್ನು ನೀಡದಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಯಿಸಿದ ಅವರು, ಅವರೇ ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರ ಸ್ಥಿತಿಯ ಅಭಿವ್ಯಕ್ತವಾಗುತ್ತದೆ. ನಾವೇನೂ ಕೇಳಿರಲಿಲ್ಲ. ಮನುಷ್ಯನ ಮನಸ್ಥಿತಿ ಒಳಗಿರುವ ರಾಜಕೀಯ ಸ್ಥಿತಿಯ ಅಭಿವ್ಯಕ್ತಿ ಎಂದರು.

There Is No Opposition In Our Party To Appoint R Ashok In Charge Of Mandya District Said Bommai

ಮುಸ್ಲಿಂ ಮತಗಳನ್ನು ಸೆಳೆಯರಿ ಎಂದು ಪ್ರಧಾನಿಗಳು ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಬೇಕು. ಅಲ್ಪಸಂಖ್ಯಾತರಲ್ಲಿ ಬಡವರು, ಶಿಕ್ಷಣದ ಕೊರತೆ ಇದೆ.ಅವರನ್ನೂ ಕೂಡ ಮುಖ್ಯವಾಹಿನಿಗೆ ತಂದರೆ ಅವರೂ ದೇಶಕ್ಕೆ ಕೊಡುಗೆ ನೀಡುತ್ತಾರೆ. ಸಬ್ ಕೆ ಸಾಥ್, ಸಬ್ ಕಾ ವಿಶ್ವಾಸ್ ಎನ್ನುವುದನ್ನು ನಾವು ಪಾಲಿಸುತ್ತೇವೆ. ಕೆಲವು ಬಿಜೆಪಿ ನಾಯಕರು ಮುಸ್ಲಿಂ ಮತಗಳೇ ಬೇಡ ಎಂದಿರುವ ಬಗ್ಗೆ ಉತ್ತರಿಸಿ ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾರನ್ನೂ ಓಲೈಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಪ್ರಧಾನಮಂತ್ರಿಗಳ ನಿಲುವು ಹಾಗೂ ಅನುಭವದ ಮಾತು ಎಂದರು.

English summary
Mandya District Incharge Minsiter R Ashok; there is no opposition in our party to making R Ashok in charge of Mandya district said basavaraj bommai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X