Tailoring Training: ಟೈಲರಿಂಗ್ ಉಚಿತ ತರಬೇತಿ ಪಡೆಯಲು ಅರ್ಜಿ ಆಹ್ವಾನ, ಯಾರೆಲ್ಲಾ ಅರ್ಜಿ ಹಾಕಬಹುದು?
ಸ್ವಂತ ಉದ್ಯೋಗ ಶುರು ಮಾಡಬೇಕು ಅನ್ನೋದು ಬಹು ಜನರ ಆಸೆ, ಆದರೆ ಸರಿಯಾದ ಮಾರ್ಗದರ್ಶನ & ಕೌಶಲ್ಯ ಇಲ್ಲದೆ ಉದ್ಯೋಗ ಶುರು ಮಾಡುವುದು ಕಷ್ಟ. ಹಾಗೇ ದುಡಿಯಲು ಕೂಡ ಕೌಶಲ್ಯ ಬೇಕೆ ಬೇಕು. ಕರ್ನಾಟಕದಲ್ಲಿ ಕೂಡ ಈ ರೀತಿ ಸ್ಕಿಲ್ ಡೆವಲಪ್ ಮಾಡುವ ಹಲವು ಯೋಜನೆಗಳು ಜಾರಿಗೆ ಬರುತ್ತಿವೆ. ಸರ್ಕಾರದ ಮೂಲಕ ಹಾಗೂ ಖಾಸಗಿ ಸಂಸ್ಥೆಗಳ ಮೂಲಕ ಕೂಡ ವಿವಿಧ ವಲಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಇದೀಗ ಟೈಲರಿಂಗ್ ಉಚಿತ ತರಬೇತಿ ಪಡೆಯಲು ಅರ್ಜಿಯನ್ನ ಆಹ್ವಾನಿಸಲಾಗಿದೆ. ಹಾಗಾದರೆ ಯಾರೆಲ್ಲಾ ಅರ್ಜಿ ಹಾಕಬಹುದು? ಮುಂದೆ ಓದಿ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ & ಕೆನರಾ ಬ್ಯಾಂಕ್ ಸಹಯೋಗದಲ್ಲಿ ಇದೀಗ ರುಡ್‌ಸೆಟ್ ಸಂಸ್ಥೆಯಿಂದ ಟೈಲರಿಂಗ್ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಮೂಲಕ ಮಹಿಳೆಯರಿಗಾಗಿ ಟೈಲರಿಂಗ್ ಕುರಿತು 31 ದಿನಗಳ ಉಚಿತ ತರಬೇತಿ ನವೆಂಬರ್ 11 ರಿಂದ ಹಮ್ಮಿಕೊಂಡು, ಇದಕ್ಕಾಗಿ ಈಗ ಅರ್ಜಿ ಆಹ್ವಾನ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲಾ ವ್ಯಾಪ್ತಿಗೆ ಬರುವ ಆಸಕ್ತ ಗ್ರಾಮೀಣ ನಿರುದ್ಯೋಗಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಯುವತಿಯರು ಈಗ ಅರ್ಜಿ ಸಲ್ಲಿಸಬಹುದು.

ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಂದಹಾಗೆ ಆಸಕ್ತರು ಟೈಲರಿಂಗ್ ಉಚಿತ ತರಬೇತಿ ಪಡೆಯಲು ನವೆಂಬರ್ 05, 2025ರ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು. 18 ರಿಂದ 45 ವರ್ಷ ವಯಸ್ಸಿನವರು ಅರ್ಜಿಯನ್ನು ನವೆಂಬರ್ 05, 2025ರ ಒಳಗೆ ಸಲ್ಲಿಸಬೇಕು. ಹಾಗೇ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ ಆಗಿರುವ 9241482541, 9740982585, 9113880324 ಮೂಲಕ ಕೂಡ ಸಂಪರ್ಕ ಮಾಡಬಹುದು ಎಂದು ತಿಳಿಸಲಾಗಿದೆ.
ಕುರಿ & ಮೇಕೆ ಸಾಕಾಣಿಕೆ ತರಬೇತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕುರಿ & ಮೇಕೆ ಸಾಕಾಣಿಕೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಶಿಬಿರ ಅಕ್ಟೋಬರ್ 27 ರಿಂದ ಒಟ್ಟಾರೆ 13 ದಿನಗಳ ಕಾಲ ನಡೆಯಲಿದ್ದು, ನಿರುದೋಗಿ ಪುರುಷ ಮತ್ತು ಮಹಿಳೆಯರಿಗೆ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹೀಗೆ ತರಬೇತಿ ಪಡೆಯಲು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಆಗಿರುವ, 8970476050, 9686248369, 9591514754 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications