SWR: ಜನವರಿ 08ರವರೆಗೆ ವಿವಿಧ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
ಬೆಂಗಳೂರು, ನವೆಂಬರ್ 25: ವೀರಾಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣದ 03ನೇ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ರದ್ದುಗೊಳಿಸಲಾಗಿದೆ. ಜೊತೆಗೆ ರೈಲುಗಳ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಪ್ಡೇಟ್ ನೀಡಿದೆ. ಪ್ರಯಾಣಿಕರು ಗಮನಿಸಿ ತಮ್ಮ ಸಾರಿಗೆ ಸಂಚಾರಕ್ಕೆ ಪ್ಲಾನ್ ಮಾಡಿಕೊಳ್ಳುವಂತೆ ಕೋರಲಾಗಿದೆ.
ಈ ಕಾಮಗಾರಿಗಳು ನವೆಂಬರ್ 25ರಿಂದ ಜನವರಿ 8, 2026ರವರೆಗೆ ನಡೆಯಲಿ. ಈ ಕಾರಣದಿಂದ ಕಾಮಗಾರಿ ಪ್ರಭಾವವು ದಕ್ಷಿಣ ಪಶ್ಚಿಮ ರೈಲು ವಲಯದ ಹಲವು ರೈಲು ಸೇವೆಗಳ ಮೇಲಾಗಲಿದೆ. ಮೊದಲನೆಯದಾಗಿ, ಲಾಲ್ಕುವಾ-ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ (05074) ನವೆಂಬರ್ 29ರಿಂದ 2026 ಜನವರಿ 3ರವರೆಗೆ ರದ್ದುಗೊಳ್ಳಲಿದೆ.

ಕೆಎಸ್ಆರ್ ಬೆಂಗಳೂರು-ಲಾಲ್ಕುವಾ ಸಾಪ್ತಾಹಿಕ ವಿಶೇಷ (05073), ಡಿಸೆಂಬರ್ 2ರಿಂದ 2026 ಜನವರಿ 6ರವರೆಗೆ ಸಂಚರಿಸುವುದಿಲ್ಲ, ರದ್ದುಗೊಳಿಸಲಾಗಿದೆ. ಅದೇ ರೀತಿ ಹುಬ್ಬಳ್ಳಿ-ಯೋಗನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ (07363) ನವೆಂಬರ್ 24 ರಿಂದ 2026 ಜನವರಿ 5ರವರೆಗೆ, ಯೋಗನಗರಿ ಋಷಿಕೇಶ-ಹುಬ್ಬಳ್ಳಿ ವಿಶೇಷ (07364) ನವೆಂಬರ್ 27 2025 ರಿಂದ 2026 ಜನವರಿ 8ರವರೆಗೆ ರದ್ದುಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಯಶವಂತಪುರ-ಯೋಗನಗರಿ ಋಷಿಕೇಶ ವಿಶೇಷ (06597) ನವೆಂಬರ್ 27 ಮತ್ತು ಯೋಗನಗರಿ ಋಷಿಕೇಶ-ಯಶವಂತಪುರ ವಿಶೇಷ (06598) ನವೆಂಬರ್ 29 ಸೇವೆಗಳನ್ನು ಕೂಡ ರದ್ದುಗೊಳಿಸಲಾಗಿದೆ. ಈ ರದ್ದತಿಗಳು ಹೆಚ್ಚಿನ ಸಂಖ್ಯೆಯ ಉತ್ತರ ದಿಕ್ಕಿನ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಾರ್ಗ ಬದಲಾವಣೆಯಾದ ರೈಲುಗಳು
ಮಾರ್ಗ ಬದಲಾವಣೆ ವಿಭಾಗದಲ್ಲಿ, ದೆಹಲಿ ಸರಾಯಿ ರೋಹಿಲ್ಲಾ-ಯಶವಂತಪುರ ಸಾಪ್ತಾಹಿಕ ದುರಂತೋ ಎಕ್ಸ್‌ಪ್ರೆಸ್ (12214) ಡಿಸೆಂಬರ್ 1ರಿಂದ 2026 ಜನವರಿ 5ರವರೆಗೆ ಪ್ರತೀ ಸೋಮವಾರ ಸಂಚರಿಸುವಾಗ ಮಥುರಾ, ಬಯಾನಾ, ಸೋಗಾರಿಯಾ, ರುಶಿಯಾಯಿ ಮತ್ತು ಬಿನಾ ಮಾರ್ಗವಾಗಿ ಚಲಿಸುತ್ತದೆ.
ಎಸ್ಎಂವಿಟಿ ಬೆಂಗಳೂರು-ಗೋಮತಿ ನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್ (06529) ನವೆಂಬರ್ 24 ರಿಂದ ಡಿಸೆಂಬರ್ 22 ರವರೆಗೆ ಮತ್ತು ಗೋಮತಿ ನಗರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ (06530) ನವೆಂಬರ್ 28ರಿಂದ ಡಿಸೆಂಬರ್ 26ರವರೆಗೆ ಪ್ರಯಾಣಿಸಲಿದೆ. ಈ ರೈಲು ಗೋವಿಂದಪುರಿ, ಭಿಂಸೆನ್, ಓಹನ್ ಕೇಬಿನ್, ಸತ್ರಾ ಮತ್ತು ಇಟರ್ಸಿ ಮಾರ್ಗವಾಗಿ ಸಂಚಾರ ಮಾಡಲಿದೆ ಎಂದು SWR ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.












Click it and Unblock the Notifications