Tamannaah Bhatia: ಮೈಸೂರು ಸ್ಯಾಂಡಲ್ ಸೋಪ್ಗೆ ಹೊಸ ರಾಯಭಾರಿ ನಟಿ ತಮನ್ನಾಗೆ ಸರ್ಕಾರದಿಂದ ಕೋಟಿ.. ಕೋಟಿ: ಕನ್ನಡಿಗರು ಗರಂ!
Tamannaah Bhatia: ಹಿಂದಿ ಹೇರಿಕೆ ಹಾಗೂ ಭಾಷಾ ವಿವಾದದ ನಡುವೆಯೇ ಕರ್ನಾಟಕ ಸರ್ಕಾರದ ನಿರ್ಧಾರವೊಂದು ಭಾರೀ ಟೀಕೆಗೆ ಗುರಿಯಾಗಿದೆ. ಕರ್ನಾಟಕ ಸರ್ಕಾರದ ಒಡೆತನದ ಹಾಗೂ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಮೈಸೂರು ಸ್ಯಾಂಡಲ್ ಸೋಪ್ಗೆ ಹೊಸ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಇದೀಗ ಅವರಿಗೆ ನೀಡಿರುವ ಸಂಭಾವನೆ ಹಾಗೂ ಕನ್ನಡ ನಟಿಯರ ಕಡೆಗಣನೆ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪರ - ವಿರೋಧ ಚರ್ಚೆ ಶುರುವಾಗಿದೆ.
ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿ ಆಗಿದ್ದಾರೆ. ಆದರೆ, ಅವರಿಗೆ ಕೋಟ್ಯಾಂತರ ರೂಪಾಯಿ ನೀಡಿರುವುದು ಹಾಗೂ ಕನ್ನಡಿಗರನ್ನು ಕರ್ನಾಟಕ ಸರ್ಕಾರವೇ ಕಡೆಗಣಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡಿಗರೇ ಮೊದಲು ಎಂದು ಹೇಳುತ್ತಿದೆಯಾದರೂ ಕೆಲವೊಂದು ವಿಚಾರದಲ್ಲಿ ಎಡವುತ್ತಿದೆ. ಇದನ್ನು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕದ ನಟಿಯರು ಹಾಗೂ ಕನ್ನಡಿದಿಂದ ಖ್ಯಾತಿ ಗಳಿಸಿರುವ ನಟಿಯರು ಇರುವಾಗ ತಮನ್ನಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದಲ್ಲಿ ಮೊನ್ನೆಯಷ್ಟೇ ಹಿಂದಿ ಹೇರಿಕೆಯ ವಿರುದ್ಧ ಭಾರೀ ಅಭಿಯಾನ ನಡೆಯಿತು. ಇದನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿರೋಧಿಸಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹೀಯಾಳಿಸುವ ಹಾಗೂ ಕನ್ನಡದ ಬಗ್ಗೆ ಅಪಹಾಸ್ಯ ಮಾಡುವ ಘಟನೆಗಳು ಪ್ರತಿ ದಿನವೂ ಕೇಳಿ ಬರುತ್ತಿದೆ. ಕನ್ನಡಿಗರು ಇದನ್ನು ವಿರೋಧಿಸುತ್ತಲ್ಲೇ ಇದ್ದಾರೆ.
ಬೆಂಗಳೂರಿನಲ್ಲಿದ್ದುಕೊಂಡೆ ಪರಭಾಷಿಗಳು ಕನ್ನಡದ ವಿರುದ್ಧವಾಗಿ ಹಾಗೂ ಬೆಂಗಳೂರಿನ ಬಗ್ಗೆ ಅಪಹಾಸ್ಯ ಮಾಡುತ್ತಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಇದರ ನಡುವೆ ನಟಿ ತಮನ್ನಾಗೆ 6 ಕೋಟಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ತಮನ್ನಾ ಅವರನ್ನು ಮಿಲ್ಕಿ ಬ್ಯೂಟಿ ಅಂತಲೂ ಕರೆಯಲಾಗುತ್ತದೆ. ಬ್ರ್ಯಾಂಡ್ ದೃಷ್ಟಿಯಿಂದ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ. ಇದು ಕರ್ನಾಟಕ ಸರ್ಕಾರದ ತಪ್ಪು ನಿರ್ಧಾರ ಎನ್ನುತ್ತಿದ್ದಾರೆ ಕನ್ನಡಿಗರು.
ತಮನ್ನಾ ಅವರೊಂದಿಗೆ ಮೈಸೂರು ಸ್ಯಾಂಡಲ್ಸೋಪ್ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಅವಧಿಗೆ ತಮನ್ನಾ ಅವರು ಮೈಸೂರು ಸ್ಯಾಂಡಲ್ಸೋಪ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಇದಕ್ಕಾಗಿ ಅವರಿಬೆ ಬರೋಬ್ಬರಿ 6.20 ಕೋಟಿ ರೂಪಾಯಿ ಕೊಡಲಾಗುವುದು ಎನ್ನುವ ಸುತ್ತೋಲೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸರ್ಕಾರ ಅಧಿಕೃತವಾಗಿ ಇನ್ನಷ್ಟೇ ಹೇಳಬೇಕಿದೆ. ಆದರೆ, ಆದೇಶ ಪ್ರತಿ ವೈರಲ್ ಆಗಿದೆ.
Karnataka Soaps and Detergents Ltd (Mysuru Sandal) ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ಆಯ್ಕೆ.
— Nishkama_Karma (@Nishkama_Karma1) May 22, 2025
2 ವರ್ಷದ ರಾಯಭಾರ ತನಕ್ಕೆ 6.20 ಕೋಟಿ ವೆಚ್ಚ!
ಕನ್ನಡಿಗರು ಯಾರು ಇರಲಿಲ್ಲವೇ @CMofKarnataka @MBPatil
ನಮ್ಮ ಸರ್ಕಾರವೇ ಬೇರೆಯವರನ್ನು ಮಣೆ ಹಾಕಿದರೆ ಕನ್ನಡಿಗರು ಏನು ಮಾಡಬೇಕು?
ಈ ದ್ರೋಹಕ್ಕೆ ಯಾರು ಹೊಣೆ? pic.twitter.com/EivJb8X0zG
ಬ್ರ್ಯಾಂಡ್ ಬೆಂಗಳೂರು & ಗ್ರೇಟರ್ ಬೆಂಗಳೂರಿಗೆ ವಿರೋಧ: ಇನ್ನು ರಾಜ್ಯ ಸರ್ಕಾರವು ಬ್ರ್ಯಾಂಡ್ ಬೆಂಗಳೂರು & ಗ್ರೇಟರ್ ಬೆಂಗಳೂರು ಎನ್ನುವ ಹೆಸರನ್ನು ಇರಿಸಿರುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ನವ ಬೆಂಗಳೂರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪರ್ಯಾಯವಾಗಿ ಬ್ರ್ಯಾಂಡ್ ಬೆಂಗಳೂರು & ಗ್ರೇಟರ್ ಬೆಂಗಳೂರು ಎನ್ನುವ ಹೆಸರನ್ನು ಬಳಸಲಾಗುತ್ತಿದೆ.












Click it and Unblock the Notifications