• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Sush 'Maa' We Will Miss u ಸದಾನಂದ ಗೌಡ ಟ್ವೀಟ್

|

ಬೆಂಗಳೂರು, ಆಗಸ್ಟ್ 07 : "ಸುಷ್ಮಾ ಸ್ವರಾಜ್ ಎನ್ನುವ ಹೆಸರೇ ಒಂದು ಶಕ್ತಿಯ ಸ್ವರೂಪ. ನಮ್ಮ ನಾಡಿನ ಸಹೋದರಿಯಾಗಿ ಕರ್ನಾಟಕ, ಕನ್ನಡಿಗರ ಮೇಲೆ ವಿಶೇಷ ಅನುಬಂಧ ಇಟ್ಟುಕೊಂಡಿದ್ದರು" ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಸಂತಾಪ ಸೂಚಿಸಿದ್ದಾರೆ.

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ (67) ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ಕನ್ನಡ ನಾಡಿನ ಜೊತೆ ಸುಷ್ಮಾ ಸ್ವರಾಜ್‌ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಸರಣಿ ಟ್ವೀಟ್‌ಗಳಲ್ಲಿ ಸದಾನಂದ ಗೌಡರು ಈ ಕುರಿತು ನೆನಪು ಮಾಡಿಕೊಂಡಿದ್ದಾರೆ.

ಶ್ರೀರಾಮಲು 'ಫೊಟೋ ಆಲ್ಬಂ': ಸುಷ್ಮಾ ಸ್ವರಾಜ್‌ಗೆ ಹೀಗೊಂದು ಸಂತಾಪಶ್ರೀರಾಮಲು 'ಫೊಟೋ ಆಲ್ಬಂ': ಸುಷ್ಮಾ ಸ್ವರಾಜ್‌ಗೆ ಹೀಗೊಂದು ಸಂತಾಪ

"ಸುಷ್ಮಾ ಸ್ವರಾಜ್ ಸುಲಲಿತವಾಗಿ ಕನ್ನಡವನ್ನು ಮಾತನಾಡುವುದನ್ನು ಕಲಿತಿದ್ದರು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದನ್ನು ಊಹಿಸಲು ಅಸಾಧ್ಯ. ಅವರಿಗೆ ಸದ್ಗತಿ ದೊರಕಲಿ" ಎಂದು ಸದಾನಂದ ಗೌಡರು ಕಂಬನಿ ಮಿಡಿದಿದ್ದಾರೆ.

ಮೋದಿಗೆ ಥ್ಯಾಂಕ್ಸ್‌,'ಜೀವಮಾನದಲ್ಲಿ ಈ ದಿನಕ್ಕಾಗಿ ಕಾದಿದ್ದೆ': ಸುಷ್ಮಾ ಕೊನೆ ಟ್ವೀಟ್ಮೋದಿಗೆ ಥ್ಯಾಂಕ್ಸ್‌,'ಜೀವಮಾನದಲ್ಲಿ ಈ ದಿನಕ್ಕಾಗಿ ಕಾದಿದ್ದೆ': ಸುಷ್ಮಾ ಕೊನೆ ಟ್ವೀಟ್

SUSH 'MAA' WE WILL MISS U FOR EVER ಎಂದು ಟ್ವೀಟ್ ಮಾಡುವ ಮೂಲಕ ಸದಾನಂದ ಗೌಡರು ಅಂತಿಮ ನಮನ ಸಲ್ಲಿಸಿದ್ದಾರೆ. ಕರ್ನಾಟಕದ ಹಲವು ನಾಯಕರು ಸುಷ್ಮಾ ಸ್ವರಾಜ್ ರಾಜ್ಯದೊಂದಿಗೆ ಹೊಂದಿದ್ದ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ...

ಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪುಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪು

ನಮ್ಮೆಲ್ಲರ ಸಹೋದರಿ

ನಮ್ಮೆಲ್ಲರ ಸಹೋದರಿ

ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು . ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು.ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ. ಅಮ್ಮ ಇದೇ ನನ್ನ ನಮನ

ಸರಳ ಜೀವನ ಅನುಕರಣೀಯ

ಸರಳ ಜೀವನ ಅನುಕರಣೀಯ

ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಟ್ವೀಟ್ ಮೂಲಕ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ನಮ್ಮದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ. ಬುದ್ದಿವಂತಿಕೆ. ದೈವ ಭಕ್ತಿ . ಸರಳ ಜೀವನ. ಎಲ್ಲವೂ ಅನುಕರಣೀಯ" ಎಂದು ಬಣ್ಣಿಸಿದ್ದಾರೆ.

ತುಂಬಾ ಸಮೀಪದಿಂದ ಬಲ್ಲೆ

ತುಂಬಾ ಸಮೀಪದಿಂದ ಬಲ್ಲೆ

"ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ. ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ. ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ"ಯನ್ನು ಡಿ. ವಿ. ಸದಾನಂದ ಗೌಡ ನೆನಪು ಮಾಡಿಕೊಂಡಿದ್ದಾರೆ.

ಅನಂತ್ ಕುಮಾರ್ ನೆನಪು

ಅನಂತ್ ಕುಮಾರ್ ನೆನಪು

ಮಾತೃ ಹೃದಯ, ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ. ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ, ತಮ್ಮ ಕಿರಿ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿದ್ದನ್ನು ನೆನಪಿಸಿಕೊಂಡ ಸದಾನಂದ ಗೌಡರು ಈಗ ಮತ್ತೊಮ್ಮೆ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

English summary
Union Minister for Chemicals and Fertilizers D.V.Sadananda Gowda pay tribute to Former External Affairs Minister Sushma Swaraj on tweet called Sush Maa We Will Miss u.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X