ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ; 20 ಕ್ಕೂ ಹೆಚ್ಚು ಶಾಸಕರ ಜೊತೆ ಜಾರಕಿಹೊಳಿ ಮೀಟಿಂಗ್?: ಎಂ ಬಿ ಪಾಟೀಲ್‌ ಹೇಳಿದ್ದೇನು?

ವಿಜಯಪುರ, ಅಕ್ಟೋಬರ್‌ 17: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ. 20 ಕ್ಕೂ ಹೆಚ್ಚು ಶಾಸಕರ ಜೊತೆಗೆ ಸಚಿವ ಸತೀಶ ಜಾರಕಿಹೋಳಿ ಮೀಟಿಂಗ್ ಮಾಡಲು ಮೈಸೂರಿಗೆ ತೆರಳುತ್ತಿರುವ ವಿಚಾರ ಕೈ ಪಾಳಯದಲ್ಲಿ ಸಂಚಲನ ಸೃಷ್ಠಿಸಿದ್ದು, ಹೈಕಮಾಂಡ್‌ ಸೂಚನೆ ಮೇರೆಗೆ ಈ ಮೀಟಿಂಗ್‌ ಗೆ ಬ್ರೇಕ್‌ ಬಿದಿದ್ದೆ.

ಹೌದು, ಈ ಕುರಿತು ಸಚಿವ ಎಂ ಬಿ ಪಾಟೀಲ್‌ ಮಾಧ್ಯಮಗಳ ಜೊತೆಗೆ ಮಾತನಾಡಿ, ಅದು ಬಂಡಾಯವಲ್ಲ. ಸತೀಶ್ ಜಾರಕಿಹೋಳಿ ನಾವು ಕೂಡಿದ್ದೇವು. ಮೈಸೂರು ದಸರಾಗೆ ಹೋಗುತ್ತಿದ್ದೇವೆ ಎಂದು ನನ್ನನ್ನೂ ಕರೆದರು. ಸುನೀಲ್‌ ಹನುಮುಕ್ಕನವರ ಹಾಗೂ ಇತರರು ಬಂದಿದ್ದರು. ಎಲ್ಲರೂ ಸೇರಿ ಮೈಸೂರು ದಸರಾಗೆ ಹೋಗೋಣ ಎಂದು ಹೇಳಿದರು, ಮೈಸೂರು ದಸರಾಗೆ ಹೋದರೆ ಅದು ಬಂಡಾಯವೇ? ಎಂದು ಪ್ರಶ್ನಿಸಿದ್ದಾರೆ.

minister-mb-patil

ಇನ್ನೂ ಮೊನ್ನೆ ಸಬ್ ಕಮೀಟಿ ಮೀಟಿಂಗ್ ನಲ್ಲಿ ಸತೀಶ ಜಾರಕಿಹೊಳಿ ಮತ್ತು ನಾವು ಚರ್ಚೆ ಮಾಡಿದ್ದೇವೆ. ದಸರಾಗೆ ಹೋದರೆ ಅಸಮಾಧಾನವಾ? ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಇಲ್ಲ. ಬಿಜೆಪಿ ಮತ್ತು ಜನತಾ ದಳದಲ್ಲಿ ಫುಲ್ ಅಸಮಾಧಾನವಿದೆ. ಸತೀಶ ಜಾರಕಿಹೋಳಿ ನನ್ನ ಆತ್ಮೀಯ ಸ್ನೇಹಿತರು. ಮೊನ್ನೆಯೂ ಕೂಡಾ ದಸರಾಗೆ ಹೋಗುತ್ತೇನೆ ಬನ್ನಿ ಎಂದು ಹೇಳಿದ್ದರು. ನಾನು ವಿದೇಶಿ ಪ್ರವಾಸದಲ್ಲಿದ್ದೇ 10- 15 ದಿನ ಜಿಲ್ಲೆಯಲ್ಲಿ ಇರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಬರದ ಕುರಿತು ಮೀಟಿಂಗ್ ಮಾಡಬೇಕಿದೆ. ನೀವು ಹೋಗಿ ಬನ್ನಿ. ನಮಗೆ ದಸರಾದಲ್ಲಿ ಭಾಗಿಯಾಗೋ ಭಾಗ್ಯ ಇಲ್ಲ ಎಂದು ಸತೀಶ್‌ ಜಾರಕಿಹೊಳಿ ಅವರಿಗೆ ತಿಳಿಸಿದ್ದೇ ಎಂದು ಮಾಧ್ಯಮಗಳಿಗೆ ಹೇಳಿದರು.

ಗುತ್ತಿಗೆದಾರರ ನಿವಾಸದಲ್ಲಿ 42 ಕೋಟಿ ಹಣ ಪತ್ತೆಯಾಗಿದ್ದು, ಈ ಹಣ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಗೆ ಬಳಸಲು ಸಂಗ್ರಹಿಸಿ ಇಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪದ ಕುರಿತು ಮಾತನಾಡಿ, ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ನಡೆದ ಐಟಿ ಧಾಳಿಯಲ್ಲಿ ಸಿಕ್ಕ ಹಣ ಬಿಜೆಪಿಯವರು 40% ಕಮಿಷನ್ ಸಂಗ್ರಹದ ಹಣವಿರಬೇಕು ಎಂದು ಎಂ ಬಿ ಪಾಟೀಲ್‌ ವ್ಯಂಗ್ಯವಾಡಿದ್ದಾರೆ.

minister-mb-patil

ಐಟಿ ದಾಳಿಯಲ್ಲಿ ಸಿಕ್ಕ ಹಣ ಗುತ್ತಿಗೆದಾರರಿಗೆ ಸೇರಿದೆ. ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸರಕಾರ ಬಂದ ಬಳಿಕ ನಾವು ಈವರೆಗೆ ಯಾವುದೇ ಟೆಂಡರ್ ಕರೆದಿಲ್ಲ. ಬಹುಶಃ ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ ಅವರ 40 ಪರ್ಸೆಂಟ್ ಕಮಿಷನ್ ನಡೆದಿತ್ತಲ್ಲ. ಅದು ಸ್ಟೋರ್ ಆಗಿತ್ತು. ಅದು ಈಗ ಸಿಕ್ಕಿರಬಹುದು ಎಂಬುದು ನನ್ನ ಅನಸಿಕೆ ಎಂದು ಸಚಿವ ಎಂ ಬಿ ಪಾಟೀಲ್‌ ಹೇಳಿದರು.

ಐಟಿ ದಾಳಿಯಲ್ಲಿ ಸಿಕ್ಕ‌ ಹಣದ ಕುರಿತು ತನಿಖೆಗಾಗಿ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹಿಸಿದ ವಿಚಾರವಾಗಿ ಮಾತನಾಡಿ, ಸದ್ಯ ಐಟಿಯವರು ರೇಡ್ ಮಾಡಿದ್ದಾರೆ. ಅದೇ ರೀತಿ ಆ ಹಣದ ಕುರಿತು ಐಟಿ ಇಲಾಖೆಯವರೇ ತನಿಖೆ ಮಾಡುತ್ತಾರೆ. ನಮ್ಮ ಸರ್ಕಾರ ಯಾವುದೇ ಟೆಂಡರ್ ಕರೆದಿಲ್ಲ. ಬಹುಶಃ ಹಿಂದಿನ ಬಿಜೆಪಿ ಸರಕಾರದ 40 ಪರ್ಸೆಂಟ್ ಕಮಿಷನ್ ಇದೆಯಲ್ಲ. ಅದು ಪಂಚ ರಾಜ್ಯಗಳ ಚುನಾವಣೆಗಾಗಿ ಹೊರಗೆ ಬರುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+