SWR: ಹುಬ್ಬಳ್ಳಿಯಿಂದ ದೀಪಾವಳಿಗೆ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ ಹೀಗಿದೆ

ಬೆಂಗಳೂರು, ಸೆಪ್ಟಂಬರ್ 01: ಗಣೇಶ ಹಬ್ಬದ ಈಗಷ್ಟೇ ಕೊನೆಗೊಂಡಿದೆ. ಜನರು ಛತ್, ದಸರಾ ಹಬ್ಬ ಹಾಗೂ ಬೆಳಕಿನ ಹಬ್ಬ ದೀಪಾವಳಿ 2025 ಸಡಗರಕ್ಕೆ ಸಜ್ಜಾಗುತ್ತಿದ್ದಾರೆ. ಈ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು (South Western Railway) ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. ಹಾಗಾದರೆ ಎಲ್ಲಿಗೆ ರೈಲು ಸಂಚಾರ, ಸಮಯ, ವೇಳಾಪಟ್ಟಿ ಪೂರ್ಣ ಮಾಹಿತಿ ಇಲ್ಲಿದೆ.

ಸೋಮವಾರ ನೈಋತ್ಯ ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಎಸ್‌ಎಸ್‌ಎಸ್‌ ಹುಬ್ಬಳ್ಳಿ ಜಂಕ್ಷನ್‌ನಿಂದ-ರಕ್ಸೌಲ್ (ಬಿಹಾರ) ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ರೈಲು ಬೆಂಗಳೂರಿನ ಮಾರ್ಗವಾಗಿ ಸಾಗುವುದರಿಂದ ಇದರಿಂದ ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಯಾಣಿಕರಿಗೂ ಹೆಚ್ಚುವರಿ ರೈಲು ಸಾರಿಗೆ ಸಿಕ್ಕಂತಾಗುತ್ತದೆ. ಈ ರೈಲಿನ ಸಂಖ್ಯೆ, ಕಾರ್ಯಾಚರಣೆ, ಮಾರ್ಗಗಳ ವಿವರ ಇಲ್ಲಿದೆ.

SWR Operate Special Trains Between SSS Hubballi -Raxaul Bihar Know Timings Schedule

SSS ಹುಬ್ಬಳ್ಳಿ-ರಕ್ಸೌಲ್ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 07357) ಸೆಪ್ಟಂಬರ್ 06 ರಿಂದ 27.12.2025 ರವರೆಗೆ ಕಾರ್ಯಾಚರಣೆ ಮಾಡಲಿದೆ. ಪ್ರತಿ ಶನಿವಾರ ಬೆಳಗ್ಗೆ 9:00 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಸೋಮವಾರ ಮಧ್ಯಾಹ್ನ 22:05 ಗಂಟೆಗೆ ರಕ್ಸೌಲ್ ತಲುಪುತ್ತದೆ. ಮರಳಿ ಅದೇ ದಿಕಿನಲ್ಲಿ ರಕ್ಸೌಲ್-SSS ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲು (07358) 09.09.2025 ರಿಂದ 30.12.2025 ರವರೆಗೆ ಸಂಚಾರ ಮಾಡಲಿದೆ. ಪ್ರತಿ ಮಂಗಳವಾರ ಸಂಜೆ 4:55 ಗಂಟೆಗೆ ರಕ್ಸೌಲ್‌ನಿಂದ ಹೊರಟು ಶುಕ್ರವಾರ ಬೆಳಗ್ಗೆ 05:25 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಬಂದು ಸೇರುತ್ತದೆ.

ನಿಲುಗಡೆಯ ನಿಲ್ದಾಣಗಳು ಯಾವುವು?

ಹಬ್ಬದ ಋತುವಿನ ಈ ವಿಶೇಷ ರೈಲುಗಳು ಎರಡು ಬದಿ ಸಂಚಾರದ ವೇಳೆ ಎಸ್‌ಎಂಎಂ ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಲಹಂಕ, ಧರ್ಮಾವರಂ, ಗುಂತಕಲ್, ಕೃಷ್ಣಾ, ಸಿಕಂದರಾಬಾದ್, ಕಾಜಿಪೇಟ್, ಬಲ್ಹರ್ಷಾ, ಚಂದ್ರಾಪುರ, ನಾಗ್ಪುರ, ಆಮ್ಲಾ, ಬೇತುಲ್, ಇಟಾರ್ಸಿ, ಪಿಪಾರಿಯಾ, ಮದನ್‌ಸಿಂಗ್, ಮಹಾನ್‌ಪುರ, ನರಸಿಂಗ್, ಪ್ರಯಾಗರಾಜ್ ಛೇಕಿ, ಮಿರ್ಜಾಪುರ್, ಪಂ.ದೀನ್ ದಯಾಳ್ ಉಪಾಧ್ಯಾಯ ಜೂ., ಬಕ್ಸರ್, ಅರಾ, ದಾನಪುರ್, ಪಾಟ್ಲಿಪುತ್ರ, ಸೋನ್‌ಪುರ್, ಹಾಜಿಪುರ್, ಮುಜಾಫರ್‌ಪುರ್, ಸಿತಾಮರ್ಹಿ ಮತ್ತು ಬೈರ್ಗಾನಿಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

ಒಟ್ಟು 23 ಕೋಚ್‌ಗಳನ್ನು ಹೊಂದಿರುವ ಈ ರೈಲುಗಳಲ್ಲಿ 02 ಎಸಿ 2-ಟೈರ್, 05 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್/ಡಿ ಕೋಚ್‌ಗಳು ಇವೆ. ಛತ್, ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ತೆರಳುವ ಲಕ್ಷಾಂತರ ಪ್ರಯಾಣಿಕರು ಈ ಸೌಲಭ್ಯ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+