ವಿಜಯಪುರ: ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ, ತಪ್ಪಿದ ದುರಂತ

By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಅಕ್ಟೋಬರ್ 10 : ಖಾಸಗಿ ಶಾಲಾ ವಾಹನವೊಂದು ರಸ್ತೆಯ ಇಳಿಜಾರಿನಿಂದ ತನ್ನಿಂತಾನೆ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಘಟನೆ ವಿಜಯಪುರ ನಗರದಲ್ಲಿ ಸೋಮವಾರ ನಡೆದಿದೆ.

ಆದರ್ಶನಗರ ಸೇವಾಲಾಲ್ ಹಾಗೂ ದುರ್ಗಾ ದೇವಸ್ಥಾನದ ಬಳಿ ಎಕ್ಸ್ ಲೆಂಟ್​​​ ಕೋಚಿಂಗ್ ಸೆಂಟರ್​ ಸ್ಕೂಲ್​​ಗೆ ಶಾಲಾ ಬಸ್ ನ್ನು ನಿಲ್ಲಿಸಲಾಗಿತ್ತು. ಈ ವೇಳೆ ಬಸ್ ತನ್ನಿಂತಾನೆ ಮುಂದಕ್ಕೆ ಚಲಿಸಿ ಎದುರಿಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿ ಯಾರು ಇಲ್ಲದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

The private school van hits to electric pole in Vijayapura

ಇಳಿಜಾರು ಇದ್ದಿದ್ದರಿಂದ ಬಸ್​ ತನ್ನಿಂತಾನೆ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾದ ಪರಿಣಾಮ ಕಂಬ ಮುರಿದು ಬಸ್ ಮೇಲೆಯೇ ಬಿದ್ದಿದೆ.

ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವ ಅಧಿಕಾರಿಗಳು ಆಗಮಿಸದೇ ನಿರ್ಲಕ್ಷ್ಯವಹಿಸಿ ತಡವಾಗಿ ಬಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The private bus collided with an electric pole in Vijayapura. The incident took place on Monday at Aadarsh Nagar, Vijayapura.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ