ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ ಕರಂದ್ಲಾಜೆ ವಿರುದ್ಧ ಅಮಿತ್‌ ಶಾಗೆ ಟೆಕ್ಕಿಗಳ ಪತ್ರ!

|
Google Oneindia Kannada News

Recommended Video

ಅಮಿತ್ ಶಾಗೆ ಶೋಭಾ ಕರಂದ್ಲಾಜೆ ವಿರುದ್ಧ ಪತ್ರ ಬರೆದ ಸಾಫ್ಟ್ವೇರ್ ಇಂಜಿನಿಯರ್ ಗಳು | Oneindia Kannada

ಬೆಂಗಳೂರು, ಮಾರ್ಚ್ 05 : ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಟೆಕ್ಕಿಗಳು ಸಂಸದರ ವಿರುದ್ಧ ಪತ್ರ ಬರೆದಿದ್ದಾರೆ. ಕಳೆದ ವಾರ #ShobhaGoBack ಅಭಿಯಾನ ವನ್ನು ಸಹ ಮಾಡಲಾಗಿತ್ತು.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನ

'ನಾವು ಉಡುಪಿ-ಚಿಕ್ಕಮಗಳೂರು ಮೂಲದ ಭಾರತದ ಏಳಿಗೆಯ ಕುರಿತು ಚಿಂತಿಸುವ ಬಿಜೆಪಿ ಪರವಿರುವ ಬೆಂಗಳೂರು ಮೂಲದ ಸಾಫ್ಟವೇರ್ ಇಂಜಿನಿಯರ್‌ ಗೆಳೆಯರ ಬಳಗದ ಪ್ರತಿನಿಧಿಗಳು' ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದು ತಮ್ಮ ಮನವಿಯನ್ನು ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು?ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು?

'ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಚುನಾಯಿಸಲು ನಮ್ಮ ವೀಕೆಂಡ್ ಸಮಯಗಳನ್ನು, ನಮ್ಮ ದಿನದ ಬಹುಭಾಗಗಳನ್ನು ವ್ಯಯಿಸುತ್ತಿರುವ ನಾವುಗಳು, ಇದೀಗ ನಮ್ಮದೇ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಲೋಕಸಭಾ ಕ್ಷೇತ್ರದ ಹಿನಾಯ ಸ್ಥಿತಿಯ ಬಗ್ಗೆ ನಿಮ್ಮ ಗಮನವನ್ನು ಸೆಳೆಯುವುದಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇವೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ!ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ!

ಪ್ರಚಾರವನ್ನು ಮಾಡಿದ್ದೆವು

ಪ್ರಚಾರವನ್ನು ಮಾಡಿದ್ದೆವು

ಕಳೆದ ಬಾರಿ ನಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೊರಗಿನವರಾದ ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅವರ ಪರವಾಗಿ ನಾವು ರಾತ್ರಿ-ಹಗಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಮಾಡಿದ್ದೆವು.

ಕ್ಷೇತ್ರಕ್ಕೆ ಹೊರಗಿನವರಾದ ಅವರ ಬಗ್ಗೆ ಕೆಲವರು ಕೊಂಕು ಮಾತಾಡಿದಾಗ ಅವರ ನಾಯಕತ್ವವನ್ನು ಸಮರ್ಥಿಸುತ್ತಾ ಪ್ರಚಾರವನ್ನು ಮಾಡಿದೆವು. ಕೊನೆಗೂ ಮೋದಿ ಅಲೆಯಲ್ಲಿ ಸಂಸದರಾಗಿ ಆಯ್ಕೆಯಾದಾಗ ಸಂತಸ ಪಟ್ಟೆವು.

ತೀವ್ರ ಮುಜುಗರ ಉಂಟಾಗಿದೆ

ತೀವ್ರ ಮುಜುಗರ ಉಂಟಾಗಿದೆ

5 ವರ್ಷಗಳ ಮೋದಿ ಸ್ವರ್ಣ ಯುಗದ ಮೊದಲ ಭಾಗ ಕಳೆದ ಈ ದಿನಗಳನ್ನು ಉಡುಪಿ ಚಿಕ್ಕಮಗಳೂರು ಭಾಗದ ಅಭಿವೃದ್ದಿಯ ಜೊತೆ ಹೊಲಿಸಿ ನೋಡಿದರೆ ತೀವ್ರ ನಿರಾಸೆಯಾಗುತ್ತಿದೆ. ನಮ್ಮ ಜೊತೆ ಕಂಪನಿಯಲ್ಲಿ ಕೆಲಸ ಮಾಡುವ ಮಂಗಳೂರು ಮತ್ತು ಮೈಸೂರು ಭಾಗದ ಜನರು ಕಾಂಗ್ರೆಸ್‌ಗೆ ಮತ ನೀಡಿದ್ದರು.

ಈ ಬಾರಿ ಪ್ರಧಾನಿ ಮೋದಿ ಅವರ ಹಾಗೂ ಅವರ ಸಂಸದರ ಕಾರ್ಯ ವೈಖರಿಯಿಂದ ಸಂತಸಗೊಂಡು ಬಿಜೆಪಿಯ ಕಡೆ ವಾಲಿದ್ದಾರೆ. ಆದರೆ, ಭದ್ರಕೋಟೆ ಉಡುಪಿ-ಚಿಕ್ಕಮಗಳೂರಿನಲ್ಲಿ ಮಾತ್ರ ಸಂಸದರ ಕಾರ್ಯನಿರ್ವಹಣೆ ನಮಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ.

ಬೆಂಗಳೂರು ರಾಜಕಾರಣದಲ್ಲಿ ಬ್ಯುಸಿ

ಬೆಂಗಳೂರು ರಾಜಕಾರಣದಲ್ಲಿ ಬ್ಯುಸಿ

ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ಸಂಸದರು ಪ್ರಧಾನಿ ಮೋದಿಯವರು ಘೋಷಿಸಿದ ಯೋಜನೆಗಳನ್ನು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಹೊಸ ರೈಲುಗಳು, ವಿಮಾನ ಸೇವೆಗಳು, ಆಮದು ರಪ್ತು ಸೇವೆಗಳು, ರಸ್ತೆಗಳು ಮತ್ತು ಸೇತುವೆಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಯಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರೆ.

ಆದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತ್ರ ಸದಾ ಕಾಲ ಬೆಂಗಳೂರು ರಾಜಕಾರಣದಲ್ಲಿ ಬ್ಯುಸಿಯಾಗಿರುತ್ತಾರೆ. ಉಡುಪಿ-ಚಿಕ್ಕಮಗಳೂರು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದರ ಫಲವಾಗಿ ಮೋದಿ ಪರವಿರುವ ಜನರು ಪಕ್ಷದಿಂದ ದೂರವಾಗುತ್ತಿದ್ದಾರೆ.

ನೋಟಾ ಮತ ಚಲಾವಣೆ

ನೋಟಾ ಮತ ಚಲಾವಣೆ

ಕ್ಷೇತ್ರದ ಜನರಿಗೆ ನರೇಂದ್ರ ಮೋದಿಯವರ ಮೇಲೆ ಒಲವಿದ್ದರೂ ಕೂಡಾ ಮತ್ತೊಮ್ಮೆ ಇದೇ ಸಂಸದೆಯವರು ಚುನಾವಣೆಗೆ ನಿಂತಲ್ಲಿ ನೋಟಾ ಆಯ್ಕೆಯ ಕುರಿತು ಚಿಂತಿನೆ ನಡೆಸುತ್ತೇವೆ. ಪುಣೆ, ಮೈಸೂರು, ಬೆಂಗಳೂರಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳು, ಒಂದು ವೇಳೆ ಈಗಿನ ಅಭ್ಯರ್ಥೀಯೇ ಮುಂದುವರಿದಲ್ಲಿ ಚುನಾವಣೆಗೆ ಊರಿಗೆ ಬಂದು ಮತದಾನ ಮಾಡದೇ ಇರಲು ನಿರ್ಧರಿಸಿದ್ದಾರೆ.

ಕ್ಷೇತ್ರದ ಜನರು ದೆಹಲಿ ಮಟ್ಟದ ಕೆಲಸಗಳಾಗಬೇಕು ಎಂದಾಗ, ಅಕ್ಕಪಕ್ಕದ ಸಂಸದೀಯ ಕ್ಷೇತ್ರಗಳ ಸಂಸದರ ಮೂಲಕ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದಕ್ಕೆ ನೇರ ಕಾರಣ ಸಂಸದರು ಲೋಕಸಭಾ ವ್ಯಾಪ್ತಿಯನ್ನು ಮರೆತು ಬೆಂಗಳೂರಿನ ರಾಜಕಾರಣದಲ್ಲಿ ತೊಡಗಿದ್ದಾರೆ.

ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಡಿ

ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಡಿ

ಹಿಂದಿನಿಂದಲೂ ಬಿಜೆಪಿ ಭದ್ರಕೋಟೆ ಆಗಿರುವ ಕ್ಷೇತ್ರ ಮೋದಿಯಂಥ ಪ್ರಧಾನಿ ಇದ್ದು ಕೂಡ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವುದು ವಿಪರ್ಯಾಸ. ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯರನ್ನೇ ಅಭ್ಯರ್ಥಿಯಾಗಿಸುವ ಮೂಲಕ ಅಭಿವೃದ್ಧಿಯ ಕನಸಿನ ಮೂಲಕ ಮತ್ತೆ ಮೋದಿಯವರಿಗೆ ಮತ ನೀಡುವಂತೆ ಮಾಡಬೇಕಾಗಿ ಪತ್ರದಲ್ಲಿ ಮನವಿ ಮಾಡಲಾಗಿದೆ.

English summary
Techies belongs to Udupi-Chikmagalur constituency write to the BJP president Amit Shah against MP Shobha Karandlaje. Demanding for 2019 Lok Sabha Election ticket for local leaders in seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X