ಅಯೋಧ್ಯೆ ರಾಮ ಮಂದಿರ: ಸಂತಸ ಎನ್ನುವುದು ಮಂದಿರ, ಮಸೀದಿಯಲ್ಲಿಲ್ಲ, ನಟಿ ರಮ್ಯಾ
ಬೆಂಗಳೂರು, ಆ 7: ಅಯೋಧ್ಯೆ ರಾಮ ಮಂದಿರದ ಭೂಮಿಪೂಜೆಯನ್ನು ಉಲ್ಲೇಖಿಸಿ ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
Recommended Video
ತಮ್ಮ ಪೋಸ್ಟ್ ನಲ್ಲಿ ಅಯೋಧ್ಯೆ ಹೆಸರನ್ನು ಉಲ್ಲೇಖಿಸಿ, ಪರೋಕ್ಷವಾಗಿ ಭೂಮಿಪೂಜೆಯ ಬಗ್ಗೆ ರಮ್ಯಾ ಮಾಡಿರುವ ಪೋಸ್ಟ್ ಇದು ಎಂದು ಗ್ರಹಿಸಬಹುದಾಗಿದೆ. ರಮ್ಯಾ ಅವರ ಪೋಸ್ಟಿಗೆ ಎಂದಿನಂತೆ, ಪರವಿರೋಧ ಕಾಮೆಂಟುಗಳ ಪ್ರವಾಹವೇ ಹರಿದು ಬಂದಿದೆ.
ಆ ಪೋಸ್ಟಿನ ಕನ್ನಡ ತರ್ಜುಮೆ ಹೀಗಿದೆ, "ರಾಮ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಹಿಂದೂಗಳಿಗೆ ಖುಷಿಯಾಗಿರುವುದು, ನನಗೂ ಖುಷಿ ಕೊಟ್ಟಿದೆ. ಮಸೀದಿ ನಿರ್ಮಾಣವಾದಾಗ ಮುಸ್ಲಿಮರಿಗೆ ಖುಷಿಯಾದಾಗ, ಅದರಿಂದ ನನಗೂ ಖುಷಿಯಾಗುತ್ತದೆ".

"ಆದರೆ ನನಗೆ ಎಲ್ಲಕ್ಕಿಂತ ಖುಷಿ ಕೊಡುವುದು, ಸಂತಸ ಎನ್ನುವುದು ಮಂದಿರ ಅಥವಾ ಮಸೀದಿ ಕಟ್ಟುವುದರಲ್ಲಿ ಇರುವುದಿಲ್ಲ. ಬದಲಾಗಿ ಒಗ್ಗಟ್ಟು, ಏಕತೆಯಿಂದ ಜೊತೆ ಜೊತೆಯಾಗಿ ಕೂಡಿ ಬಾಳುವುದರಲ್ಲಿ ಇರುತ್ತದೆ" ಎಂದು ರಮ್ಯಾ, ಪೋಸ್ಟ್ ಮಾಡಿದ್ದಾರೆ.
"ರಾಜಕೀಯಕ್ಕೆ ಬಲಿಯಾಗಬೇಡಿ. ಅಧಿಕಾರ ಮತ್ತು ನಿಯಂತ್ರಣಕ್ಕಾಗಿ ಸೃಷ್ಟಿಸಲಾಗುವ ಬಿಕ್ಕಟ್ಟಿದು"ಎನ್ನುವ ಒಕ್ಕಣೆಯನ್ನು ಹಾಕಿ, ರಮ್ಯಾ ಮೇಲಿನ ಪೋಸ್ಟ್ ಅನ್ನು ಮಾಡಿದ್ದಾರೆ.
"ನಾವು ನಿಮ್ಮ ಅಭಿಮಾನಿ, ನಿಮಗೆ ಗೊತ್ತಿಲ್ಲ ಅಭಿಮಾನಿಗಳು ನಿಮ್ಮನ್ನು ಎಷ್ಟು ಇಷ್ಟ ಪಡುತ್ತಾರೆ ಅಂತ, ನಿಮಗೆ ರಾಜಕೀಯ ಬೇಡ. ಆದಷ್ಟು ಬೇಗ ಸ್ಯಾಂಡಲ್ ವುಡ್ ಗೆ ಬನ್ನಿ"ಎನ್ನುವ ಸಲಹೆ, ರಮ್ಯಾ ಅವರ ಪೋಸ್ಟಿಗೆ ಬಂದಿದೆ.












Click it and Unblock the Notifications