Shakti Scheme: ಸಾರಿಗೆ ಇಲಾಖೆ ಶೀಘ್ರವೇ ಶಕ್ತಿ ಯೋಜನೆಯ ಗುರುತಿನ ಚೀಟಿ ನೀಡುವಂತೆ ಒತ್ತಾಯ
ಬೆಂಗಳೂರು, ಮೇ 22: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲನೆಯದಾಗಿ ಜಾರಿಗೊಳಿಸಿದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒಂದು ವರ್ಷ ಪೂರೈಸುವತ್ತ ಸಾಗುತ್ತಿದೆ. ಕಳೆದ ಒಂದು ವರ್ಷಗಳಿಂದ ರಾಜ್ಯ ಸರ್ಕಾರದ ಈ ಯೋಜನೆ ಯಶಸ್ವಿಯಾಗಿದ್ದು, ಕೋಟ್ಯಂತರ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ.
ರಾಜ್ಯ ಸರ್ಕಾರ ನೀಡಿರುವ ಉಚಿತ ಪ್ರಯಾಣ ಯೋಜನೆ ರಾಜ್ಯ ಮಹಿಳೆಯರಿಗೆ ನೆರವಾಗಿದ್ದು, ಅಂತರ್ ರಾಜ್ಯ ಮಹಿಳೆಯರು ಕೂಡ ಆಧಾರ ಕಾರ್ಡ್ ತೋರಿಸಿ ಪ್ರಯಾಣ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನಡೆಸಲು ಗುರುತಿನ ಚೀಟಿ ನೀಡಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ರಾಜ್ಯಾದ್ಯಂತ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಒಂದು ವರ್ಷದತ್ತ ಹೆಜ್ಜೆ ಹಾಕುತ್ತಿದ್ದೆ. ಆದರೂ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡುವಲ್ಲಿ ವಿಫಲವಾಗಿದೆ. ಏಕೆಂದರೆ ಆಧಾರ ಕಾರ್ಡ್ ಇನ್ನಿತರ ಸರ್ಕಾರಿ ದಾಖಲೆಗಳನ್ನು ತೋರಿಸಿ ಬಸ್ ಪ್ರಯಾಣ ಮಾಡಲು ಅವಕಾಶ ನೀಡಿದೆ. ಈ ರೀತಿಯ ಸನ್ನಿವೇಶದಿಂದ ಸರ್ಕಾರಕ್ಕೆ ಬೋಗಸ್ ಲೆಕ್ಕ ತಲಪಲಿದೆಯಾ? ಎಂಬ ಅನುಮಾನ ಮೂಡಿಸಿದೆ.
ಇನ್ನುಳಿದ ಗ್ಯಾರಂಟಿಗಳಾದ ಉಚಿತ 200 ಯುನಿಟ್ ವಿದ್ಯುತ್, 2000 ರೂ. ಗೃಹಲಕ್ಷ್ಮೀ ಹಣ, ನಿರುದ್ಯೋಗಿ ಯುವಕ-ಯುವತಿಯರಿಗೆ 3000 ರೂ. ಹಣ ಪಡೆಯಲು ಅರ್ಜಿ ಆಹ್ವಾನಿಸಲಾಗಿತ್ತು. ಬೇಕಾದವರು ಅರ್ಜಿ ಹಾಕಿದರು ಬೇಡದವರು ಬಿಟ್ಟರು ಆದರೆ ಸರ್ಕಾರ ಕೆ.ಎಸ್.ಆರ್.ಟಿ.ಸಿ ವಿಷಯದಲ್ಲಿ ಮಾತ್ರ ಆಧಾರ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆ ತೋರಿಸಿ, ಉಚಿತ ಪ್ರಯಾಣ ಮಾಡಬಹುದೆಂದು ಹೇಳಿತು.
ಇದರಿಂದ ಅನುಕೂಲಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧವೇ ಇಲ್ಲದ ರಾಜ್ಯ ಗಡಿ ಜಿಲ್ಲೆಯ ಮಹಿಳೆಯರು ಆಧಾರ ಕಾರ್ಡ್ ತೋರಿಸಿ, ರಾಜರೋಷವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಆದ್ದರಿಂದ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿಯಿಂದ ಗುರುತಿನ ಚೀಟಿ ಪಡೆಯಲು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಅರ್ಜಿ ಸಲ್ಲಿಸಲು ಮೂಲ ದಾಖಲೆಯನ್ನಾಗಿ ರಾಜ್ಯದ ಆಧಾರ ಕಾರ್ಡ್ ಅಪ್‍ಲೋಡ್ ಮಾಡಿದ ತಕ್ಷಣ ವೆಬ್‍ಸೈಟ್‍ನಲ್ಲಿವೇ ಗುರುತಿನ ಚೀಟಿ ಡೌನ್‍ಲೋಡ್ ಮಾಡುವಂತಹ ವ್ಯವಸ್ಥೆಯನ್ನು ಸರ್ಕಾರ ಅಳವಡಿಸಬೇಕು.
ಇದರಿಂದ ಸರ್ಕಾರಕ್ಕೆ ಸಲ್ಲಿಕೆಯಾಗುವ ಭೋಗಸ್ ವರದಿ ತಪ್ಪಿ, ಉಚಿತ ಬಸ್ ಪ್ರಯಾಣ ಬೇಕಿದ್ದ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ ನೀಡುವ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆದುಕೊಳ್ಳತ್ತಾರೆ. ಬೇಡದವರು ಗುರುತಿನ ಚೀಟಿ ಇಲ್ಲದೇ ಹಣ ನೀಡಿ ಪ್ರಯಾಣ ಬೆಳೆಸಬಹುದು. ಕೆ.ಎಸ್.ಆರ್.ಟಿ.ಸಿ ವಿಷಯದಲ್ಲಿ ಸರ್ಕಾರ ಹೆಚ್ಚು ಗಮನಹರಿಸಿ, ಸಾರಿಗೆ ಇಲಾಖೆಯಿಂದ ಉಚಿತ ಬಸ್ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಗುರುತಿನ ಚೀಟಿ ನೀಡುವಂತಹ ಕೆಲಸ ಮಾಡಬೇಕಿದೆ ಎಂದು ವೀರೇಶ ಧೂಪದಮಠ ಎನ್ನುವವರು ಒತ್ತಾಯಿಸಿದ್ದಾರೆ.
-
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ











Click it and Unblock the Notifications