ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್: ವಿಶೇಷ ರೈಲುಗಳ ಸೇವಾವಧಿ ವಿಸ್ತರಣೆ, ಹೊಸ ನಿಲ್ದಾಣದಲ್ಲಿ ನಿಲುಗಡೆ
ಬೆಂಗಳೂರು, ಅಕ್ಟೋಬರ್ 29: ರೈಲ್ವೆ ಮಂಡಳಿಯು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ-ಮುಜಫರಪುರ-ಬೆಂಗಳೂರು ಕಂಟೋನ್ಸೆಂಟ್ (06261/06262) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಿಸಿದೆ. ಈ ಮೂಲಕ ಪ್ರತಿ ದಿಕ್ಕಿನಲ್ಲಿ ಒಟ್ಟು ಆರು ಹೆಚ್ಚುವರಿ ಟ್ರಿಪ್‌ಗಳನ್ನು ಓಡಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಹೊಸ ಜಂಕ್ಷನ್‌ನಲ್ಲಿ ಬೆಂಗಳೂರಿನ ರೈಲು ಸೇರಿದಂತೆ ವಿವಿಧ ರೈಲುಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.
ಯಶವಂತಪುರ-ಮುಜಫರಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06261), ಈ ಹಿಂದೆ ಅಕ್ಟೋಬರ್ 22 ಸಂಚರಿಸಲು ನಿಗದಿಯಾಗಿತ್ತು. ಇದೀಗ ಇದರ ಅವಧಿಯನ್ನು ಅಕ್ಟೋಬರ್ 29 ರಿಂದ 2025 ಡಿಸೆಂಬರ್ 3 ರವರೆಗೆ (ಬುಧವಾರ) ವಿಸ್ತರಣೆ ಮಾಡಲಾಗಿದೆ.

ಮುಜಫರಪುರ-ಬೆಂಗಳೂರು ಕಂಟೋನ್ಸೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (ರೈಲು 06262) 2025 ಅಕ್ಟೋಬರ್ 24 ರವರೆಗೆ ಮಾತ್ರ ಪ್ರಯಾಣ ನಿಗದಿ ಆಗಿತ್ತು. ಈ ರೈಲು ಈಗ ಅಕ್ಟೋಬರ್ 31 ರಿಂದ 2025 ಡಿಸೆಂಬರ್ 5 ರವರೆಗೆ (ಶುಕ್ರವಾರ) ಸಂಚಾರ ಮುಂದುವರಿಸಲಿದೆ.
ಈ ವಿಶೇಷ ರೈಲುಗಳು ತಮ್ಮ ಅಸ್ತಿತದಲ್ಲಿರುವ ನಿಲುಗಡೆಗಳು, ಬೋಗಿಗಳ ಸಂಯೋಜನೆ ಮತ್ತು ಸಮಯಗಳು ಸಂಚರಿಸುತ್ತವೆ. ಆದರೆ, ಮುಜಫರಪುರ-ಬೆಂಗಳೂರು ಕಂಟೋನ್ಸೆಂಟ್ ಎಕ್ಸ್‌ಪ್ರೆಸ್ ರೈಲು (06262) ಬೆಂಗಳೂರು ಕಂಟೋನ್ಸೆಂಟ್ ನಿಲ್ದಾಣಕ್ಕೆ ಆಗಮಿಸುವ ಸಮಯದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ 2 ಪ್ರಕಾರ, ರೈಲು (06262) ಬೆಂಗಳೂರು ಕಂಟೋನ್ವೆಂಟ್ ನಿಲ್ದಾಣಕ್ಕೆ ಈ ಹಿಂದೆ ನಿಗದಿತ ಬೆಳಗ್ಗೆ 06:30ರ ಬದಲಾಗಿ ಹೊಸ ಸಮಯದ ಪ್ರಕಾರ ಬೆಳಗ್ಗೆ 07:30 ಗಂಟೆಗೆ ಆಗಮಿಸುತ್ತದೆ. ಪ್ರಯಾಣಿಕರು ಗಮನಿಸುವಂತೆ ನೈಋತ್ಯ ರೈಲ್ವೆ ತಿಳಿಸಿದೆ.
ಕಾಯಂಕುಳಂ ಜಂಕ್ಷನ್‌ನಲ್ಲಿ ಪ್ರಾಯೋಗಿಕ ನಿಲುಗಡೆ
ತಿರುವನಂತಪುರಂ ನಾರ್ತ್ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ಹಮ್ ಸಫರ್ ದಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ (16319/16320) ಕಾಯಂಕುಳಂ ಜಂಕ್ಷನ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆಗೆ ಸೂಚನೆ ನೀಡಲಾಗಿದೆ. ಈ ನಿಲುಗಡೆಯ ಸೌಲಭ್ಯ 2025 ನವೆಂಬರ್ 1ರಿಂದ ತಮ್ಮ ಪ್ರಯಾಣ ಪ್ರಾರಂಭಿಸುವ ಈ ಮೇಲಿನ ಎರಡು ರೈಲುಗಳಿಗೆ (ತಿರುವನಂತಪುರಂ ನಾರ್ತ್-ಎಸ್‌ಎಂವಿಟಿ ಬೆಂಗಳೂರು) ಅನ್ವಯವಾಗುತ್ತದೆ. ಜೊತೆಗೆ, ವಾಪಸಾತಿ ಮಾರ್ಗದಲ್ಲಿ, 2025 ನವೆಂಬರ್ 2 ರಿಂದ ಪ್ರಯಾಣ ಪ್ರಾರಂಭಿಸುವ ರೈಲು ಸಂಖ್ಯೆ 16320 (ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ನಾರ್ತ್) ರೈಲಿಗೂ ಸಹ ಅನ್ವಯವಾಗುತ್ತದೆ.
ತಿರುವನಂತಪುರಂ ನಾರ್ತ್‌ನಿಂದ ಬೆಂಗಳೂರಿನತ್ತ ಸಾಗುವ ಈ ಹಮ್ಮಫರ್ ಎಕ್ಸ್‌ಪ್ರೆಸ್ ರೈಲು (16319) ಕಾಯಂಕುಳಂ ಜಂಕ್ಷನ್'ಗೆ ಸಂಜೆ 7:42 ಗಂಟೆಗೆ ಆಗಮಿಸಿ, ಸಂಜೆ 7:44 ಗಂಟೆಗೆ ಪ್ರಯಾಣ ಮುಂದುವರಿಯಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು (16320) ಬೆಂಗಳೂರಿನಿಂದ ತಿರುವನಂತಪುರಂ ನಾರ್ತ್ ಕಡೆಗೆ ಚಲಿಸುವ ಈ ಎಕ್ಸ್‌ಪ್ರೆಸ್, ಕಾಯಂಕುಳಂ ಜಂಕ್ಷನ್‌ಗೆ ಬೆಳಗ್ಗೆ 7:38 ಗಂಟೆಗೆ ತಲುಪಿ, ಬೆಳಗ್ಗೆ 7:40 ಗಂಟೆಗೆ ನಿರ್ಗಮಿಸುತ್ತದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications