Zameer Vs Yatnal Fight: "ಯಾರಪ್ಪನದೂ ಅಲ್ಲ" ಜಮೀರ್ - ಯತ್ನಾಳ್ ನಡುವೆ ಈ ಕಾರಣಕ್ಕೆ ವಾಕ್ಸಮರ !

ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್‌ ಖಾನ್ ನಡುವೆ ವಾಕ್ಸಮರ ಮುಂದುವರಿದಿದೆ. ಈ ಇಬ್ಬರು ನಾಯಕರ ನಡುವೆ ಆಗ್ಗಾಗ್ಗೆ ವಾಕ್ಸಮರಗಳು ನಡೆಯುತ್ತಿರುತ್ತವೆ. ಬಿಜೆಪಿಯ ಫೈರ್‌ ಬ್ರ್ಯಾಂಡ್ ಎಂದೇ ಖ್ಯಾತಿ ಗಳಿಸಿರುವ ಯತ್ನಾಳ್ ಹಾಗೂ ನೇರಾ ನೇರವಾಗಿ ಉತ್ತರಿಸುವ ಜಮೀರ್‌ ಖಾನ್‌ ನಡುವೆ ವಾಕ್ಸಮರ ಶುರುವಾಗಿದೆ. ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಕೆಂಡಾಮಂಡಲಾಗಿರುವ ಜಮೀರ್ ಅವರು ಬಸನಗೌಡ ಪಾಟೀಲ್‌ಗೆ ನೇರವಾಗಿಯೇ ಟಾಂಗ್‌ ಕೊಟ್ಟಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಜಮೀರ್‌ ನಡುವೆ ಆಗ್ಗಾಗ್ಗೆ ವಾಕ್ಸಮರ ನಡೆಯುತ್ತಿರುತ್ತದೆ. ಯತ್ನಾಳ್‌ ಅವರು ನೀಡಿರುವ ಹೇಳಿಕೆಗೆ ಜಮೀರ್‌ ವಿರೋಧಿಸಿದ್ದಾರೆ. ಜನರಲ್ಲಿ ತಪ್ಪು ಭಾವನೆ ಮೂಡಿಸಬೇಡ್ರಿ ಎಂದು ಕಿಡಿಕಾರಿದ್ದಾರೆ. ಬೇರೆ ಅವರಿಗೆ ಸೇರಿದ ಆಸ್ತಿಗೆಲ್ಲವೂ ಖಾತೆ ಮಾಡಿಸಿಕೊಡಲು ಜಮೀರ್ ಅಹಮದ್ ಬರುತ್ತಿದ್ದಾರೆ ಎಂದು ಯತ್ನಾಳ್ ಹೇಳಿರುವ ಮಾತಿಗೆ ಜಮೀರ್‌ ಅವರು ಕೆಂಡಾಮಂಡಲರಾಗಿದ್ದಾರೆ. ಮಿಸ್ಟರ್‌ ಯತ್ನಾಳ್‌, ವಖ್ಫ್ ಬೋರ್ಡ್ ಆಸ್ತಿ ಯಾರಪ್ಪನದು ಅಲ್ಲ. ವಖ್ಫ್‌ ಬೋರ್ಡ್‌ ಆಸ್ತಿ ದಾನಿಗಳು ಸಮುದಾಯಕ್ಕೆ ಕೊಟ್ಟಿರುವ ದಾನ ಕಣ್ರಿ ಅಂತ ಹೇಳಿದ್ದಾರೆ.

Talks between Minister Zameer Ahmed Khan and Basanagouda Patil Yatnal

ವಿಜಯಪುರದಲ್ಲಿ ವಖ್ಫ್ ಅದಾಲತ್ ನಡೆಯುತ್ತಿದೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು, ವಖ್ಫ್ ಅದಾಲತ್ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು. ವಿಜಯಪುರದಲ್ಲಿ ಬೇರೆಯವರಿಗೆ ಸೇರಿದ ಆಸ್ತಿಗಳಿಗೆ ಖಾತಾ ಮಾಡಿಸಿಕೊಡಲು ಜಮೀರ್‌ ಬರ್ತಾ ಇದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದರು. ಯತ್ನಾಳ್‌ಗೆ ಟಾಂಗ್‌ ಕೊಟ್ಟಿರುವ ಜಮೀರ್‌ ಅಹ್ಮದ್‌ ಖಾನ್‌ ಅವರು, ಮಿಸ್ಟರ್‌ ಯತ್ನಾಳ್ ವಖ್ಫ್ ಬೋರ್ಡ್ ಆಸ್ತಿ ಯಾರಪ್ಪನದು ಅಲ್ಲ. ವಖ್ಫ್ ಆಸ್ತಿ ಸರ್ಕಾರದಿಂದ ಪಡೆದಿಲ್ಲ, ಬದಲಿಗೆ ಸರ್ಕಾರಿ ಸಂಸ್ಥೆಗಳೇ ವಖ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿವೆ. ಖಬರಸ್ಥಾನಕ್ಕೆ ಹೊರತುಪಡಿಸಿದರೆ, ವಖ್ಫ್ ಬೋರ್ಡ್‌ಗೆ ಸರ್ಕಾರ ಜಮೀನು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ವ್ಯವಸ್ಥಿತವಾಗಿ ತಪ್ಪು ಅಭಿಪ್ರಾಯ: ಇನ್ನು ವಖ್ಫ್ ಆಸ್ತಿಯ ಬಗ್ಗೆ ವ್ಯವಸ್ಥಿತವಾಗಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಈ ರೀತಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಬೇಡಿ ಎಂದು ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ. ವಖ್ಫ್‌ ಆಸ್ತಿಯನ್ನು ದಾನವಾಗಿ ನೀಡಲಾಗಿದೆ. ಇದು ಸರ್ಕಾರದಿಂದ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯತ್ನಾಳ್‌ ಬಗ್ಗೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಜಮೀರ್‌ ಅವರು, ವಖ್ಫ್ ಆಸ್ತಿ ನಿಮ್ಮಪ್ಪನದೂ ಅಲ್ಲ, ನಮ್ಮಪ್ಪನದು ಅಲ್ಲ. ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟ ದೇವರ ಆಸ್ತಿ ಎಂದು ಖಾರವಾಗಿಯೇ ಹೇಳಿದ್ದಾರೆ.

Talks between Minister Zameer Ahmed Khan and Basanagouda Patil Yatnal

ಇನ್ನು ವಿಜಯಪುರ ವಖ್ಫ್ ಆದಾಲತ್‌ಗೆ ಸಂಬಂಧಿಸಿಂತೆ ಮಾತನಾಡಿದ್ದಾರೆ. ವಖ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಿ ಶಿಕ್ಷಣ ಮತ್ತು ಅರೋಗ್ಯ ಸೇವೆಗೆ ಬಳಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಖ್ಫ್ ಅದಾಲತ್ ನಡೆಸಲಾಗುತ್ತಿದೆ. ಬಿಜಾಪುರದಲ್ಲಿ ಒಟ್ಟು 338 ಅರ್ಜಿ ಬಂದಿದೆ. ಅದರಲ್ಲಿ 17 ಒತ್ತುವರಿ, 81 ಖಾತೆ, 77 ಖಬರಾಸ್ಥಾನ, 25 ಸರ್ವೇ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸಂಬಂಧಪಟ್ಟಿದೆ. ಈ ಸಮಸ್ಯೆಗಳಿಗೆ ಶೀಘ್ರ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ವಖ್ಫ್ ಆಸ್ತಿ ಒತ್ತುವರಿ ಆಗಿದ್ದು ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಖ್ಫ್ ಆಸ್ತಿ ಸಂರಕ್ಷಣೆ ಮಾಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದು ಪುನರುಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+