ಫೋನಿ ಚಂಡಮಾರುತ ರಾಜ್ಯದ ಮೇಲೆ ಪರಿಣಾಮ ಬೀರುವುದೇ?

Recommended Video

      ಒಡಿಶಾಗೆ ಅಪ್ಪಳಿಸಿದ ಫ್ಯಾನಿ ಚಂಡಮಾರುತ | ಇದು ರಾಜ್ಯದ ಮೇಲೂ ಪರಿಣಾಮ ಬೀರುವುದೇ?

      ಬೆಂಗಳೂರು, ಮೇ 3: ಫೋನಿ ಚಂಡಮಾರುತ ಇದೀಗ ಒಡಿಶಾಕ್ಕೆ ಲಗ್ಗೆ ಇಟ್ಟಿದ್ದು 185 ಕೆಎಂಪಿಎಚ್‌ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ.

      ಫೋನಿ ಚಂಡಮಾರುತದಿಂದಾಗಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿತ್ತು. ಈಗ ಚಂಡಮಾರುತ ಒಡಿಶಾ ಕಡೆ ಹೋಗಿರುವುದರಿಂದ ರಾಜ್ಯದಲ್ಲಿ ತೀವ್ರತೆ ಕಡಿಮೆಯಾಗಿದೆ. ಗುರುವಾರ ಸುಬ್ರಹ್ಮಣ್ಯ ದಲ್ಲಿ 20 ಮಿ.ಮೀ, ತಿಪಟೂರಿನಲ್ಲಿ 12 ಮಿ.ಮೀ, ಮಂಡ್ಯದ ಹೆಮ್ಮನಹಳ್ಳಿಯಲ್ಲಿ 8 ಮಿ.ಮೀ ಮಳೆಯಾಗಿದೆ.

      ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇನ್ನು ರಾಜ್ಯದಲ್ಲಿ ಒಣಹವೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

      There is no influence of Fani cyclone in Karnataka

      ಮಳೆ ಕಡಿಮೆಯಾಗಿರುವುದರಿಂದ ಉತ್ತರ ಒಳನಾಡಿನಲ್ಲಿ ತಾಪಮಾನ ಹಿಂದಿನ ದಿನಕ್ಕಿಂತ ಹೆಚ್ಚಾಗಿದೆ. ಬೆಂಗಳೂರಲ್ಲಿ 33 ಡಿಗ್ರಿ ಸೆಲ್ಸಿಯಸ್, ಕಲಬುರ್ಗಿಯಲ್ಲಿ 43.2 ಡಿಗ್ರಿ, ರಾಯಚೂರಿನಲ್ಲಿ 41.5 ಡಿಗ್ರಿ, ವಿಜಯಪುರದಲ್ಲಿ 39 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

      ಬಳ್ಳಾರಿಯಲ್ಲಿ 38 ಡಿಗ್ರಿ, ದಾವಣಗೆರೆಯಲ್ಲಿ 35 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾದ್ಯತೆ ಕಡಿಮೆ ಇದೆ ಒಣಹವೆ ಮುಮದುವರೆಯಲಿದೆ. ಮೋಡಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+