ಲಕ್ಕುಂಡಿ ಉತ್ಸವ : ಐದು ಚಿತ್ರಗಳು, ಒಂದು ವರದಿ

Posted By: Ramesh
Subscribe to Oneindia Kannada

ಲಕ್ಕುಂಡಿ, ಫೆಬ್ರವರಿ, 13 : ಎರಡು ದಿನಗಳ ಕಾಲ ನಡೆದ ಲಕ್ಕುಂಡಿ ಉತ್ಸವ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿದೆ. ಈ ಉತ್ಸವದಲ್ಲಿ ಸಂಗೀತ, ನೃತ್ಯ, ತೊಗಲು ಗೊಂಬೆಯಾಟ, ಮಲ್ಲಗಂಬ, ಜೋಗುತಿ ನೃತ್ಯ ಸೇರಿದಂತೆ ವಿವಿಧ ಜಾನಪದ ಕಾರ್ಯಕ್ರಮಗಳು ಜನರ ಆಕರ್ಷಣೆಯಾಗಿದ್ದವು.

ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ನಡೆದ ಲಕ್ಕುಂಡಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಲಕ್ಕುಂಡಿಯ ಐತಿಹಾಸಿಕ ಸಂಪತ್ತಿನ ಪರಿಚಯ ನೀಡುವ ಪ್ರೊ. ಗೀತಾಂಜಲಿರಾವ ಬರೆದ 'ಲಕ್ಕುಂಡಿ ಡಿಸ್ಕವರಿಂಗ್ ಆಫ್ ಗ್ಲೋರಿಯಸ್ ಹೆರಿಟೇಜ್' ಹಾಗೂ ಜಿಲ್ಲಾಡಳಿತ ಹೊರತಂದ ಮಂಜುನಾಥ್ ಸುಳ್ಳೊಳ್ಳಿ ಅವರು ಸಂಪಾದಿಸಿದ ಶಿಲ್ಪ ಕಾಶಿ ಲಕ್ಕುಂಡಿ ಪುಸ್ತಕಗಳನ್ನು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಬಿಡುಗಡೆ ಮಾಡಿದರು.[ಹಂಪಿಗಿಂತ ಕಡಿಮೆಯಿಲ್ಲದ ಲಕ್ಕುಂಡಿ ಆಗುತ್ತಿದೆ ಕೊಂಪೆ!]

ಬಳಿಕ ಮಾತನಾಡಿದ ಅವರು, "ಆಧುನಿಕ ತಂತ್ರಜ್ಞಾನದಿಂದ ಕಟ್ಟಲಾಗದ ಬೆಣ್ಣೆಯಲ್ಲೂ ಕೂಡಾ ಕಲೆಯನ್ನು ಅರಳಿಸಲಾಗದ ಐತಿಹಾಸಿಕ ಪರಂಪರಾಗತ ಶಿಲ್ಪ ಕಲೆಯ ಸಂಪತ್ತನ್ನು ಹೊಂದಿರುವ ಲಕ್ಕುಂಡಿಯನ್ನು ವಿಶ್ವಮಾನ್ಯ ಪಾರಂಪರಿಕ ಗ್ರಾಮವಾಗಿಸಲು ಎಲ್ಲರೂ ಶ್ರಮಿಸಬೆಕಾಗಿದೆ" ಎಂದು ಹೇಳಿದರು.

ಐತಿಹಾಸಿಕ ಮಹತ್ವ ಸಾರುವ ಎರಡು ಕಾರ್ಯಾಗಾರಗಳು

ಐತಿಹಾಸಿಕ ಮಹತ್ವ ಸಾರುವ ಎರಡು ಕಾರ್ಯಾಗಾರಗಳು

ಪ್ರಾದೇಶಿಕ ಮಟ್ಟದಲ್ಲಿ ಲಕ್ಕುಂಡಿಯನ್ನು ಗುರುತಿಸುವ ನಿಟ್ಟಿನಲ್ಲಿ ಈ ಉತ್ಸವದಲ್ಲಿ ಲಕ್ಕುಂಡಿಯ ಐತಿಹಾಸಿಕ ಮಹತ್ವ ಸಾರುವ ಎರಡು ಕಾರ್ಯಾಗಾರಗಳು ನಡೆದಿದ್ದು ಅದರಲ್ಲಿ ಲಕ್ಕುಂಡಿ ಕುರಿತು ತಜ್ಞರು ಮಂಡಿಸಿದ ವರದಿಗಳನ್ನು ದಾಖಲೆ ಪುಸ್ತಕಗಳಲ್ಲಿ ಪ್ರಕಟಿಸುವಂತಹ ವಿಷಯಗಳನ್ನು ಹೊಂದಲಾಗಿದೆ ಎಂದರು.

ಲಕ್ಕುಂಡಿಯ ಮಹತ್ವ ಜಗತ್ತಿಗೆ ತಿಳಿಸುವ ಸಂಶೋಧನೆ

ಲಕ್ಕುಂಡಿಯ ಮಹತ್ವ ಜಗತ್ತಿಗೆ ತಿಳಿಸುವ ಸಂಶೋಧನೆ

ಲಕ್ಕುಂಡಿಯ ಮೌಲಿಕ ಸಂಪತ್ತನ್ನು ಗುರುತಿಸುವ ಪುಸ್ತಕಗಳ ಬಿಡುಗಡೆಯು ಆಗಿದ್ದು ಮಹತ್ವದ ಬೆಳವಣಿಗೆ ಆಗಿದೆ. ಮುಂದಿನ ಉತ್ಸವಕ್ಕಿಂತ ಮುಂಚೆ ಲಕ್ಕುಂಡಿಯಲ್ಲಿ ಮುಚ್ಚಿ ಹೋಗಿರಬಹುದಾದ ಕೆರೆ ಬಾವಿ, ದೇವಾಲಯಗಳ ಗುರುತಿಸುವಿಕೆ ಮತ್ತು ಅವುಗಳ ಉತ್ಖನನ ನಡೆಯಬೇಕಿದೆ. ಈ ಅವಧಿಯಲ್ಲಿ ಲಕ್ಕುಂಡಿಯ ಮಹತ್ವ ಜಗತ್ತಿಗೆ ತಿಳಿಸುವ ಸಂಶೋಧನೆ ಹಾಗೂ ಕಾರ್ಯಾಗಾರಗಳು ನಡೆಯಬೇಕು ಎಂದರು.

ಗ್ರಾಮೀಣಾಭಿವೃದ್ಧಿಯಿಂದ ಅನುದಾನ

ಗ್ರಾಮೀಣಾಭಿವೃದ್ಧಿಯಿಂದ ಅನುದಾನ

ದಾನ ಚಿಂತಾಮಣಿ ಅತ್ತಿಮಬ್ಬೆಯ ಸ್ಮಾರಕ ಭವನ ನಿರ್ಮಾಣ ಕುರಿತಂತೆ ತೀವ್ರ ಪ್ರಯತ್ನ ಅಗತ್ಯವಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನದಷ್ಟೇ ಗ್ರಾಮೀಣಾಭಿವೃದ್ಧಿಯು ಕೂಡಾ ನೀಡಲಿದೆ ಎಂದು ಭರವಸೆ ನೀಡಿದರು.

ಅಟ್ಯಾ ಪಟ್ಯಾ ಸ್ಪರ್ಧೆ ಗಳಿಗೆ ಬಹುಮಾನ

ಅಟ್ಯಾ ಪಟ್ಯಾ ಸ್ಪರ್ಧೆ ಗಳಿಗೆ ಬಹುಮಾನ

ಇದೇ ವೇಳೆ ಭೂತಾನದಲ್ಲಿ ನಡೆದ ಅಂತರಾಷ್ಟ್ರೀಯ ಅಟ್ಯಾ ಪಟ್ಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಭಾರತ ತಂಡದ ಕುಮಾರಿ ಅವರಾದಿ, ಪೂಜಾ ಎಚ್.ಗಲಿ ಹಾಗೂ ನೇತ್ರಾವತಿ ಅವರುಗಳಿಗೆ ತಲಾ 25 ಸಾವಿರಗಳ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಜನರ ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಜನರ ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಈ ಉತ್ಸವದಲ್ಲಿ ಸಂಗೀತ, ನೃತ್ಯ, ತೊಗಲು ಗೊಂಬೆಯಾಟ, ಮಲ್ಲಗಂಬ, ಜೋಗುತಿ ನೃತ್ಯ ಸೇರಿದಂತೆ ವಿವಿಧ ಜಾನಪದ ಕಾರ್ಯಕ್ರಮಗಳು ಜನರ ಆಕರ್ಷಣೆಯಾಗಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Lakkundi was spruced up and historical village, said minister of rural development and panchayat raj H.K. Patil in Lakkundi Utsav closing ceremony at Lakkundi Gadag, on Feb 12.
Please Wait while comments are loading...