ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್ ಮೇಲೆ ಭರವಸೆಗಳಿಲ್ಲ.ಈ ಬಜೆಟ್ ಬಿಜೆಪಿ ಬಚಾವ್, ಬೊಮ್ಮಾಯಿ ಬಚಾವ್ : ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ ಜನಾದ್ರೋಹ ಜಾತ್ರೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

|
Google Oneindia Kannada News

ಕಲಬುರ್ಗಿ, ಫೆಬ್ರವರಿ2: ಮುಂಬರುವ ರಾಜ್ಯ ಬಜೆಟ್ ಮೇಲೆ ಭರವಸೆಗಳಿಲ್ಲ. ಈ ಬಜೆಟ್ ಕೇವಲ ಬಿಜೆಪಿ ಬಚಾವ್, ಬೊಮ್ಮಾಯಿ ಬಚಾವ್ ಬಜೆಟ್ ಆಗಿರುತ್ತದೆಯೇ ವಿನಃ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದು ಮಾಜಿ ಮಂತ್ರಿ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ಆಗಲಿ, ರಾಜ್ಯ ಬಜೆಟ್ ಆಗಲಿ ಎಲ್ಲವೂ ಬಡ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಕನ್ನಡಿಗರ ವಿರೋಧಿ ಬಜೆಟ್ ಆಗಿದೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ ಜನಾದ್ರೋಹ ಜಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ

ಬಿಜೆಪಿ ಸರ್ಕಾರ 40% ಕಮಿಷನ್ ಪಡೆಯುವುದರಲ್ಲಿ ಇರುವ ಆಸಕ್ತಿಯಲ್ಲಿ ಅರ್ಧದಷ್ಟು ಕಾರ್ಯಕ್ರಮ ಅನುಷ್ಠಾನಕ್ಕೆ ತರುವುದರಲ್ಲಿ ತೋರಿಸಿದ್ದರೆ ಜನರ ಪ್ರೀತಿಗೆ ಪಾತ್ರರಾಗುತ್ತಿದ್ದಿರಿ. ಬಿಜೆಪಿಯ ವರದಿ, ವಿಶ್ಲೇಷಣಾ ವರದಿಗಳಲ್ಲಿ ಈ ಸರ್ಕಾರ ತಾನು ಕೊಟ್ಟ ಭರವಸೆಗಳಲ್ಲಿ ಶೇ.10ರಷ್ಟು ಭರವಸೆ ಈಡೇರಿಸಿಲ್ಲ ಎಂದು ಹೇಳುತ್ತಿಲ್ಲ. ಇವರು ಕಾಂಗ್ರೆಸ್ ಬಗ್ಗೆ ಯಾಕೆ ಮಾತನಾಡುತ್ತಾರೆ. ಇವರು ಟೀಕೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆ ಏನು ಎಂದು ಹೇಳಲಿ.

There Are No Expectations On The State Budget Said Priyank kharge

ಬಿಜೆಪಿಯವರು ಪ್ರಧಾನಿ ಮೋದಿ, ಜೆ.ಪಿ ನಡ್ಡಾ ಸೇರಿದಂತೆ ಯಾರನ್ನೇ ಕರೆಸಿ ವಿಯಜ ಸಂಕಲ್ಪ ಯಾತ್ರೆ ಮಾಡಿದರೂ ಅದು ಕನಸಾಗಿಯೇ ಉಳಿಯುತ್ತದೆಯೇ ಹೊರತು ನನಸಾಗುವುದಿಲ್ಲ. ಡಬಲ್ ಇಂಜಿನ ಸರ್ಕಾರದ ಡಬಲ್ ದೋಖಾ ಬಗ್ಗೆ ಕನ್ನಡಿಗರು ಎಚ್ಛೆತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನ ಬಂಡಲ್ ಜನತಾ ಪಕ್ಷಕ್ಕೆ ಪಾಠ ಕಲಿಸಿ ಮನೆಗೆ ಕಳಿಸುವ ಅಭಿಯಾನವನ್ನು ಜನ ಆಗಲೇ ಆರಂಭಿಸಿದ್ದಾರೆ. ಜನ 40% ಕಮಿಷನ್, ಸುಳ್ಲು ಭರವಸೆ, ನಿಮ್ಮ ಆಡಳಿತ ವೈಖರಿ, ಯುಪಿ ಮಾದರಿ ಅಭಿವೃದ್ಧಿ ಎಲ್ಲದರಿಂದ ಬೇಸತ್ತು ಹೋಗಿದ್ದಾರೆ. ನಮಗೆ ಯುಪಿ ಮಾಡೆಲ್ ಬೇಡ. ಯುಪಿಯವರು ಇಲ್ಲಿಗೆ ಉದ್ಯೋಗ ಹರಸಿ ಬರುತ್ತಾರೆಯೇ ಹೊರತು, ಕನ್ನಡಿಗರು ಉದ್ಯೋಗ ಹರಸಿ ಯುಪಿಗೆ ಹೋಗುವುದಿಲ್ಲ ಎಂದರು.

ಕೇವಲ ಬೊಗಳೆ ಮಾತು ಕೊಟ್ಟು ಬಿಜೆಪಿ ಭರವಸೆ ಎಂಬ ಪ್ರಚಾರವನ್ನು ಮಾಡುತ್ತಿದ್ದಾರೆ. ಇನ್ನು ರಾಜ್ಯ ಬಜೆಟ್ ಸಮೀಪಿಸುತ್ತಿದ್ದು, ಇದರಲ್ಲಿ ಕಳೆದ ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಕೂಡ ಇವರಿಂದ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇವರು ಕಳೆದ ಬಜೆಟ್ ನಲ್ಲಿ ಕೇವಲ ಶೇ.53ರಷ್ಟು ಕಾರ್ಯಕ್ರಮ ಮಾತ್ರ ಜಾರಿಗೊಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಇದು ಕಾಂಗ್ರೆಸ್ ವರದಿಯಲ್ಲ. ಮುಖ್ಯಮಂತ್ರಿಗಳ ಸಭೆಯ ವರದಿಯಾಗಿದೆ. ಇದರಲ್ಲಿ ಬೊಮ್ಮಾಯಿ ಅವರು 2.65 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ 391 ಘೋಷಣೆಗಳನ್ನು ಮಾಡಿದ್ದು, ಆ ಪೈಕಿ 52 ನೀತಿಗಳ ಘೋಷಣೆಯಾಗಿದ್ದು, ಉಳಿದ 339 ಕಾರ್ಯರೂಪ ಯೋಜನಾ ಘೋಷಣೆಗಳಾಗಿವೆ. ಇದರಲ್ಲಿ 207 ಸರ್ಕಾರದ ಆದೇಶವಾಗಿದೆ. ಉಳಿದ 132 ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕಿದೆ.

There Are No Expectations On The State Budget Said Priyank kharge

ನಾವು ದಿನನಿತ್ಯ ಬಿಜೆಪಿಯವರಿಗೆ ಅವರು ಕೊಟ್ಟ ಯೋಜನೆಗಳ ಬಗ್ಗೆ ನಿಮ್ಮ ಬಳಿ ಇದೆಯಾ ಉತ್ತರ ಎಂಬ ಅಭಿಯಾನದ ಮೂಲಕ ಪ್ರಶ್ನೆ ಕೇಳುತ್ತಲೇ ಇದ್ದೇವೆ. ಇದುವರೆಗೂ ಯಾವುದಕ್ಕೂ ಉತ್ತರ ನೀಡಿಲ್ಲ. 2013ರಲ್ಲಿ ನಮ್ಮ ಪಕ್ಷ 165 ಭರವಸೆಗಳನ್ನು ನೀಡಿದ್ದು, 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿಯವರು ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದ್ದಾರೆ. ಬಿಜೆಪಿಯವರು 2018ರಲ್ಲಿ ಕೊಟ್ಟ ಭರವಸೆ ನೋಡಿದರೆ ಬಿಜೆಪಿ ಎಂದರೆ ಬಂಡಲ್ ಜನತಾ ಪಕ್ಷ ಎಂದು ಸಾಬೀತಾಗುತ್ತದೆ. ಬಿಜೆಪಿ ತಾನು ಕೊಟ್ಟ 600 ಭರವಸೆಗಳಲ್ಲಿ ಶೇ.10ರಷ್ಟು ಈಡೇರಿಸಲು ಇವರಿಗೆ ಸಾಧ್ಯವಾಗಿಲ್ಲ. ಇದು ಅವರ ಯೋಗ್ಯತೆ.

ಕೇಂದ್ರ ಈ ಬಜೆಟ್ ಅನ್ನು ಅವಲೋಕಿಸಿದರೆ, ಕಾರ್ಮಿಕ, ರೈತ, ಬಡವ, ಮಹಿಳೆ, ಅಲ್ಪಸಂಖ್ಯಾತರು, ದಲಿತರ ವಿರೋಧಿ ಬಜೆಟ್ ಆಗಿದೆ. ನಿನ್ನೆ ವಿತ್ತ ಸಚಿವರ ಭಾಷಣ ಗಮನಿಸಿದರೆ, ಅವರು ಕಾರ್ಮಿಕರ ಬಗ್ಗೆ ಮಾತೇ ಆಡಿಲ್ಲ. ಕಾರ್ಮಿಕ ಇಲಾಖೆಗೆ ಬಜೆಟ್ ನ ಶೇ.0.1ರಷ್ಟು ಅನುದಾನ ನೀಡಿದ್ದಾರೆ. ನೌಕರರ ಪಿಂಚಣಿ ಯೋಜನೆ ಕಳೆದ ವರ್ಷ 18,478 ಕೋಟಿ ಇತ್ತು. ಈ ವರ್ಷ 9160 ಅನುದಾನ ನೀಡಲಾಗಿದೆ. ಇದು ಕಾರ್ಮಿಕ ಪರವಾದ ಬಜೆಟ್ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

English summary
state budget 2023; There are no expectations on the state budget said former Minister Priyank kharge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X