Get Updates
Get notified of breaking news, exclusive insights, and must-see stories!

ಪ್ರಮಾಣ ವಚನ ಸಮಾರಂಭ: ವಿಧಾನಸೌಧ, ರಾಜಭವನ ಬಿಟ್ಟು ಕಂಠೀರವ ಸ್ಟೇಡಿಯಂ ಯಾಕೆ?

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ (ಮೇ 20) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಇಲ್ಲೇ ಪ್ರಮಾಣ ವಚನ ಸ್ವೀಕರಿಸಿ ಪೂರ್ಣಾವಧಿಯಾಗಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರು.

ನಾಡಿನ ದೊರೆ ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಪೂರ್ಣಾವಧಿಗೆ ನಡೆಸಲು ಆಗುವುದಿಲ್ಲ ಎನ್ನುವ ಆಪಾದನೆಯಿದೆ. ಆದರೆ, ಹತ್ತು ವರ್ಷದ ಹಿಂದೆ ಸಿದ್ದರಾಮಯ್ಯನವರು ಏಳೆಂಟು ಬಾರಿ ಅಲ್ಲಿಗೆ ಹೋಗಿದ್ದರು. ಆ ಮೂಲಕ ಇದೆಲ್ಲಾ ಹುಸಿ ನಂಬಿಕೆ ಎಂದು ಸಾಬೀತು ಪಡಿಸಿದ್ದರು. ಆದರೆ, ಸಿದ್ದರಾಮಯ್ಯ ಕಳೆದ ಬಾರಿ ಎರಡನೆಯ ಬಾರಿ ಅಧಿಕಾರ ಹಿಡಿಯಲು ವಿಫಲರಾಗಿದ್ದರು, ಈಗ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Swearing Inn Ceremony At Vidhana Soudha

ಚಾಮರಾಜನಗರದಂತೆಯೇ ವಿಧಾನಸೌಧಕ್ಕೂ ಇದೇ ರೀತಿಯ ಅಪವಾದವಿದೆ. ವಿಧಾನಸೌಧದ ಆವರಣದಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಾವ ಮುಖ್ಯಮಂತ್ರಿಯೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ರಾಜ್ಯದ ಇತಿಹಾಸದಲ್ಲಿ ಹಿಂದೆ ದೇವರಾಜ ಅರಸು ಇದಾದ ನಂತರ ಸಿದ್ದರಾಮಯ್ಯ ಮಾತ್ರ ಐದು ವರ್ಷದ ಆಡಳಿತ ಪೂರ್ಣಗೊಳಿಸಿರುವುದು.

ದೇವರಾಜ ಅರಸರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ, ಸಿದ್ದರಾಮಯ್ಯ ಕಳೆದ ಬಾರಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಹಿಂದೆಲ್ಲಾ ರಾಜಭವನದ ಗಾಜಿನ ಮನೆಯಲ್ಲೇ ಈ ಕಾರ್ಯಕ್ರಮಗಳು ನಡೆಯುತ್ತಿದ್ದವು. ವಿಧಾನಸೌಧದಲ್ಲಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಂತಹ ಸಂದರ್ಭದಲ್ಲಿ.

ಹೆಗಡೆ ರಾಜೀನಾಮೆ ನೀಡುವ ಸ್ಥಿತಿ

ಒಂದು ವರ್ಷದಲ್ಲಿಯೇ ಹೆಗಡೆ ರಾಜೀನಾಮೆ ನೀಡುವ ಸ್ಥಿತಿ ಎದುರಾಗಿತ್ತು. ಆದರೆ ಮೂರು ದಿನಗಳಲ್ಲಿಯೇ ರಾಜೀನಾಮೆ ವಾಪಸ್ ಪಡೆದರು. 1988ರಲ್ಲಿ ಫೋನ್ ಕದ್ದಾಲಿಕೆ ಆರೋಪ ಎದುರಾದಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. 1990ರಲ್ಲಿ ವೀರೇಂದ್ರ ಪಾಟೀಲ್ ಅವರ ಬಳಿಕ ಮುಖ್ಯಮಂತ್ರಿಯಾದ ಸಾರೇಕೊಪ್ಪ ಎಸ್. ಬಂಗಾರಪ್ಪ ವಿಧಾನಸೌಧದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Swearing Inn Ceremony At Vidhana Soudha

ವಿಧಾನಸೌಧದಲ್ಲಿ ಎಸ್.ಎಂ. ಕೃಷ್ಣ ಪ್ರಮಾಣ ವಚನ

ಎರಡು ವರ್ಷದ ನಂತರ ಕಾವೇರಿ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಬೇಕಾಯಿತು. ಇದಾದ ನಂತರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಎಸ್.ಎಂ. ಕೃಷ್ಣ . 1999ರಲ್ಲಿ ಮುಖ್ಯಮಂತ್ರಿಯಾದ ಅವರು ಅವಧಿಗೆ ಮುನ್ನವೇ ಚುನಾವಣೆ ಎದುರಿಸಲು ಮುಂದಾಗಿದ್ದರು.

ಧರಂ ಸಿಂಗ್ ಸಿಎಂ ಆಗಿ ಶಕ್ತಿ ಕೇಂದ್ರದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು

2004ರಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿದಾಗ ಧರಂ ಸಿಂಗ್ ಮುಖ್ಯಮಂತ್ರಿಯಾಗಿ ಶಕ್ತಿ ಕೇಂದ್ರದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಎರಡು ವರ್ಷದ ಬಳಿಕ ಸರ್ಕಾರ ಉರುಳಿ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದಾಗಲೂ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

20 ತಿಂಗಳ ಬಳಿಕ ಕುಮಾರಸ್ವಾಮಿ ಆಡಳಿತ ಕೊನೆಗೊಂಡಿತ್ತು

20 ತಿಂಗಳ ಬಳಿಕ ಕುಮಾರಸ್ವಾಮಿ ಆಡಳಿತ ಕೊನೆಗೊಂಡಿತ್ತು. ಆದರೆ ಜೆಡಿಎಸ್ ಬೆಂಬಲ ಮುಂದುವರಿಸಲು ಒಪ್ಪದ ಕಾರಣ ಬಿ.ಎಸ್. ಯಡಿಯೂರಪ್ಪ ಏಳು ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಹ ಯಡಿಯೂರಪ್ಪ ವಿಧಾನಸೌಧದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು. ಅಕ್ರಮ ಗಣಿಗಾರಿಕೆಗೆ ಆರೋಪದ ವರದಿಯಡಿ ಅವರು ಮೂರು ವರ್ಷದಲ್ಲಿಯೇ ಅಧಿಕಾರ ತ್ಯಜಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ

ಇನ್ನು 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂತು. ಆಪರೇಶನ್ ಕಮಲ ನಡೆದು ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನಗೊಂಡಿತು. ಹಾಗಾಗಿ, ರಾಜ್ಯದ ಶಕ್ತಿಕೇಂದ್ರದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+