ಕರ್ನಾಟಕದಲ್ಲಿ ಬಾಲವಿವಾಹ ಪ್ರಕರಣಗಳಲ್ಲಿ ತೀವ್ರ ಇಳಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕವು ಬಾಲವಿವಾಹದ ಪ್ರಮಾಣದಲ್ಲಿ ಹುಡುಗಿಯರಲ್ಲಿ 55% ಮತ್ತು ಹುಡುಗರಲ್ಲಿ 88% ರಷ್ಟು ಭಾರೀ ಇಳಿಕೆಯನ್ನು ದಾಖಲಿಸಿದೆ. ಹೊಸ ವರದಿಯ ಪ್ರಕಾರ, ಕರ್ನಾಟಕದಲ್ಲಿ ಬಾಲವಿವಾಹ ಪ್ರಕರಣಗಳಲ್ಲಿ ತೀವ್ರ ಇಳಿಕೆ ಪ್ರಮಾಣ ಕಂಡುಬರುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಹುಡುಗಿಯರಲ್ಲಿ ಶೇಕಡಾ 55 ಮತ್ತು ಹುಡುಗರಲ್ಲಿ ಶೇಕಡಾ 88ರಷ್ಟು ಭಾರೀ ಇಳಿಕೆಯನ್ನು ದಾಖಲಿಸಲಾಗಿದೆ.
"ಟಿಪ್ಪಿಂಗ್ ಪಾಯಿಂಟ್ ಟು ಜೀರೋ: ಎವಿಡೆನ್ಸ್ ಟುವರ್ಡ್ಸ್ ಎ ಚೈಲ್ಡ್ ಮ್ಯಾರೇಜ್ ಫ್ರೀ ಇಂಡಿಯಾ" ಎಂಬ ಶೀರ್ಷಿಕೆಯ ಈ ವರದಿಯನ್ನು ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಉಲ್ಲೇಖಿಸಿರುವಂತೆ, ರಾಷ್ಟ್ರೀಯ ಮಟ್ಟದಲ್ಲಿ ಬಾಲವಿವಾಹ ಪ್ರಕರಣಗಳಲ್ಲಿ ಹುಡುಗಿಯರಲ್ಲಿ ಶೇಕಡಾ 69 ಮತ್ತು ಹುಡುಗರಲ್ಲಿ ಶೇಕಡಾ 72 ಇಳಿಕೆ ಕಂಡುಬಂದಿದೆ. ಸಮೀಕ್ಷೆ ನಡೆಸಲಾದ ಇತರ ರಾಜ್ಯಗಳಲ್ಲಿ ಅಸ್ಸಾಂ (84%), ಮಹಾರಾಷ್ಟ್ರ ಮತ್ತು ಬಿಹಾರ (ಪ್ರತಿ 70%), ಹಾಗೂ ರಾಜಸ್ಥಾನ (66%) ಸೇರಿವೆ. ಈ ಅಭೂತಪೂರ್ವ ಇಳಿಕೆಗೆ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ನಾಗರಿಕ ಸಮಾಜ ಸಂಸ್ಥೆಗಳ ಕಳೆದ ಮೂರು ವರ್ಷಗಳ ಸಂಯೋಜಿತ ಕಾರ್ಯಾಚರಣೆಯೇ ಕಾರಣವೆಂದು ವರದಿ ಹೇಳಿದೆ.

ಈ ವರದಿಯ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ರಾಜ್ಯಗಳಲ್ಲಿ ಕರ್ನಾಟಕ ಮಾತ್ರವೇ, ಸ್ಥಳೀಯ ಪೊಲೀಸ್ ಠಾಣೆಗಳಿಗೆ (40%) ಹೋಲಿಸಿದಲ್ಲಿ, ಹೆಲ್ಪ್‌ಲೈನ್‌ಗಳು (75%) ಮತ್ತು ಚೈಲ್ಡ್ ವೆಲ್ಫೇರ್ ಸಮಿತಿಗಳ (53%) ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟಿರುವ ಏಕೈಕ ರಾಜ್ಯವಾಗಿದೆ. ಈ ವಿಷಯವು "ವರದಿ ತಂತ್ರಗಳ ಮೇಲೆ ನಂಬಿಕೆ ಮತ್ತು ಅವುಗಳನ್ನು ಬಳಸುವಲ್ಲಿ ಪ್ರತಿಕ್ರಿಯಾತ್ಮಕರ ಅನುಕೂಲತೆಗಳ ನಡುವೆ ಒಂದು ಪ್ರಮುಖ ಸಂಬಂಧ" ವಿದೆ ಎನ್ನುವುದನ್ನು ತೋರಿಸುತ್ತದೆ.
ನಿಷ್ಕರ್ಷೆಗಳು ತಿಳಿಸಿರುವಂತೆ, ಶೇಕಡಾ 92 ಪ್ರತಿಕ್ರಿಯಾತ್ಮಕರು ಜಾಗೃತಿ ಅಭಿಯಾನಗಳನ್ನು ಬಾಲವಿವಾಹ ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಸಾಧನವೆಂದು ಪರಿಗಣಿಸಿದ್ದಾರೆ, ಆದರೆ ಶೇಕಡಾ 50 ಮಂದಿ ಎಫ್‌ಐಆರ್ ಮತ್ತು ಬಂಧನಗಳ ಮೂಲಕ ನಡೆದ ನ್ಯಾಯಾಂಗ ಪ್ರಕ್ರಿಯೆಯನ್ನು ಎರಡನೇ ಪ್ರಮುಖ ಅಂಶವೆಂದು ಹೇಳಿದ್ದಾರೆ. ಶೇಕಡಾ 99 ಪ್ರತಿಕ್ರಿಯಾತ್ಮಕರು ಭಾರತ ಸರ್ಕಾರದ ಬಾಲ ವಿವಾಹ ಮುಕ್ತ ಭಾರತ ಅಭಿಯಾನದ ಬಗ್ಗೆ ನೋಡಿದ ಅಥವಾ ಕೇಳಿದ ಅನುಭವ ಹೊಂದಿದ್ದರು, ಮುಖ್ಯವಾಗಿ ಎನ್‌ಜಿಒ ಅಭಿಯಾನಗಳು, ಶಾಲೆಗಳು ಮತ್ತು ಪಂಚಾಯಿತಿಗಳ ಮೂಲಕ ಎನ್ನುವ ಅಂಶವನ್ನು ಸಹ ಅಧ್ಯಯನವು ತಿಳಿಸಿದೆ.
ಈ ವರದಿಯನ್ನು ಸೆಂಟರ್ ಫಾರ್ ಲೀಗಲ್ ಆಕ್ಷನ್ ಅಂಡ್ ಬಿಹೇವಿಯರ್ ಚೇಂಜ್ ಫಾರ್ ಚಿಲ್ಡ್ರನ್ (C-LAB) ಸಿದ್ಧಪಡಿಸಿದ್ದು, ಇದು ಜೆಆರ್‌ಸಿ (JRC)ಯ ಸಹಯೋಗಿ ಇಂಡಿಯಾ ಚೈಲ್ಡ್ ಪ್ರೊಟೆಕ್ಷನ್ ಅವರ ಒಂದು ಉಪಕ್ರಮವಾಗಿದೆ. ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್, 250 ಕ್ಕೂ ಹೆಚ್ಚು ಎನ್‌ಜಿಒಗಳ ಅತಿದೊಡ್ಡ ಜಾಲವಾಗಿದ್ದು, ಕರ್ನಾಟಕದ 14 ಜಿಲ್ಲೆಗಳಲ್ಲಿ ಏಳು ಎನ್‌ಜಿಒ ಸಹಭಾಗಿಗಳೊಂದಿಗೆ ಬಾಲಸಂರಕ್ಷಣೆಯ ಕೆಲಸವನ್ನು ಮಾಡುತ್ತಿದೆ.
ಈ ವರದಿಯಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡ ಕ್ರಮಗಳಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDOs) ಮದುವೆ ನೋಂದಣಿ ಮಾಡುವ ಹಕ್ಕು ನೀಡಿರುವುದನ್ನು ಪ್ರಸ್ತಾಪಿಸಿದ್ದು, ಇದರಿಂದ ಈ ಇಳಿಕೆಯಲ್ಲಿ ಅದು ಮಹತ್ತರವಾದ ಪಾತ್ರ ವಹಿಸಿದೆ ಎನ್ನುವುದನ್ನು ವರದಿ ಮಾಡಿದೆ. ವರದಿಯಲ್ಲಿ ತಿಳಿಸಿರುವಂತೆ, "PDOಗಳು ಗ್ರಾಮಸ್ಥರಿಗೆ ಹತ್ತಿರವಾಗಿಯೂ ಪರಿಚಿತರಾಗಿಯೂ ಇರುವುದರಿಂದ, ಈ ವಿಷಯದಲ್ಲಿ ಜಾಗೃತಿ ಮೂಡಿಸುವುದು ಅವರಿಗೆ ಸುಲಭವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ 2021ರಲ್ಲಿ ರಾಜ್ಯದಲ್ಲಿ 2000 ಬಾಲವಿವಾಹ ಪ್ರಕರಣಗಳನ್ನು ತಡೆಗಟ್ಟಲಾಯಿತು." ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ, ಬಾಲವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ, 2005ಕ್ಕೆ ಅನುಮೋದನೆ ನೀಡಿದೆ. ಇದರ ಪ್ರಕಾರ, ಅಪ್ರಾಪ್ತರ ನಿಶ್ಚಿತಾರ್ಥವನ್ನೂ ಅಪರಾಧವೆಂದು ಪರಿಗಣಿಸಲಾಗಿದೆ.
ಈ ವರದಿಯನ್ನು ನ್ಯೂಯಾರ್ಕ್‌ನಲ್ಲಿರುವ ಸಂಯುಕ್ತ ರಾಷ್ಟ್ರ ಸಾಮಾನ್ಯ ಸಭೆಯ ಒಂದು ಸೈಡ್ ಈವೆಂಟ್ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಐದು ರಾಜ್ಯಗಳ 757 ಗ್ರಾಮಗಳಿಂದ ಸ್ಥಳದಲ್ಲಿ ಸಂಗ್ರಹಿಸಿದ ಡೇಟಾದ ಮೇಲೆ ಆಧಾರಿತವಾಗಿದೆ. ಈ ರಾಜ್ಯಗಳನ್ನು ಪ್ರಾದೇಶಿಕವಾಗಿ ಆಯ್ಕೆ ಮಾಡಲಾಗಿದ್ದು, ಮಲ್ಟಿ-ಸ್ಟೇಜ್ ಸ್ಟ್ರಾಟಿಫೈಡ್ ರ್ಯಾಂಡಮ್ ಸ್ಯಾಂಪ್ಲಿಂಗ್ ವಿಧಾನವನ್ನು ಅನುಸರಿಸಲಾಗಿದೆ. ಕರ್ನಾಟಕದಲ್ಲಿ 151 ಗ್ರಾಮಗಳ ಸಮೀಕ್ಷೆ ನಡೆಸಲಾಗಿದ್ದು, ಅಲ್ಲಿ ಆಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು, ಸಹಾಯಕ ನರ್ಸ್ ಮಿಡ್ವೈವ್ಸ್ (ANMs), ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ (PRIs) ಸದಸ್ಯರು ಮುಂತಾದ ಮುಂಚೂಣಿ ಸೇವಾ ಪೂರೈಕೆದಾರರನ್ನು ಒಳಗೊಂಡಿರುತ್ತದೆ.
ಕರ್ನಾಟಕದ ಬಾಲವಿವಾಹ ನಿರ್ಮೂಲನೆ ಹೋರಾಟದಲ್ಲಿ ರಾಜ್ಯವು ಕೈಗೊಂಡಿರುವ ಮುಂಚೂಣಿ ಪಾತ್ರವನ್ನು ಶ್ಲಾಘಿಸುತ್ತಾ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ನ ರಾಷ್ಟ್ರೀಯ ಸಂಯೋಜಕ ರವಿ ಕಾಂತ್ ಹೇಳಿದರು: "ಬಾಲವಿವಾಹ ಪ್ರಕರಣಗಳಲ್ಲಿ ನಿಶ್ಚಿತಾರ್ಥವನ್ನೇ ದಂಡನೀಯ ಅಪರಾಧವೆಂದು ಘೋಷಿಸುವ ಮೂಲಕ ಕರ್ನಾಟಕ ಸರ್ಕಾರವು ಸಂಪೂರ್ಣ ಬಾಲಸಂರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ. ಶತಮಾನಗಳಿಂದ ಮಕ್ಕಳ ವಿರುದ್ಧ ನಡೆಯುತ್ತಿರುವ ಈ ಅಪರಾಧವನ್ನು ಮುಕ್ತಗೊಳಿಸಲು ಇಂತಹ ಕಟ್ಟುನಿಟ್ಟಿನ ಕ್ರಮಗಳು ಅತ್ಯಂತ ಅಗತ್ಯ. ಈಗ ರಾಜ್ಯವು ತನ್ನ ಕಾನೂನು ಜಾರಿಗೆ ತರುವ ಸಂಸ್ಥೆಗಳು ನಿರ್ಣಾಯಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಬೇಕು. ಸಮುದಾಯಗಳು ಮತ್ತು ಅಧಿಕಾರಿಗಳು ಪರಸ್ಪರ ಸಂಪೂರ್ಣ ನಂಬಿಕೆ ಮತ್ತು ಸಮನ್ವಯತೆಯಿಂದ ಕೆಲಸ ಮಾಡಿದರೆ, ಕರ್ನಾಟಕದಿಂದ ಬಾಲವಿವಾಹವನ್ನು ಸಂಪೂರ್ಣವಾಗಿ ಅಳಿಸಿಹಾಕಬಹುದು.
ಈ ಅಧ್ಯಯನದಲ್ಲಿ ತಿಳಿದುಬಂದಿರುವುದೇನೆಂದರೆ, ಸಾಮಾಜಿಕ ಕಲಂಕದ ಭಯ (79%) ಹಾಗೂ ಜಾಗೃತಿಯ ಕೊರತೆ (62%) ಇವು ಜನರನ್ನು ಬಾಲವಿವಾಹ ಪ್ರಕರಣಗಳನ್ನು ವರದಿ ಮಾಡುವುದರಿಂದ ತಡೆಗಟ್ಟುವ ಎರಡು ಪ್ರಮುಖ ಅಡ್ಡಿಗಳಾಗಿವೆ. ಜನಗಣತಿ 2011 ಪ್ರಕಾರ, 4.8 ಲಕ್ಷ ಮಕ್ಕಳ ವಿವಾಹವು ಅವರ ಕಾನೂನುಬದ್ಧ ವಯಸ್ಸಿಗೆ ಮುಂಚೆಯೇ ನಡೆದಿತ್ತು. ಆದಾಗ್ಯೂ, 2019-22ರ ಅವಧಿಯಲ್ಲಿ ಕೇವಲ 783 ಬಾಲವಿವಾಹ ಪ್ರಕರಣಗಳು ಮಾತ್ರ ವರದಿಯಾಗಿವೆ, ಇದು ಕರ್ನಾಟಕದಲ್ಲಿ ಇಂತಹ ಪ್ರಕರಣಗಳನ್ನು ವರದಿ ಮಾಡುವಲ್ಲಿ ಇನ್ನೂ ಹಿಂಜರಿಕೆ ಇರುವುದನ್ನು ತೋರಿಸುತ್ತದೆ.
ಮುಂದುವರೆದು ವರದಿಯಲ್ಲಿ ಮುಂದುವರಿಸಿ ತಿಳಿಸಿರುವುದೇನೆಂದರೆ, ಕರ್ನಾಟಕದಲ್ಲಿ ಶೇಕಡಾ 100 ಪ್ರತಿಕ್ರಿಯಾತ್ಮಕರು ಬಾಲವಿವಾಹ ಮುಕ್ತ ಭಾರತ ಅಭಿಯಾನದ ಸಂದರ್ಭದಲ್ಲಿ ಬಾಲವಿವಾಹದ ವಿರುದ್ಧ ಶಪಥ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ, ಶೇಕಡಾ 78 ಮಂದಿ ಈ ಅಭಿಯಾನ ಮತ್ತು ಶಪಥದಲ್ಲಿ ಎನ್‌ಜಿಒಗಳನ್ನು ಮುಖ್ಯ ಸಹಯೋಗಿಗಳೆಂದು ಗುರುತಿಸಿದ್ದಾರೆ.
ಈ ವರದಿಯ ಪ್ರಮುಖ ಶಿಫಾರಸುಗಳಲ್ಲಿ, ಬಾಲವಿವಾಹ ಕಾನೂನಿನ ಕಟ್ಟುನಿಟ್ಟಾದ ಜಾರಿ, ಉತ್ತಮ ವರದಿ ವ್ಯವಸ್ಥೆಗಳು, ಕಡ್ಡಾಯ ವಿವಾಹ ನೋಂದಣಿ, ಹಾಗೆಯೇ 2030ರೊಳಗೆ ಬಾಲವಿವಾಹ ನಿರ್ಮೂಲನೆಗಾಗಿ "ಬಾಲವಿವಾಹ ಮುಕ್ತ ಭಾರತ" ಪೋರ್ಟಲ್ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಸೇರಿದೆ. ಅದೇ ರೀತಿ, ವರದಿಯು ರಾಷ್ಟ್ರೀಯ ಬಾಲವಿವಾಹ ವಿರೋಧ ದಿನವನ್ನು ಘೋಷಿಸಲು ಶಿಫಾರಸು ಮಾಡಿದ್ದು, ಇದರಿಂದ ಬಾಲವಿವಾಹ ಮುಕ್ತ ಭಾರತಕ್ಕೆ ಹೆಚ್ಚಿನ ಬೆಂಬಲವನ್ನು ಸಂಘಟಿತಗೊಳಿಸಬಹುದಾಗಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications