Rajinikanth: ಜಾರಿ ಬಿದ್ದರೆ ಸೂಪರ್ ಸ್ಟಾರ್ ನಟ ರಜನೀಕಾಂತ್, ಏನಿದು ವೈರಲ್ ವಿಡಿಯೋ! ಇಲ್ಲಿದೆ ಸತ್ಯಾಂಶ
Rajinikanth: ನಟ ರಜನೀಕಾಂತ್ ಅವರು ಜಾರಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟ ರಜನೀಕಾಂತ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಕೆಲವೊಂದು ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಇದೆ. ಆದರೆ ಇತ್ತೀಚಿಗೆ ಮಳೆಯಲ್ಲಿ ಜಾರಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರು ಈಗಲೂ ಬಹು ಬೇಡಿಕೆಯ ನಟ. ತಮಿಳಿನಲ್ಲಿ ಅವರ ಬಹು ನಿರೀಕ್ಷಿತ ಸಿನಿಮಾ ಜೈಲರ್ - 2 ಚಿತ್ರೀಕರಣ ನಡೆದಿದೆ. ಈ ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಗಳು ಕಾಯುತ್ತಿದ್ದಾರೆ. ಅದರ ನಡುವೆ ಕೂಲಿ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನೂ ಎದುರಿಸಿದ್ದರು. ಆರೋಗ್ಯದ ಕಾರಣಕ್ಕೆ ಅವರ ಅಭಿಮಾನಿಗಳು ಕಾಳಜಿ ವಹಿಸುವುದು ಇದೆ. ಈ ರೀತಿ ಇರುವಾಗಲೇ ಅವರು ಜಾರಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅದರ ಅಸಲಿಯತ್ತು ಬೇರೆಯೇ ಇದೆ.

ಹೌದು ಯಾವುದು ಫೇಕ್, ಯಾವುದು ನಿಜಾ ಅಂತಲೇ ತಿಳಿಯದಷ್ಟು ಸುದ್ದಿಗಳ ಸುರಿಮಳೆ ಆಗುತ್ತಿರುವ ಸಮಯವಿದು. ಕೆಲವು ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಈ ರೀತಿಯ ಎಡವಟ್ಟುಗಳು ಆಗುತ್ತಿರುತ್ತವೆ. ಅದರಲ್ಲೂ ಕೆಲವರು ವೀವ್ಸ್ ಪಡೆಯುವ ಉದ್ದೇಶದಿಂದಲೇ ಈ ರೀತಿ ಮಾಡುತ್ತಾರೆ ಎನ್ನುವುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಇಷ್ಟಕ್ಕೂ ಆಗಿದ್ದು ಇಷ್ಟೇ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು, ಈಚೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ "ಎಂದಿನಂತೆ ಇಂದು ಬೆಳಗ್ಗೆ ನನ್ನ ಇನ್ ಬಾಕ್ಸಿಗೆ ಬಂದ ದಿನಪತ್ರಿಕೆಗಳ ಕಟ್ಟು ತರಲು ಹೋಗಿದ್ನಾ... ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಹಿಂದೆ ಬಂದದ್ದೇ ಗೊತ್ತು... ಕಾಲು ಜಾರಿ "ಲಾಗ" ಹಾಕಿದೆ. (ಜಾರಿ ಬಿದ್ದೆ)" ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಇದೇ ವಿಡಿಯೋವನ್ನು ಕೆಲವು ಮಾಧ್ಯಮಗಳು ಜಾರಿ ಬಿದ್ದ ರಜನೀಕಾಂತ್ ಎಂದು ವರದಿ ಮಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ರಾಜಾರಾಂ ತಲ್ಲೂರು ಅವರು ಈ ಬಗ್ಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಡಿಯರ್ ಮೀಡಿಯಾ ಯಾಕೆ "ಡಿಯರ್ ಮೀಡಿಯಾ" ಎಂದರೆ, ವಾರದ ಹಿಂದೆ ನಾನು ಮನೆಯಲ್ಲಿ ಜಾರಿ ಬಿದ್ದ ವೀಡಿಯೊ (ನನ್ನ ಮನೆಯ ಭದ್ರತಾ ಕ್ಯಾಮರಾ ಗ್ರ್ಯಾಬ್) ಇಲ್ಲಿ ಹಂಚಿಕೊಂಡಿದ್ದೆ. ಅದನ್ನು ಈಗ ನನ್ನ ಹಲವರು ಗೆಳೆಯರು ನನಗೆ ವಾಪಸ್ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು ಏನಾಗಿದೆ ಎಂದರೆ, ಯಾರೋ ಕಿಡಿಗೇಡಿಗಳು ಇದು ಸಿನಿಮಾ ನಟ ರಜನೀಕಾಂತ್, ಅವರ ಮನೆಯಲ್ಲಿ ಜಾರಿ ಬಿದ್ದದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅದು ಹಲವು ಆಣಬೆ ಮಾಧ್ಯಮಗಳಲ್ಲಿ, ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಹಂಚಿಕೆ ಆಗಿ ವೈರಲ್ ಆಗತೊಡಗಿದೆ. ಹಲವಾರು ಸ್ನೇಹಿತರು ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದು ವಿವರಿಸಿದ್ದಾರೆ.
ಈ ಪೋಸ್ಟ್ ಟ್ರುತ್ ಯುಗದಲ್ಲಿ, ಸ್ವತಃ ಈ ಡೇಟಾದ ಮೂಲ ವ್ಯಕ್ತಿ ಆಗಿರುವ ನಾನು, ಅದು ನನ್ನ ವೀಡಿಯೊ, ನಟ ರಜನೀಕಾಂತ್ ಅವರದಲ್ಲ ಎಂದರೆ ನಂಬುವವರು ಇಲ್ಲ! ಮೇಲುನೋಟಕ್ಕೆ ಇದು ತಮಾಷೆ ಅನ್ನಿಸಬಹುದು. ಆದರೆ ಅರೆ ಖಾಸಗಿ ಡೇಟಾಗಳು (ಇಲ್ಲಿ ಅರೆ ಖಾಸಗಿ ಏಕೆಂದರೆ, ನನ್ನ ಫೇಸ್‌ಬುಕ್ ವಾಲ್ ನನ್ನ ಸ್ನೇಹಿತರು ಮತ್ತು ಅವರ ಸ್ನೇಹಿತರಿಗೆ ಸೀಮಿತ. ಅಲ್ಲಿಂದಾಚೆಗೆ ಲಭ್ಯ ಇಲ್ಲದಂತೆ ಸೆಟ್ಟಿಂಗ್ ಇದೆ!) ಹೀಗೆ ಕಿಡಿಗೇಡಿತನದ ಕಾರಣಕ್ಕೆ ಹಾದಿ ತಪ್ಪಿದಾಗ ಏನಾಗಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಿರುವ ಅವರು, ಈ ಪ್ರತಿಯೊಂದೂ ಚಾನೆಲ್‌ಗಳಿಗೆ ಅದು ನನ್ನ ವೀಡಿಯೊ ಎಂದು ಹೇಳುವಷ್ಟು, ಅವರು ಪ್ರತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಷ್ಟು ಸಮಯವೂ, ವ್ಯವಧಾನವೂ ನನ್ನಲ್ಲಿಲ್ಲ.
ಸದ್ಯಕ್ಕೆ, ಇದು ಡಿಯರ್ ಮೀಡಿಯಾದ ಹಣೆಬರಹ ಎಂದು ಸುಮ್ಮನಿರಬೇಕು. ಆದರೆ ಗಮನಿಸಿ: ಅಗತ್ಯ ಬಿತ್ತೆಂದರೆ, ಈ ವೈರಸ್‌ನ ಬುಡ ತನಕ ತಲುಪಿ, ಅದನ್ನು ಮೂಲದಿಂದಲೇ ಉಚ್ಛಾಟಿಸುವುದು ಹೇಗೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಆಗ ಸಂಭವಿಸಬಹುದಾದ ಎಲ್ಲ ಕಷ್ಟ-ನಷ್ಟಗಳಿಗೂ ಸಂಬಂಧಿತರೇ ಹೊಣೆಗಾರರಾಗಲಿದ್ದಾರೆ. ಡಿಯರ್ ಮೀಡಿಯಾಕ್ಕೂ ಗೊತ್ತಿರಲಿ ಎಂಬ ಕಾರಣಕ್ಕೆ ಇದು ಅವರಿಗೆ ತಿಳಿವಳಿಕೆ ಸೂಚನೆ ಕೂಡ ಎಂದು ಅವರು ಎಚ್ಚರಿಸಿದ್ದಾರೆ.
ನಿಖರವಾಗಿ, ಇಂದು (30 ಜುಲೈ) ಬೆಳಗ್ಗೆ ಹೊತ್ತಿಗೆ, 123 ಬಾರಿ ಈ ವೀಡಿಯೊವನ್ನು ಸೇವ್ ಮಾಡಿಕೊಳ್ಳಲಾಗಿದೆ. ಈ ಆಣಬೆ ಮೀಡಿಯಾಗಳಿಂದಾಗಿ ನಾಳೆ ಇಂತಹದೇ ಸ್ಥಿತಿ, ಗಂಭೀರವಾದ ಬೇರೆ ಸನ್ನಿವೇಶಗಳಲ್ಲಿ ಒದಗಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದು, ಪ್ರತಿಯೊಬ್ಬರೂ ಈ ಡೇಟಾ ಯುಗದಲ್ಲಿ ಯೋಚಿಸಿಕೊಳ್ಳಬೇಕು ಎಂದು ಅವರು ಬರೆದುಕೊಂಡಿದ್ದಾರೆ.
-
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications