ಸಾರ್ಥಕತೆ ತಂದ ಸ್ವಾಮಿ ವಿವೇಕಾನಂದ ಜಯಂತಿ
ಸ್ವಂತಕ್ಕಾಗಿ ಚಿಂತಿಸದೇ ಸದಾಕಾಲವೂ ದೇಶ-ಸಮಾಜದ ಬಗ್ಗೆ ಚಿಂತಿಸುವುದು, ನಮ್ಮನ್ನು ನಾವು ಗೆಲ್ಲುವುದೇ ಸ್ವಾಮಿ ವಿವೇಕಾನಂದರ ತತ್ವ ಎಂದು ಮಂಜುಗುಣಿಯ ಶ್ರೀ ವೆಂಕಟೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವಿ. ಶ್ರೀನಿವಾಸ್ ಭಟ್ ಹೇಳಿದ್ದಾರೆ. ಅವರು ನಿನ್ನೆ (ಜ 12) ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ನಡೆದ ವೀರಭಾರತ್ ಸಮಾರೋಪ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದು ಉಪನ್ಯಾಸ ನೀಡುತ್ತಿದ್ದರು.
"ಸ್ವಾಮಿ ವಿವೇಕಾನಂದರು ಇಂದ್ರಿಯಗಳನ್ನು ಗೆದ್ದಿದ್ದರು. ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ, ತಾಯಿ ಭಾರತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸಿದರು. ಅವರ ಜೀವನದಲ್ಲಿ ಅನೇಕಾನೇಕ ಕಷ್ಟಗಳು, ನಿಂದನೆಗಳು, ಆರೋಪಗಳನ್ನು ಎದುರಿಸಿದರೂ ಅವರು ತಮ್ಮ ಕಾರ್ಯಸಾಧನೆಯನ್ನು ಬಿಡಲಿಲ್ಲ. ಹಾಗಾಗಿಯೇ ಯಾವ ಶಸ್ತ್ರಗಳನ್ನು ಹಿಡಿಯದಿದ್ದರೂ ಅವರನ್ನು ವೀರ ಸನ್ಯಾಸಿ ಎಂದು ಕರೆಯಲಾಗಿದೆ" ಎಂದು ಭಟ್ ಹೇಳಿದರು.
"ಜಯಕಾರ ಹಾಕುವಾಗ ಆ ವ್ಯಕ್ತಿ ಅಥವಾ ಶಕ್ತಿಯ ತತ್ತ್ವಾದರ್ಶಗಳನ್ನು ಅರ್ಥೈಸಿಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆ ಜೈಕಾರಕ್ಕೆ ಅರ್ಥ ಬರುತ್ತದೆ. ನಮಗೆಲ್ಲ ಜಯವಾಗುತ್ತದೆ, ಇದರಿಂದ ದೇಶಕ್ಕೆ ಜಯವಾಗುತ್ತದೆ".

"ಜೀವನದಲ್ಲಿ ಗುರಿ ಹಾಕಿಕೊಳ್ಳುವುದು ಸುಲಭ, ಆದರೆ ಸೂಕ್ತ ಮಾರ್ಗದರ್ಶನ ಮಾಡುವಂತ ಗುರುವನ್ನು ಹೊಂದುವುದು ದುರ್ಲಭ, ವಿವೇಕಾನಂದರಂತಹ ವಿವೇಕಾನಂದರಿಗೆ ರಾಮಕೃಷ್ಣರಂತಹ ರಾಮಕೃಷ್ಣರು ಗುರುವಾಗಿ ಲಭಿಸಿದರು. ರಾಮಕೃಷ್ಣರು ತಮ್ಮಲ್ಲಿರುವ ಆಧ್ಯಾತ್ಮಿಕ ತೇಜಸ್ಸನ್ನು ವಿವೇಕಾನಂದರಲ್ಲಿ ತುಂಬಿದರೆ, ವಿವೇಕಾನಂದರನ್ನು ಮಾನಸಪುತ್ರನನ್ನಾಗಿ ಸ್ವೀಕರಿಸಿದ ಶಾರದಾ ಮಾತೆಯವರು ತಮ್ಮಲ್ಲಿರುವ ಚೈತನ್ಯವನ್ನೇ ವಿವೇಕಾನಂದರಿಗೆ ಎದೆಹಾಲಿನ ರೂಪದಲಿ ಉಣಿಸಿದರು".
ಆ ಕಾರಣ ವಿವೇಕಾನಂದರು ದೇಶಕ್ಕೇ ಸ್ಪೂರ್ತಿಯಾದರು. ಇದೇ ರೀತಿಯಲ್ಲಿ ಇಂದಿನ ಜನಾಂಗ ಮುಂದಿನ ಪೀಳಿಗೆಗೆ ಚೈತನ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸಬೇಕು" ಎಂದು ಶ್ರೀನಿವಾಸ ಭಟ್ ಹೇಳಿದರು. ಇದಕ್ಕೂ ಮುನ್ನ ಯುವಬ್ರಿಗೇಡ್ ಶಿರಸಿ ಕಾರ್ಯಕರ್ತರು 'ವೀರಭಾರತ್ - ಗುರಿಯತ್ತ ನಡೆ' ಕಾರ್ಯಕ್ರಮದ ಅಂಗವಾಗಿ ದೇವನಳ್ಳಿಯಿಂದ ಪ್ರಾರಂಭಿಸಿ ಮಂಜುಗುಣಿಯವರೆಗೆ ಪಾದಯಾತ್ರೆ ಮಾಡಿದರು.

ದೇವನಹಳ್ಳಿಯ ವೀರಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾದ ವೆಂಕಟೇಶ್ ದಿವೇಕರ್ ಅವರು ಆಂಜನೇಯನಿಗೆ ಹಾಗೂ ಸ್ವಾಮೀಜಿಯವರಿಗೆ ಆರತಿ ಮಾಡುವುದರ ಮೂಲಕ ಚಾಲನೆ ಪಡೆದುಕೊಂಡ ಪಾದಯಾತ್ರೆ ಚಾವಡಿಕೆರೆ, ಕಾರೆಮನೆ, ಗದ್ದೇಮನೆ, ಕಿಬ್ಬಳ್ಳಿ, ಹುಕ್ಲೆಬೈಲ್ ಗ್ರಾಮಗಳಲ್ಲಿ ಮನೆಮನೆಗೆ ಭೇಟಿಕೊಟ್ಟು ಮತ್ತೆ ದೇವನಳ್ಳಿಯನ್ನು ಪ್ರವೇಶಿಸಿತು.
ಮಧ್ಯಾಹ್ನದ ಉಪಹಾರದ ನಂತರ ಕಿರುಗಾರ, ಕಳುಗಾರ, ಹಲ್ಲೆಕೊಪ್ಪ, ಬರಸಗುಣಿ, ಕೊಡಸರ, ಗೊಡೇಗದ್ದೆ ಗ್ರಾಮಗಳಲ್ಲಿನ ಮನೆಮನೆಗೂ ಸಂಚರಿಸಿ ಮಂಜುಗುಣಿಯ ಶ್ರೀನಿವಾಸ ದೇವಸ್ಥಾನವನ್ನು ತಲುಪಲಾಯಿತು. ಅಲ್ಲಿ ದೇವಸ್ಥಾನ ಸಮಿತಿಯವರ ಪ್ರೀತಿಪೂರ್ವಕ ಒತ್ತಾಯದ ಮೇರೆಗೆ ಲಘು ಉಪಹಾರ ಸ್ವೀಕರಿಸಿ ಮೇಲಿನಕೊಪ್ಪಲು ಗ್ರಾಮ ಹಾಗೂ ಮಂಜುಗುಣಿಯ ಬೀದಿಯಲ್ಲಿರುವ ಮನೆಗಳಿಗೆ ಭೇಟಿ ಕೊಟ್ಟು ವಿವೇಕಾನಂದರ ಸಂದೇಶವನ್ನು ತಲುಪಿಸಲಾಯಿತು.

ಪಾದಯಾತ್ರೆಯುದ್ದಕ್ಕೂ ಗ್ರಾಮಸ್ಥರು ಸ್ವಾಮೀಜಿಯವರನ್ನು ಬರಮಾಡಿಕೊಂಡು ಗೌರವಿಸಿದ ರೀತಿ ನಿಜಕ್ಕೂ ಅದ್ಭುತ. ಕಾರ್ಯಕರ್ತರಿಗೆ ಹಲವು ಕಡೆ ತಂಪು ಪಾನಿಯ, ಹಣ್ಣು ಇವುಗಳನ್ನು ಪ್ರೀತಿಯಿಂದ ಕೊಟ್ಟರು.
ಹಳ್ಳಿಗರು ತಾವು ಎಷ್ಟೇ ಕಷ್ಟದಲ್ಲಿದ್ದರೂ ದೇಶದ ವಿಷಯ, ಸ್ವಾಮಿ ವಿವೇಕಾನಂದರಂತಹ ವಿಷಯಗಳನ್ನು ತೆಗೆಸಿಕೊಂಡು ಹೋದಾಗ ಮುರುಕಲು ಗುಡಿಸಿಲಿನಲ್ಲಿದ್ದರೂ ತಮ್ಮ ಕೈಲಾದ ಸಹಾಯ ಮಾಡುವ ಮನಸ್ಥಿತಿಗಳು, ಭಾವುಕರಾಗಿ ಆಶೀರ್ವದಿಸಿದ ಮಹಿಳೆಯರು, ಇಂತಹ ಕಾರ್ಯಕರ್ತರುಗಳೆಲ್ಲ ಚೆನ್ನಾಗಿ ಇರಬೇಕು ಎಂದು ಆಶಿಸುವ ಮಹನೀಯರು.. ಭಾರತದ ನಿಜವಾದ ಅಂತಃಸತ್ವ ಎಲ್ಲಿ ಅಡಗಿದೆ, ಭಾರತದ ಸಂಸ್ಕೃತಿ ಪರಂಪರೆ ಯಾಕೆ ಇನ್ನೂ ಅಜೇಯವಾಗಿದೆ ಎಂಬುದರ ಅರಿವಾಯಿತು.
ಅಷ್ಟೇ ಅಲ್ಲದೇ, ನಾವು ಕೇವಲ ಒಂದು ದಿನ 20-22 ಕಿಮೀ ಪಾದಯಾತ್ರೆ ಮಾಡುವಾಗ ಅನುಭವಿಸಿದ ಕಷ್ಟ ನೋಡಿದಾಗ ಗೊತ್ತಾಯಿತು ಸ್ವಾಮಿ ವಿವೇಕಾನಂದರು ಇಡಿಯ ಭಾರತವನ್ನು, ವಿದೇಶಗಳನ್ನು ಸುತ್ತಿದರಲ್ಲ ಅವರಿಗೆಷ್ಟು ಕಷ್ಟ ಆಗಿರಬಹುದು, ಅವರಲ್ಲಿ ಅದೆಂತಹ ಶಕ್ತಿ ಅಡಗಿದೆ ಎಂಬುದರ ಅರಿವಾಯಿತು.
ಹಾಗೆಯೇ ಹಳ್ಳಿವಾಸಿಗಳ ಕೆಲವೊಂದು ಪರಿಸ್ಥಿತಿ ನೋಡಿದ ಮೇಲೆ ಗೊತ್ತಾಯ್ತು ಯಾಕೆ ವಿವೇಕಾನಂದರು ಭಾರತವನ್ನು ಸುತ್ತಿಬಂದಮೇಲೆ ಬಂಡೆಯ ಮೇಲೆ ಕುಳಿತು ಗಳಗಳನೆ ಅತ್ತಿರಬಹುದು ಎಂದು. ಒಟ್ಟಿನಲ್ಲಿ ನಮ್ಮೊಳಗನ್ನು ಕೊಂಚಮಟ್ಟಿಗೆ ಅರಿಯುವ ಕಾರ್ಯಕ್ರಮವಾಗಿ ಈ ಪಾದಯಾತ್ರೆ ನಮ್ಮೆಲ್ಲರಲ್ಲಿ ಶಕ್ತಿ ತುಂಬಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications