ರಾಷ್ಟ್ರಪತಿಗಳ ಟಿಪ್ಪು ಗುಣಗಾನದ ಹಿಂದಿನ ಸತ್ಯ ಆರ್.ಟಿ.ಐನಲ್ಲಿ ಬಹಿರಂಗ
ಬೆಂಗಳೂರು, ಡಿಸೆಂಬರ್ 2: ವಿಧಾನಸಭೆ ವಜ್ರಮಹೋತ್ಸವದ ಅಂಗವಾಗಿ ಅಕ್ಟೋಬರ್ 25ರಂದು ನಡೆದ ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿದ್ದರು.
ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯ ಸರಕಾರವೇ ಈ ಭಾಷಣ ಬರೆದುಕೊಟ್ಟಿದೆ ಎಂಬಲ್ಲಿವರೆಗೆ ಆರೋಪಗಳು ಕೇಳಿ ಬಂದಿದ್ದವು.

ಈ ಕುರಿತು ಮಾಹಿತಿ ಕೋರಿ ಪಿ. ಆದಿತ್ಯ ನಾರಾಯಣ್ ಎನ್ನುವವರು ಆರ್.ಟಿ.ಐ ಸಲ್ಲಿಸಿದ್ದರು. ಈ ಭಾಷಣ ಬರೆದುಕೊಟ್ಟಿದ್ದು ಯಾರು ಎಂದು ಅವರು ಮಾಹಿತಿ ಹಕ್ಕು ಕಾಯ್ದೆ ಮೂಲಕ ಪ್ರಶ್ನಿಸಿದ್ದರು. ಇದಕ್ಕೀಗ ಉತ್ತರ ಸಿಕ್ಕಿದ್ದು ಭಾಷಣದ ಹಿಂದಿನ ಸತ್ಯ ಬಹಿರಂಗವಾಗಿದೆ.
ವಜ್ರ ಮಹೋತ್ಸವದ ಭಾಷಣಕ್ಕೆ ಬೇಕಾದ ಹೆಚ್ಚಿನ ಮಾಹಿತಿಗಳನ್ನು ವಿಧಾನಸಭೆ ಕಾರ್ಯಾಲಯದಿಂದಲೇ ಸಂಗ್ರಹಿಸಲಾಗಿತ್ತು ಎಂದು ಆರ್.ಟಿ.ಐ ಪ್ರಶ್ನೆ ರಾಷ್ಟ್ರಪತಿ ಕಾರ್ಯಾಲಯ ಉತ್ತರ ನೀಡಿದೆ.












Click it and Unblock the Notifications