ಮೋದಿ ಆಫರ್ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ. 23: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಫರ್ ನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ. ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನ ಕಾರ್ಯಪಡೆಯ ರಾಷ್ಟ್ರೀಯ ಸಮನ್ವಯ ವ್ಯಕ್ತಿಯಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿ ಇದನ್ನು ತಿರಸ್ಕರಿಸಿದ್ದಾರೆ.
ಮೋದಿ ತಮ್ಮ ಕೆಲ ಮಹತ್ವಾಕಾಂಕ್ಷಿ ಯೋಜನೆಗಳ ಸಾಕಾರವನ್ನು ವಿರೋಧ ಪಕ್ಷಗಳ ಸಿಎಂಗಳ ಹೆಗಲಿಗೆ ನೀಡಿ ಜಾಣ್ಮೆ ಮೆರೆದದಿದ್ದರು. ಕೇಂದ್ರ ಸರ್ಕಾರದ 'ನೀತಿ' ಆಯೋಗ ರಚನೆ ಮಾಡಿದ್ದ ಮೂರು ಕಾರ್ಯಪಡೆಗಳ ಪೈಕಿ ಇದು ಒಂದಕ್ಕೆ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ನೇಮಕ ಮಾಡಲಾಗಿತ್ತು.[ಬೆಟ್ಟ ಸ್ವಚ್ಛಮಾಡಿದ ಯುವಕರ ತಂಡಕ್ಕೆ ಭೇಷ್ ಎನ್ನೋಣ]

ಬೆಂಗಳೂರನ್ನು ಕಸಮುಕ್ತ ಮಾಡಲು ಸಿಎಂ ಗೆ ಒಲಿದುಬಂದ ಹೊಸ ಪಟ್ಟ ನೆರವಾಲಿದೆ. ಬೆಂಗಳೂರಿನ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಿಎಂ ಈ ಪಟ್ಟ ತನಗೆ ಬೇಡ ಎಂದು ತಿರಸ್ಕರಿಸಿರಿವುದು ಮಾತ್ರ ವಿಪರ್ಯಾಸ.[ಸ್ವಚ್ಛ ಭಾರತ ಅಭಿಯಾನಕ್ಕೆ 9 ಗಣ್ಯರನ್ನು ಆಹ್ವಾನಿಸಿದ ಮೋದಿ]
ಕೇಂದ್ರದ ಉತ್ತಮ ಯೋಜನೆಗಳನ್ನು ಎಲ್ಲ ರಾಜ್ಯಗಳಲ್ಲಿ ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಲು ಈ ರೀತಿಯ ರಾಯಭಾರತ್ವ ಅಥವಾ ಜವಾಬ್ದಾರಿ ಕಾರಣವಾಗುತ್ತದೆ ಎಂಬುದನ್ನು ಮನಗಂಡ ನರೇಂದ್ರ ಮೋದಿ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ವಹಿಸಿದ್ದರು. ಈ ಹಿಂದೆ ನರೇಂದ್ರ ಮೋದಿ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಗೆ ಮೋದಿ ಇಂಥಹದ್ದೇ ಜವಾಬ್ದಾರಿ ವಹಿಸಿತ್ತು. ಆದರೆ ಕಾಂಗ್ರೆಸ್ ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ತರೂರ್ ಈ ಕೆಲಸದಿಂದ ಹಿಂದೆ ಸರಿದಿದ್ದರು.












Click it and Unblock the Notifications