CM Change: ಸಿಎಂ ಕಪ್ ಎಂಬ ದೊಡ್ಡ ಮ್ಯಾಚ್: ಗೂಗ್ಲಿ ಬಾಲ್‌ ಹಾಕಲೇಬೇಕಾಗುತ್ತದೆ ಎಂದ ಸತೀಶ್‌ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್‌ ಅವರು ಹೈಕಮಾಂಡ್‌ ಮುಂದೆ ಪಟ್ಟು ಹಿಡಿದಿದ್ರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದು, ಇತ್ತ ಕೈ ಪಾಳಯದಲ್ಲಿ ಸಿಎಂ ಕಪ್‌ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಅವರು ಗೂಗ್ಲಿ ಬಾಲ್‌ ಹಾಕಬೇಕಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಾತನಾಡಿ, ಸಿಎಂ ಕಪ್‌ ಎಂಬ ದೊಡ್ಡ ಮ್ಯಾಚ್‌ ಬಾಕಿ ಇದೆ. ಆ ರೇಸ್‌ನಲ್ಲಿನಾನಿಲ್ಲ. ಅದು ಯಾರಿಗೆ ಕೊಡಬೇಕು, ಬಿಡಬೇಕು ಎಂಬುದು ದಿಲ್ಲಿಮತ್ತು ರಾಜ್ಯಮಟ್ಟದ ನಾಯಕರಿಗೆ ಬಿಟ್ಟದ್ದು. ನಾನು ಕ್ರಿಕೆಟ್‌ನಲ್ಲಿಉತ್ತಮ ಬ್ಯಾಟಿಂಗ್‌ ಮಾಡುತ್ತೇನೆ. ಅಷ್ಟೆ ಅಲ್ಲ, ಕೆಲವೊಮ್ಮೆ ರಾಜಕೀಯವಾಗಿ ಗೂಗ್ಲಿ ಬಾಲ್‌ ಹಾಕಲೇಬೇಕಾಗುತ್ತದೆ. ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ, ಅವಕಾಶ ಬಂದಾಗ ನೋಡೋಣ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

There is a big match pending the CM Cup Says Satish Jarakiholi

ಬಜೆಟ್‌ ನಂತರ ಅಧಿಕಾರ ಬದಲಾವಣೆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು. ಕೆಪಿಸಿಸಿ ಅಧ್ಯಕ್ಷ ಕಪ್‌ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನೋಡೋಣ, ಇನ್ನೂ ಯಾರನ್ನು ಸಂಪುಟದಿಂದ ಕೈಬಿಡಬೇಕು ಅಂತಿದಾರೆ ಆ ನಿರ್ಧಾರ ಅವರದ್ದು. ಬಜೆಟ್‌ ನಂತರ ಅಧಿಕಾರ ಬದಲಾವಣೆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಐದು ವರ್ಷಕ್ಕೆ ಸಿಎಂ ಆಯ್ಕೆ ಆಗಿರುವುದು. ಅದನ್ನು ನಾವು ಹಲವು ಬಾರಿ ಹೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹಲವು ಬಾರಿ ಹೇಳಿದ್ದಾರೆ. ಮತ್ತೆ ಮತ್ತೆ ಈ ಪ್ರಶ್ನೆ ಚರ್ಚೆಗಳು ಬೇಡ ಈ ರೀತಿಯ ಎಲ್ಲಾ ಚರ್ಚೆಗಳು ನಿಲ್ಲಬೇಕಿದೆ. ಬಜೆಟ್ ನಂತರ ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾನು ಆ ರೀತಿ ಮಾತನಾಡಿಲ್ಲ.ನಾನು ಅಧಿಕಾರ ಹಂಚಿಕೆಯ ನಿರ್ಧಾರ ಮಾಡುವ ಸ್ಥಾನದಲ್ಲೂ ನಾನು ಇಲ್ಲ. ನಾನು ಯಾವ ಸಿಎಂ ರೇಸ್ ನಲ್ಲೂ ಇಲ್ಲ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಬಳ್ಳಾರಿ ಬ್ಯಾನರ್‌ ಗಲಾಟೆ ರಾಜ್ಯ ಸರಕಾರಕ್ಕೆ ಮುಜುಗರ ತರುವ ವಿಚಾರವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಸತೀಶ್‌ ಜಾರಕಿಹೊಳಿ ಅವರು ಮಾತನಾಡಿ, ಅದು ಬಹಳ ಸಣ್ಣ ಘಟನೆ, ಆಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ. ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಅಮಾನತಿಗೆ ಕಾರಣವಾಗಿದೆ. ಪ್ರಸ್ತುತ ಅಲ್ಲಿಯ ವಾತಾವರಣ ತಿಳಿಯಾಗಿದೆ. ಪೊಲೀಸರ ತನಿಖೆ ಬಳಿಕವಷ್ಟೇ ತಪ್ಪಿತಸ್ಥರ ಬಗ್ಗೆ ತಿಳಿಯಲಿದೆ ಎಂದರು.

ಕೇಂದ್ರ ಸರಕಾರ ಮನರೇಗಾವನ್ನು ಬದಲಿಸಿದ್ದು, ಸರಿಯಲ್ಲ. ಇದು ಬಡವರ ವಿರೋಧಿ ಕಾನೂನಾಗಿದೆ. ಯಾವ ಪಂಚಾಯಿತಿಗೆ ಹಣ ಬಿಡುಗಡೆ ಮಾಡಬೇಕೆಂಬ ತೀರ್ಮಾನವನ್ನು ಕೇಂದ್ರ ಹೇಗೆ ಮಾಡಲು ಸಾಧ್ಯ? ದಿಲ್ಲಿಯಲ್ಲಿಕುಳಿತು ಯಾವುದೋ ಪಂಚಾಯಿತಿಗೆ ಹಣ ನೀಡಿದರೆ ಹೇಗೆ? ಮೊದಲು ಪಂಚಾಯಿತಿ ಮಟ್ಟದಲ್ಲಿಅಧಿಕಾರವಿತ್ತು. ಈಗ ದಿಲ್ಲಿ ಕೇಂದ್ರಿತವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+