ಮೈತ್ರಿ ಇರುವುದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಹೊರತು ಬಿಜೆಪಿ ಜೆಡಿಎಸ್ ನಡುವೆ ಅಲ್ಲ!

ಬೆಂಗಳೂರು, ಅಕ್ಟೋಬರ್‌ 17: ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಸತ್ಯ ಏನೆಂದರೆ ಮೈತ್ರಿ ಇರುವುದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಹೊರತು ಬಿಜೆಪಿ ಜೆಡಿಎಸ್ ನಡುವೆ ಅಲ್ಲ ಎಂದು ಮೈತ್ರಿ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ಹೇಳಿದೆ.

ಈ ಕುರಿತು ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು, ಇತ್ತ ಬಿಜೆಪಿ ನಾಯಕರಿಗೂ ಮೈತ್ರಿ ಬಗ್ಗೆ ಅಸಮಧಾನ, ಅತ್ತ ಒರಿಜಿನಲ್ ಜೆಡಿಎಸ್ ನವರಿಗೂ ಅಸಮಧಾನ. ಇಂತಹದ್ದನ್ನು ಮೈತ್ರಿ ಎನ್ನಲಾದೀತೆ? ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ ಪಕ್ಷದ ತೀರ್ಮಾನಗಳನ್ನು ನಾನೇ ತೆಗೆದುಕೊಳ್ಳುವುದು ಎಂದು ಕುಮಾರಸ್ವಾಮಿಯವರಿಗೆ ನೀವು "ಲೆಕ್ಕಕ್ಕಿಲ್ಲ" ಎಂದು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕುಮಾರಸ್ವಾಮಿಯವರದ್ದು ಅಬ್ಬೇಪಾರಿ ಸ್ಥಿತಿಗಿಂತ ಭಿನ್ನವಾಗಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

The alliance is not between BJP and JDS Says congress

ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ ರಾಜ್ಯ ಬಿಜೆಪಿ!

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲು ಕಾಂಗ್ರೆಸ್‌ ಹೈಕಮಾಂಡ್‌ ಒತ್ತಾಸೆಯಾಗಿ ನಿಲ್ಲುವುದು ಕರ್ನಾಟಕದ 6 ಕೋಟಿ ಜನರ ಹಿತ ಕಾಯುವುದಕ್ಕಲ್ಲ, ಬದಲಿಗೆ ತನ್ನ ಇನ್ನಿಲ್ಲದ ಯಾವ ರಾಜ್ಯಗಳಲ್ಲಿಯೂ ಲಭಿಸದ ಹಣದ ದಾಹವನ್ನು ತೀರಿಸಿಕೊಳ್ಳುವ ಸಲುವಾಗಿ ಅರ್ಥಾತ್‌ #ATM ಮಾಡಿಕೊಳ್ಳಲು!!

ಕಾಂಗ್ರೆಸ್‌ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಭಾರತದಲ್ಲಿ ಕಾಂಗ್ರೆಸ್‌ ಎಂದು ಅಂತ್ಯವಾಗುತ್ತದೆಯೋ, ಅಂದು ಭಾರತದಲ್ಲಿ ಭ್ರಷ್ಟಾಚಾರ ಕೊನೆಯಾಗುತ್ತದೆ. ಕಾಂಗ್ರೆಸ್‌ ಇದ್ದಲ್ಲಿ ಭ್ರಷ್ಟಾಚಾರ, ಅರಾಜಕತೆ, ಸುಳ್ಳು ಆರೋಪಗಳು, ಹಫ್ತಾ ವಸೂಲಿ, ಜಿಹಾದಿಗಳು ಎಲ್ಲವೂ ಮಾಮೂಲಿ. ಈಗ ಕರ್ನಾಟಕದಲ್ಲಿ ಆಗುತ್ತಿರುವುದೂ ಇದೇ.

2014 ರಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಸೋತು ಸುಣ್ಣವಾಗಿದ್ದಾಗ, ತನ್ನ ಕಚೇರಿ ಖರ್ಚನ್ನು ನಿಭಾಯಿಸಲು ಅವಲಂಬಿತವಾಗಿದ್ದು. ಕಾಂಗ್ರೆಸ್‌ ಅನ್ನು . ಅಂದು ಕರ್ನಾಟಕದ ಸಿಎಂ ಆಗಿದ್ದ ಸಿದ್ದರಾಮಯ್ಯರವರು ದೆಹಲಿಯಲ್ಲಿ ಸೋನಿಯಾ/ರಾಹುಲ್‌ ಗಾಂಧಿಯವರನ್ನು ನೋಡಿಕೊಳ್ಳಲು ಕೆ ಜೆ ಜಾರ್ಜ್‌ ಅವರನ್ನು, ಅಹಮದ್‌ ಪಟೇಲ್‌ ಅವರನ್ನು ನೋಡಿಕೊಳ್ಳಲು ಸಲ್ಲೀ ಅಹಮದ್ ಅವರನ್ನೇ ಉಸ್ತುವಾರಿಯನ್ನಾಗಿಸಿದ್ದರು.

The alliance is not between BJP and JDS Says congress

ಈಗ 2013-2018 ರಲ್ಲಿ ಕರ್ನಾಟಕವನ್ನು ಲೂಟಿ ಮಾಡಿದ ರೀತಿಯಲ್ಲಿ ಈ ಬಾರಿ ಸಹ‌ ಕಾಂಗ್ರೆಸ್ ಕರ್ನಾಟಕವನ್ನು #ATM ಮಾಡಿಕೊಂಡಿದೆ. ಆದರೆ ಈ ಬಾರಿ ಆಸ್ಥಾನ ಕಲಾವಿದರಾಗಿ ಕಲೆಕ್ಷನ್‌ ಏಜೆಂಟ್‌ಗಳಾಗಿರುವುದು ಮಾತ್ರ ‌ರಣದೀಪ್‌ ಸಿಂಗ್‌ ಸುರ್ಜೆವಾಲಾ
ಅವರು ಮತ್ತು ಕೆ ಸಿ ವೇಣುಗೋಪಾಲ ಅವರು. ಅತ್ಯುತ್ತಮವಾಗಿ ಕಲೆಕ್ಷನ್‌ ಮಾಡಿ ಕಲೆಕ್ಷನ್‌ ಮಾಸ್ಟರ್‌ ಎಂದೇ ಹೆಸರುವಾಸಿಯಾಗಿರುವ ಸಿಎಂ, ಡಿಸಿಎಂ ಮತ್ತು ಸಚಿವರನ್ನು ಹೊಂದಿರುವ ಕರ್ನಾಟಕದಲ್ಲಿ, ಅಧಿಕಾರಕ್ಕೇರಿದ ದಿನದಿಂದಲೂ ಕಾಂಗ್ರೆಸ್‌ ಲೂಟಿ ಮಾಡುತ್ತಿದೆ. ಇದಕ್ಕೆ ಈ 10 ದಿನಗಳಲ್ಲಿ ದೊರೆತ ₹102 ಕೋಟಿಯೇ ಸಾಕ್ಷಿ.

ಗುತ್ತಿಗೆದಾರರನ್ನು ಬೇಕಂತಲೇ ಸತಾಯಿಸುವುದು, ಆ ನಂತರ 80% ಕಮಿಷನ್‌ ಕೊಡಲೊಪ್ಪಿದ ಗುತ್ತಿಗೆದಾರರಿಗೆ ಎಡಗೈಯಲ್ಲಿ ಬಿಲ್‌ ರಿಲೀಸ್‌ ಮಾಡಿ, ಬಲಗೈಯಲ್ಲಿ ಕಾಸು ಪಡೆಯವುದು. ಕಾಂಗ್ರೆಸ್‌ ನಾಲ್ಕು ತಿಂಗಳಿಂದ ಮಾಡಿದ್ದು ಇದನ್ನೇ. ಇನ್ನೇನು ಕೆಲವೇ ದಿನಗಳಲ್ಲಿ ಅಳಿದುಳಿದ ಮೂರ್ನಾಲ್ಕು ರಾಜ್ಯಗಳಲ್ಲಿ ಸಹ ಕೈ ಪಕ್ಷ ಮನೆಗೆ ಹೋಗುವುದು ಖಚಿತ. ಕೊನೆ ಪಕ್ಷ ಅಕ್ರಮವಾಗಿ ಹಣದ ಹೊಳೆಯನ್ನು ಹರಿಸಿಯಾದರೂ, ಕನಿಷ್ಠ ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಕರ್ನಾಟಕದ ಜನರ ಶ್ರಮದ ತೆರಿಗೆ ಹಣವನ್ನು ಲೂಟಿ ಮಾಡಿ ಪಂಚ ರಾಜ್ಯಗಳ ಚುನಾವಣೆಗೆ ಕಳಿಸುತ್ತಿದೆ.

ಪಂಚ ರಾಜ್ಯಗಳ ಚುನಾವಣೆಗೆ ₹3000 ಕೋಟಿ, ಲೋಕಸಭಾ ಚುನಾವಣೆಗೆ ₹7000 ಕೋಟಿಯನ್ನು ಮಾಡುವ ಕಲೆಕ್ಷನ್‌ ಸದ್ಯ. ಕಾಂಗ್ರೆಸ್‌ ದ ಮೇಲಿದ್ದು, ಈ ಕಾರಣಕ್ಕಾಗಿ ಕನ್ನಡಿಗರನ್ನು ಇನ್ನಿಲ್ಲದಂತೆ ದೋಚಲು ಹೊಸ ಹೊಸ ಐಡಿಯಾಗಳನ್ನು ತೆಗೆದುಕೊಂಡು ದೆಹಲಿಯಿಂದ ಸುರ್ಜೇವಾಲಾ ಮತ್ತು ವೇಣುಗೋಪಾಲ್‌ ಪದೇ ಪದೇ ವಕ್ಕರಿಸುತ್ತಿದ್ದಾರೆ.

ಕನ್ನಡಿಗರ ಮೇಲೆ ಇಲ್ಲಸಲ್ಲದ ತೆರಿಗೆಗಳನ್ನು ಹೇರಿ, ದಿನ ಬಳಕೆ ವಸ್ತುಗಳ ಬೆಲೆಯನ್ನು ರಾಕೆಟ್‌ ವೇಗದಲ್ಲಿ ಬೇಕಾಬಿಟ್ಟಿಯಾಗಿ ಏರಿಸಿ, ಕನ್ನಡಿಗರ ರಕ್ತವನ್ನು ಹೀರುವ ಕೆಲಸವನ್ನು ಸದ್ಯ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ, ಹೈಕಮಾಂಡ್‌ ಎಂಬ ಬಕಾಸುರನ ಹೊಟ್ಟೆ ತುಂಬಿಸಲು, ಸ್ವಾಭಿಮಾನಿ, ಸ್ವಾವಲಂಬಿ ಕನ್ನಡಿಗರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸ್ವಯಂಘೋಷಿತ ಸಮಾಜವಾದಿ ಉರ್ಫ್‌ ಕಲೆಕ್ಷನ್‌ ಮಾಸ್ಟರ್‌ ಸಿದ್ದರಾಮಯ್ಯರವರೇ ಹೇಳಬೇಕು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+