Karnataka BJP: ಮಜವಾದಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ ಎಂದ ಬಿಜೆಪಿ
ಬೆಂಗಳೂರು,ಡಿಸೆಂಬರ್ 30: ರಾಜ್ಯದ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಿಂದ ಬೇಸತ್ತು ಎಲ್ಲಾ ವರ್ಗದ ಜನರು ಇಡುತ್ತಿರುವ ಬೇಡಿಕೆಗಳನ್ನ ಬಿಜೆಪಿ ಟ್ವೀಟ್ ಮೂಲಕ ತಿಳಿಸಿದ್ದು, ಮಜವಾದಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ ಎಂದು ಬಿಜೆಪಿ ಆಗ್ರಹಿಸಿದೆ.

ರಾಜ್ಯದ @INCKarnataka ಸರ್ಕಾರದ ತುಘಲಕ್ ದರ್ಬಾರಿನಿಂದ ಬೇಸತ್ತು ಎಲ್ಲಾ ವರ್ಗದ ಜನರು ಇಡುತ್ತಿರುವ ಬೇಡಿಕೆಗಳು:
— BJP Karnataka (@BJP4Karnataka) December 30, 2023
▪️ನಾನು ನಿರುದ್ಯೋಗಿ ಉದ್ಯೋಗ ಕೊಡಿ
▪️ನಾನು ಗೃಹಿಣಿ ಗೃಹ ಲಕ್ಷ್ಮಿ ಹಣ ಕೊಡಿ
▪️ನಾನು ರೈತ ಬರ ಪರಿಹಾರ ಕೊಡಿ
▪️ನಾನು ಬಡವ ಅನ್ನಭಾಗ್ಯ ಅಕ್ಕಿ ಕೊಡಿ
▪️ನಾನು ಅತಿಥಿ ಉಪನ್ಯಾಸಕ ಸಂಬಳ ಕೊಡಿ
▪️ನಾನು ನೇಕಾರ ವಿದ್ಯುತ್ ಕೊಡಿ…
ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ
▪️ನಾನು ನಿರುದ್ಯೋಗಿ ಉದ್ಯೋಗ ಕೊಡಿ
▪️ನಾನು ಗೃಹಿಣಿ ಗೃಹ ಲಕ್ಷ್ಮಿ ಹಣ ಕೊಡಿ
▪️ನಾನು ರೈತ ಬರ ಪರಿಹಾರ ಕೊಡಿ
▪️ನಾನು ಬಡವ ಅನ್ನಭಾಗ್ಯ ಅಕ್ಕಿ ಕೊಡಿ
▪️ನಾನು ಅತಿಥಿ ಉಪನ್ಯಾಸಕ ಸಂಬಳ ಕೊಡಿ
▪️ನಾನು ನೇಕಾರ ವಿದ್ಯುತ್ ಕೊಡಿ
▪️ನಾನು ದಲಿತ ಅವಕಾಶ ಕೊಡಿ
▪️ನಾನು ವಿದ್ಯಾರ್ಥಿ ಟಾಯ್ಲೆಟ್‌ನಿಂದ ಮುಕ್ತಿ ಕೊಡಿ
ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ಸ್ವಯಂಘೋಷಿತ ಸರಳ ಸಜ್ಜನಿಕೆಯ ಸಚಿವ ಸತೀಶ್ ಜಾರಕಿಹೊಳಿ ಅವರು, ತಮ್ಮ ಕಚೇರಿ ನವೀಕರಣಕ್ಕೆ ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಕೋಟಿಗಟ್ಟಲೆ ಪೋಲು ಮಾಡುತ್ತಿದ್ದಾರೆ. "ದುರ್ಭಿಕ್ಷದಲ್ಲಿ ಮಗ ಊಟ ಮಾಡುವುದನ್ನು ಕಲಿತ" ಅನ್ನುವ ಹಾಗೆ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಭೀಕರ ಬರಗಾಲದಲ್ಲಿಯೇ ಅವರ ಕಚೇರಿಗಳು ಫಳ ಫಳ ಹೊಳೆಯಬೇಕಂತೆ!
ಬರಗಾಲದ ಕಾರಣ ಹಂಪಿ ಉತ್ಸವ ಸೇರಿದಂತೆ ಹಲವಾರು ಉತ್ಸವಗಳನ್ನು ರದ್ದು ಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸಚಿವರು ಕಚೇರಿಗಳ ನವೀಕರಣದ ಹೆಸರಿನಲ್ಲಿ ಸರ್ಕಾರದ ಕೋಟಿ ಕೋಟಿ ಹಣವನ್ನು ಪೋಲು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದೆ.












Click it and Unblock the Notifications