India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಟನ್ ಗಟ್ಟಲೆ ಚಿನ್ನ, ಬೆಳ್ಳಿ ವಜ್ರ ಏನಾದವು?

|
Google Oneindia Kannada News

ಬೆಂಗಳೂರು, ಜೂ. 26: ಜೀವ ಇರುವಾಗ, ಆಸ್ತಿ - ಅಂತಸ್ತು, ಪ್ರತಿಷ್ಠೆಗಾಗಿ ಪರದಾಡುತ್ತಾರೆ. ಕೋಟಿ ಕೋಟಿ ಕೊಳೆಯುತ್ತಿದ್ದರೂ ಅಕ್ರಮ ಆಸ್ತಿ ಗಳಿಸುವಲ್ಲಿ ಜೀವನ ಸವೆಸುತ್ತಾರೆ. ಬೆತ್ತಲೆಯಾಗಿ ಹುಟ್ಟುವ ಮನುಜ, ಸತ್ತಾಗ ಬರೀ ಕೈಯಲ್ಲಿ ಹೋಗುತ್ತಾನೆ ಎಂಬ ವಾಸ್ತವ ಗೊತ್ತಿದ್ದರೂ ಅಕ್ರಮ ಗಳಿಕೆ ಮಾಡೋದು ಮಾತ್ರ ಬಿಡಲ್ಲ. ಜಯಲಲಿತಾ ಜೀವನದಲ್ಲಿ ಕೂಡೇ ಅದೆ ಅಗಿದ್ದು. ನಟಿಯಾಗಿ, ರಾಜಕಾರಣಿಯಾಗಿ, ತಮಿಳುನಾಡಿನ ಸಿಎಂ ಖುರ್ಚಿಯಲ್ಲಿ ಅರು ಸಲ ಕೂತಿದ್ದ ಜಯಲಲಿತಾ ಗಳಿಸಿರುವ ಆಸ್ತಿ, ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ ನೋಡಿದರೆ ಬೆಚ್ಚಿ ಬೀಳಿಸುತ್ತದೆ. ಜಯಲಲಿತಾ ಅವರಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಚಿನ್ನ, ವಜ್ರ ವೈಢೂರ್ಯಗಳ ವಿವರ ಇಲ್ಲಿದೆ.

ಮಾಜಿ ಸಿಎಂ ಜಯಲಲಿತಾ ಅವರಿಗೆ ಸಂಬಂಧಿಸಿದ 468 ಮಾದರಿ ಚಿನ್ನ ಮತ್ತು ವಜ್ರದ ಒಡವೆಗಳು ಪತ್ತೆಯಾಗಿದ್ದವು. ವಜ್ರ, ಡೈಮಂಡ್, ಎಮರಾಲ್ಡ್, ಪರ್ಲ್, ಚಿನ್ನದ ಬಳೆಗಳು, ಬ್ರಾಸ್ ಲೈಟ್ ಗಳು, ಕಿವಿಯೋಲೆ, ಮೂಗುನತ್ತು, ಚಿನ್ನದ ಕತ್ತಿ, ಚಿನ್ನದ ನವಿಲು, ಚಿನ್ನದ ಪೆನ್ ಸೇರಿದಂತೆ ಕೋಟಿ ಕೋಟಿ ಬಾಳುವ ಚಿನ್ನದ ವಸ್ತುಗಳು ಪತ್ತೆಯಾಗಿದ್ದವು. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಅರೋಪ ಸಾಬೀತಾಗಿತ್ತು. ನಾಲ್ಕ ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ. ದಂಡ ವಿಧಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಹೀಗಾಗಿ 2014 ರಲ್ಲಿ ಜಯಲಲಿತಾ ಸಿಎಂ ಪದವಿಯಿಂದ ಕೆಳಗೆ ಇಳಿದು ಜೈಲಿಗೆ ಹೋಗಿದ್ದರು. ಜೈಲಿನಲ್ಲಿ ಅತಿ ಸರಳ ಜೀವನ ಮಾಡಿದ್ದ ಜಯಲಲಿತಾ ಮೇಲಿನ ಅಕ್ರಮ ಅಸ್ತಿ ಗಳಿಕೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತ್ತು.

ದಿ.ಜಯಲಲಿತಾ ಅವರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಮನವಿದಿ.ಜಯಲಲಿತಾ ಅವರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಮನವಿ

ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದ ಜಯಲಲಿತಾ ಅವರು ಅನಾರೋಗ್ಯದಿಂದ 2016 ಡಿಸೆಂಬರ್ 05 ರಂದು ನಿಧನರಾಗಿದ್ದರು. ಜಯಲಲಿತಾ ಅವರನ್ನು ರಾಷ್ಟ್ರಧ್ವಜ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಜಯಲಲಿತಾ ಮೇಲಿನ ಅಕ್ರಮ ಅಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ 2017 ರಲ್ಲಿ ವಿಶೇಷ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿತ್ತು. ಈ ಪ್ರಕರಣದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ, ಇಳವರಸಿ, ಇತರರು 2017 ರಿಂದ ಜೈಲು ಶಿಕ್ಷೆ ಅನುಭವಿಸಿದರು. 2021 ರಲ್ಲಿ ಶಶಿಕಲಾ ಶಿಕ್ಷೆ ಪೂರ್ಣಗೊಳಿಸಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇಷ್ಟೆಲ್ಲಾ ಆಸ್ತಿ ಮಾಡಿದ್ದ ಜಯಲಲಿತಾ ಸಾವನ್ನಪ್ಪಿದಾಗ ಹೋಗಿದ್ದು ಬರೀ ಗೈಯಲ್ಲಿ. ಮಾತ್ರವಲ್ಲ ಅವರ ಅಷ್ಟೂ ವಸ್ತುಗಳು ಇದೀಗ ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಿವೆ.

ಜಯಲಲಿತಾ ಬಾಲ್ಯ ಜೀವನ

ಜಯಲಲಿತಾ ಬಾಲ್ಯ ಜೀವನ

ಜಯಲಲಿತಾ ಅವರ ನಟನೆ ಹಾಗೂ ರಾಜಕೀಯ ಪಯಣದ ಬಗ್ಗೆ "ತಲೈವಿ" ಸಿನಿಮಾ ಮೂಲಕವೇ ಬಂದಿದೆ. ಪುರುಷ ಸಮಾಜದಲ್ಲಿ ಎದುರಾದ ಅವಮಾನ ಸೆಟೆದು ನಿಂತು ಸಿಎಂ ಆಗಿ ಅಧಿಕಾರ ಚಲಾಯಿಸಿ ಅಮ್ಮಾ ಅಂತಲೇ ಖ್ಯಾತಿ ಪಡೆದಿದ್ದ ಜಯಲಲಿತಾ ಜನಿಸಿದ್ದು ಕರ್ನಾಟಕದಲ್ಲಿ. ಮಂಡ್ಯ ಜಿಲ್ಲೆಯ ಪಾಂಡವರಪುರ ತಾಲೂಕಿನ ಮೇಲುಕೋಟೆಯಲ್ಲಿ. ತಂದೆ ಜಯರಾಮ್, ತಾಯಿ ವೇದವಲ್ಲಿ. ಜಯಲಲಿತಾ ಮೂಲ ಹೆಸರು ಕೋಮಲವಲ್ಲಿ. ಜನಿಸಿದ ದಿನಾಂಕ 24 ಫೆಬ್ರವರಿ 1948 ರಲ್ಲಿ.

1980 ರಲ್ಲಿ ರಾಜಕೀಯಕ್ಕೆ ತಲೈವಿ ಎಂಟ್ರಿ

1980 ರಲ್ಲಿ ರಾಜಕೀಯಕ್ಕೆ ತಲೈವಿ ಎಂಟ್ರಿ

ಮೂಲತಃ ತಮಿಳುನಾಡಿನ ಶ್ರೀರಂಗಂನವರಾದ ಜಯಲಲಿತಾ ಅವರ ತಾತ ರಂಗಾಚಾರಿ ವೃತ್ತಿಯಲ್ಲಿ ವೈದ್ಯರು. ಮೈಸೂರು ಅರಮನೆಯ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಬಂದಾಗ ಮೈಸೂರಿಗೆ ಬಂದಿದ್ದರು. ಆ ಬಳಿಕ ಮಂಡ್ಯದ ಪಾಂಡವರಪುರ ತಾಲೂಕಿನ ಮೇಲುಕೋಟೆಯಲ್ಲಿ ನೆಲೆಯೂರಿದ್ದರು. ಜಯಲಲಿತಾ ಓದಿದ್ದು ಚೆನ್ನೈನ ಚರ್ಚ್ ಪಾರ್ಕ್ ಕಾನ್ವೆಂಟ್ ನಲ್ಲಿ. ತುಂಬಾ ಪ್ರತಿಭಾನ್ವಿತೆ ಅಗಿದ್ದ ಜಯಲಲಿತಾ ಯಾವಾಗಲೂ ಶಾಲೆಗೆ ಟಾಪರ್ .1964 ರಲ್ಲಿ ಎಸ್ಎಸ್ಎಲ್ ಸಿ ಮುಗಿಸಿ ಪಿಯುಸಿಗೆ ಸೇರಿದ್ದರು. ಸ್ಟೆಲ್ಲಾ ಮೇರಿ ಕಾಲೇಜಿಗೆ ಸೇರಿದಾಗಲೇ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಬಂದಿತ್ತು. ಸಿನಿಮಾ ಕ್ಷೇತ್ರ ಅಯ್ಕೆ ಮಾಡಿಕೊಂಡಿದ್ದಳು. 12 ನೇ ವರ್ಷಕ್ಕೆ ಭರತನಾಟ್ಯ ಕಲಾವಿದೆಯಾಗಿದ್ದ ಜಯಲಲಿತಾ ಕನ್ನಡದಲ್ಲಿ ಚಿನ್ನದ ಗೊಂಬೆ ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ವೆನ್ನಿರಾ ಆಡೈ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಎಂಜಿಆರ್ ಅವರ ಆಯಿರಾಥಿಲ್ ಒರುವನ್ ಸಿನಿಮಾದಲ್ಲಿ ನಟನೆ ಮಾಡಿದ್ದರು. 1980 ರ ವೇಳೆಗೆ ಎಂಜಿಆರ್ ನೆರವಿನಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. 1991 ರಲ್ಲಿ ಜಯಲಲಿತಾ ಸಿಎಂ ಖುಚಿ ಅಲಂಕರಿಸಿದ್ದರು. ಆರು ಸಲ ಸಿಎಂ ಖುರ್ಚಿಯಲ್ಲಿ ಕೂತಿದ್ದ ಜಯಲಲಿತಾ ಅಮ್ಮಾ ಎಂದೇ ಖ್ಯಾತಿಯಾಗಿದ್ದರು.

ಸ್ವಾಮಿ ದಾಖಲಿಸಿದ್ದ ಕೇಸೇ ಮುಳುವಾಯ್ತು

ಸ್ವಾಮಿ ದಾಖಲಿಸಿದ್ದ ಕೇಸೇ ಮುಳುವಾಯ್ತು

ಜಯಲಲಿತಾ ತನ್ನ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿ ರಾಜಕೀಯ ಯಶಸ್ಸಿಗಾಗಿ ಪರದಾಡಿದ್ರು. 1991 ರಲ್ಲಿ ಎಐಎಡಿಎಂಕೆ ಪಕ್ಷದಿಂದ ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಿಎಂ ಖುರ್ಚಿ ಸಿಕ್ಕಿದ್ದೇ ಜಯಲಲಿತಾ ತನಗಿಷ್ಟ ಬಂದ ಬಟ್ಟೆ, ಚಿನ್ನಾಭರಣ, ವಜ್ರ ವೈಢೂರ್ಯ, ಆಸ್ತಿಗಳನ್ನು ಗಳಿಸಿದ್ದರು. ರಾಜಮನೆತನವನ್ನೇ ಮೀರಿಸುವ ಜೀವನ ಸಾಗಿಸಿದರು. ಜೀವನ ಪರ್ಯಂತ ಕುಮಾರಿಯಾಗಿಯೇ ಉಳಿದ ಜಯಲಲಿತಾ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಮೊದಲ ಐದು ವರ್ಷದ ಅವಧಿಯಲ್ಲಿ ಅಕ್ರಮ ಆಸ್ತಿಗಳಿಸಿದ್ದ ಬಗ್ಗೆ ವಕೀಲ ಸುಬ್ರಮಣಿಯನ್ ಸ್ವಾಮಿ ತಮಿಳುನಾಡಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರನ್ನು ಅಂಗೀಕರಿಸಿದ್ದ ನ್ಯಾಯಾಲಯ 1997 ರಲ್ಲಿಯೇ ಜಯಲಲಿತಾ ಅಕ್ರಮ ಆಸ್ತಿ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದ ಸಿಬಿಐ ಅಧಿಕಾರಿಗಳು ಜಯಲಲಿತಾ ಅವರಿಗೆ ಸಂಬಂಧಿಸಿದ್ದ ನೂರಾರು ಕೋಟಿ ಆಸ್ತಿ ಮತ್ತು ಐಶರಾಮಿ ಜೀವನದ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

ಜಯಲಲಿತಾ ಐಶಾರಾಮಿ ವಸ್ತುಗಳ ಸಮಗ್ರ ವಿವರ

ಜಯಲಲಿತಾ ಐಶಾರಾಮಿ ವಸ್ತುಗಳ ಸಮಗ್ರ ವಿವರ

1991-1996 ರ ಅವಧಿಯಲ್ಲಿ ಜಯಲಲಿತಾ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ಪ್ರಕಾರ, ತಮಿಳುನಾಡಿನಲ್ಲಿ 3000 ಎಕರೆ ಜಮೀನು (310 ಕೋಟಿ ರೂ. ಚೆನ್ನೈನಲ್ಲಿ ಫಾರ್ಮ್ ಹೌಸ್, ತಮಿಳುನಾಡಿನಲ್ಲಿ ಕೃಷಿ ಭೂಮಿ, ಹೈದರಾಬಾದ್ ನಲ್ಇ ಫಾರ್ಮ್ ಹೌಸ್, ನೀಲಗಿರಿಯಲ್ಲಿ ಟೀ ಎಸ್ಟೇಟ್, ಕೈಗಾರಿಕೆ ಶೆಡ್ ಗಳು, ಲಕ್ಸುರಿ ಕಾರುಗಳು, ಬ್ಯಾಂಕ್ ಖಾತೆಗಳಲ್ಲಿ ಕೋಟಿ ಕೋಟಿ ಹಣ ಇತರೆ ಸಿಕ್ಕಿತ್ತು. ಜಯಲಲಿತಾ ಅವರಿಗೆ ಸೇರಿದ್ದ 28 ಕೆಜಿ ಚಿನ್ನ, 700 ಕೆಜಿ ಬೆಳ್ಳಿ ವಜ್ರ ವೈಢೂರ್ಯ ಎಲ್ಲವೂ ಸಿಕ್ಕಿತ್ತು. ಆದ್ರೆ ಅವರ ಮನೆಯಲ್ಲಿ ಸಿಕ್ಕಿದ್ದ ಸೀರೆ ಚಪ್ಪಲಿ, ಟೇಬಲ್ ಇತರೆ ಗೃಹೋಪಯೋಗಿ ವಸ್ತುಗಳು ಭಾರಿ ಸದ್ದು ಮಾಡಿದ್ದವು. ವಕೀಲ ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಈ ಕುರಿತು ಸಂಗ್ರಹಿಸಿದ ಮಾಹಿತಿ ಪ್ರಕಾರ, ಜಯಲಲಿತಾ ವಸ್ತುಗಳ ವಿವರ ಇಲ್ಲಿದೆ.

1. ದುಬಾರಿ ಬೆಲೆಯ ಸೀರೆಗಳು 11,344

2. ಎಸಿ ಮಿಷನ್ ಗಳು- 44

3. ಟೆಲಿಪೋನ್ - 33

4. ಸೂಟ್‌ಕೇಸ್ - 131

5. ವಾಚ್ - 91

6. ವಾಲ್‌ ಕ್ಲಾಕ್ - 27

7. ಫ್ಯಾನ್ - 86

8. ಡೆಕೋರೇಟ್ ಚೇರ್ - 146

9. ಟೀಪಾಯಿ - 34

10. ಟೇಬಲ್ - 31

11. ಕೋಟ್ - 11

12. ಡ್ರೆಸಿಂಗ್ ಟೇಬಲ್ - 09

13. ಹ್ಯಾಂಗಿಂಗ್ ಲೈಟ್ - 81

14. ಸೋಫಾ ಸೆಟ್ - 20

15. ಚಪ್ಪಲಿಗಳು - 750

16. ಡ್ರೆಸಿಂಗ್ ಟೇಬಲ್ ಮಿರ್ರರ್ - 31

17. ಕ್ರಿಸ್ಟಲ್ ಕಟ್ ಗ್ಲಾಸ್ - 215

18. ಐರನ್ ಲಾಕರ್ - 3

19. ಶಾಲು - 251

20. ರೆಫ್ರಿಜೇಟರ್ - 12

21. ನಗದು- 1.60, 514,

22. ಟೆಲಿವಿಜನ್ ಸೆಟ್ - 10

23. ವಿಸಿಆರ್ - 08

24. ವಿಡಿಯೋ ಕ್ಯಾಮೆರಾ - 01,

25. ಅಡಿಯೋ ಡೆಕ್ - 02,

26. two in one ಟೇಪ್ ರೆಕಾರ್ಡರ್ - 24,

27. ವಿಡಿಯೋ ಕ್ಯಾಸೆಟ್ - 1040

28. ಸಿಡಿ ಪ್ಲೇಯರ್ - 04

English summary
Tamilnadu Ex cm Late Jayalalithaa life journey and Disproportionate assets case: what will happen Jayalalithaa Saree's and gold ornaments. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X