Get Updates
Get notified of breaking news, exclusive insights, and must-see stories!

ಕೇರಳದಲ್ಲಿ ಸತ್ತ ವ್ಯಕ್ತಿಗೆ 15 ಲಕ್ಷ ಪರಿಹಾರ; ರಾಜ್ಯದ 600 ರೈತರ ಆತ್ಯಹತ್ಯಗೆ ಗೇಲಿ ಮಾಡಿದ ಸರ್ಕಾರ: BJP ಬಿಚ್ಚಿಟ್ಟ ಸತ್ಯವೇನು?

ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರ ವಯನಾಡ್ ಕ್ಷೇತ್ರದಲ್ಲಿ ಆನೆ ತುಳಿತಕ್ಕೆ ಸಿಲುಕಿ ವ್ಯಕ್ತಿ ಮೃತನಾದರೆ, ಆ ಆನೆ ಕರ್ನಾಟಕಕ್ಕೆ ಸೇರಿದ್ದು ಎಂಬ ಕಾರಣಕ್ಕೆ ಆ ಮೃತನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ₹15 ಲಕ್ಷ ಪರಿಹಾರ ನೀಡಿದೆ. ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ - ರಾಹುಲ್ ಗಾಂಧಿಯ ವಯನಾಡ್‌ನ ಮಡಿಲಿಗೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಇದು ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣವನ್ನು ದುರುಪಯೋಗ ಮಾಡುತ್ತಿರುವ ಅಸಲಿಯತ್ತು.ಕರ್ನಾಟಕದಲ್ಲಿ 600 ಕ್ಕೂ ಹೆಚ್ಚು ರೈತರು ಸಿಎಂ ಸಿದ್ದರಾಮಯ್ಯ ಅವರ ರೈತ ವಿರೋಧಿ ಆಡಳಿತಕ್ಕೆ ಬೇಸತ್ತು ನೇಣಿಗೆ ಶರಣಾದರೆ, ಅವರ ಆತ್ಮಹತ್ಯೆಯನ್ನು ಗೇಲಿ ಮಾಡಿ, ಬಿಡಿಗಾಸು ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ, ಕೇರಳದಲ್ಲಿ ಸತ್ತ ವ್ಯಕ್ತಿಗೆ ರಾಜ್ಯ ಬೊಕ್ಕಸದಿಂದ ಪರಿಹಾರ ನೀಡಿದ್ದು, ಕಾಂಗ್ರೆಸ್‌ನ ರೈತ ವಿರೋಧಿ ಮನಸ್ಥಿತಿಯ ಜ್ವಲಂತ ನಿದರ್ಶನ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿಕಾರಿದೆ.

Tax Money For The Hard Work Of Kannadigas Is For Rahul Gandhis Wayanad State BJP Said

ಅಷ್ಟಕ್ಕೂ ಸಚಿವ ಈಶ್ವರ್‌ ಖಂಡ್ರೆ ಬರೆದ ಪತ್ರದಲ್ಲಿ ಯಾವುದೇ ಸಂವಿಧಾನಿಕ ಹುದ್ದೆಯಲ್ಲಿಲ್ಲದ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ಕೆ ಸಿ ವೇಣುಗೋಪಾಲ್‌ ಅವರನ್ನು ಏಕೆ ಹೆಸರಿಸಲಾಗಿದೆ ಎಂಬುದನ್ನು ಕಲೆಕ್ಷನ್ ಮಾಸ್ಟರ್ ಸಿಎಂ ಸಿದ್ದರಾಮಯ್ಯನವರೇ ತಿಳಿಸಬೇಕು.ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪದಿಂದ ರಾಜ್ಯದ ತೆರಿಗೆದಾರರ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ‌ ಎಂದು ರಾಜ್ಯ ಬಿಜೆಪಿ ಕುಟುಕಿದೆ.

ಸಿಎಂ ಸಿದ್ದರಾಮಯ್ಯನವರೇ ನಿಮಗೆ ನಿಜಕ್ಕೂ ತಾಕತ್ತು ದಮ್ಮು ಇದ್ದರೆ, ಕನ್ನಡಿಗರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡಿ ಎಂದು ನಿಮಗೆ ಸೂಚನೆ ನೀಡುವ ಎಐಸಿಸಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಿ ಎಂದು ಹೇಳಿದೆ.

ಈಶ್ವರ್‌ ಖಂಡ್ರೆ ಹೇಳಿದ್ದೇನು?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು (ಮಕನಾ) ಆನೆಯನ್ನು ನವೆಂಬರ್ 30, 2023 ರಂದು ಸೆರೆಬಹಿಡಿಯಲಾಗಿತ್ತು. ನಂತರ ಈ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈ ಆನೆಯು ಸುಮಾರು ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ 10 ರ ಬೆಳಗ್ಗೆ ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಈ ಆನೆಯೊಂದಿಗೆ ಸಂಘರ್ಷದ ಘಟನೆಯಲ್ಲಿ ಶ್ರೀ ಅಜೀಶ್ ಅವರು ಪ್ರಾಣ ಕಳೆದುಕೊಂಡಿದ್ದರು. ಶ್ರೀ ಅಜೀಶ್ ರವರ ಸಾವಿಗೆ ಪರಿಹಾರವಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳದ ಜನಪ್ರತಿನಿಧಿಗಳು ಮತ್ತು ಕೇರಳ ಸರ್ಕಾರವು ಕನಾ೯ಟಕದ ಸರ್ಕಾರವನ್ನು ಕೋರಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಈಶ್ವರ್ ಬಿ ಖಂಡ್ರೆ ಅವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಫೆಬ್ರವರಿ 18 ರಂದು ಪರಿಹಾರ ನೀಡುವ ಕುರಿತು ಚಚಿ೯ಸಿದ್ದರು. ಮೃತ ಶ್ರೀ ಅಜೀಶ್ ಅವರ ಕುಟುಂಬಕ್ಕೆ ಪರಿಹಾರ ನೀಡಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿರುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+