Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ..

ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ ಹಾಗೂ ವ್ಯಾಯಾಮಗಳಲ್ಲಿ ಇದು ಒಂದು ಸರಳ ವಿಧಾನ ಕೂಡ ಹೌದು. ಆದರೆ ಬೇಸಿಗೆಯಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಕಿಂಗ್ ಮಾಡುವಾಗ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಬೇಸಿಗೆ ಪ್ರಾರಂಭ ಆಗಿರುವುದರಿಂದ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಯಾವ ಸಮಯದಲ್ಲಿ ವಾಕಿಂಗ್ ಮಾಡಬೇಕು ಯಾವ ಸಮಯದಲ್ಲಿ ಮಾಡಬಾರದು ಮತ್ತು ಅದಕ್ಕೆ ಯಾವ ರೀತಿಯ ಕ್ರಮಗಳನ್ನು ಪಾಲಿಸಬೇಕು ಎಂಬುದಕ್ಕೆ ತಜ್ಞರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ.

ತಜ್ಞರ ಪ್ರಕಾರ ಮಧ್ಯವಯಸ್ಕರು ಹಾಗೂ ವೃದ್ದರು ಸೂರ್ಯನ ಬಿಸಿಲು ಕಡಿಮೆಯಾಗುವವರೆಗೆ ವಾಕಿಂಗ್ ಹೋಗುವುದನ್ನು ನಿಲ್ಲಿಸುವುದು ಒಳ್ಳೆಯದು. ಜೊತೆಗೆ ನಮ್ಮ ದೈನಂದಿನ ಹೆಜ್ಜೆಯ ಎಣಿಕೆಯ ಗುರಿಗಳನ್ನು ಹವಾಮಾನಕ್ಕೆ ಅನುಗುಣವಾಗಿ ನಾವು ಅದನ್ನು ಬದಲಾಯಿಸಬೆಕು ಎಂದು ಹೇಳುತ್ತಾರೆ.

Summer Walking Tips

ಬೇಸಿಗೆಯಲ್ಲಿ ನಾವು ವಾಕಿಂಗ್ ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ, ಆದರೆ ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಬೆಳಿಗ್ಗೆ 5ರಿಂದ 7ರವರೆಗೆ ಅಥವಾ ಸಂಜೆ 6ರಿಂದ 8ರವರೆಗೆ ನಡಿಗೆ ಮಾಡುವುದು ಉತ್ತಮ. ಈ ಸಮಯದಲ್ಲಿ ತಾಪಮಾನ ಕಡಿಮೆ ಇರುವುದರಿಂದ ನಿರ್ಜಲೀಕರಣ ಮತ್ತು ಬಿಸಿಲಿನ ಶಾಖದ ಹೊಡೆತದ ಅಪಾಯ ಕಡಿಮೆ ಆಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಾಕಿಂಗ್ ಮಾಡುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸುತ್ತಾರೆ.

ಹೊಸದಾಗಿ ವಾಕಿಂಗ್ ಪ್ರಾರಂಭಿಸುವವರು ದಿನಕ್ಕೆ 20 ರಿಂದ 30 ನಿಮಿಷಗಳಿಂದ ಪ್ರಾರಂಭಿಸಿ, ಕ್ರಮೇಣ 30 ರಿಂದ 60 ನಿಮಿಷಗಳವರೆಗೆ ಮಾಡಬಹುದು. ಅಗತ್ಯವಿದ್ದರೆ ಬೆಳಿಗ್ಗೆ ಮತ್ತು ಸಂಜೆ ಎರಡು ಭಾಗಗಳಾಗಿ ನಡಿಗೆ ಮಾಡುವುದು ಉತ್ತಮ. ಉದಾಹರಣೆಗೆ ಬೆಳಿಗ್ಗೆ 15 ನಿಮಿಷ ಹಾಗೂ ಸಂಜೆ 15 ನಿಮಿಷ ಈ ರೀತಿಯಾಗಿ ವಾಕಿಂಗ್ ಮಾಡಬೇಕು.

ವಾಕಿಂಗ್ ಹೋಗುವ ಮೊದಲು

ವಾಕಿಂಗ್ ಹೋಗುವ ಮೊದಲು ಮಧ್ಯದಲ್ಲಿ ಮತ್ತು ನಂತರ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಬೇಸಿಗೆಯಲ್ಲಿ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸುವುದು ಉತ್ತಮ. ಕಾಫಿ ಮತ್ತು ಆಲ್ಕೋಹಾಲ್‌ನಂತಹ ಪಾನೀಯಗಳನ್ನು ಕಡಿಮೆ ಮಾಡುವುದು ಒಳ್ಳೆಯದು ಏಕೆಂದರೆ ಅವು ದೇಹವನ್ನು ಇನ್ನಷ್ಟು ನಿರ್ಜಲೀಕರಣಗೊಳಿಸಬಹುದು.

ಸೂರ್ಯನ ತಾಪಮಾನದಿಂದ ರಕ್ಷಣೆ ಪಡೆಯಲು ಹೆಚ್ಚಿನ ಸನ್‌ಸ್ಕ್ರೀನ್ ಬಳಸಿ, ಟೋಪಿ ಮತ್ತು ಸನ್‌ಗ್ಲಾಸ್ ಧರಿಸುವುದು ಅಗತ್ಯವಾಗಿದೆ. ಹಗುರವಾದ ಬಟ್ಟೆಗಳನ್ನು ಧರಿಸುವುದರಿಂದ ದೇಹದ ತಾಪಮಾನ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಸಾಧ್ಯವಾದಷ್ಟು ನೆರಳಿರುವ ಸ್ಥಳಗಳು, ಉದ್ಯಾನವನಗಳು ಅಥವಾ ಮರಗಳಿರುವ ದಾರಿಗಳಲ್ಲಿ ವಾಕಿಂಗ್ ಮಾಡುವುದು ಉತ್ತಮ.

ವಾಕಿಂಗ್ ವೇಳೆ ತಲೆನೋವು, ವಾಂತಿ ಅಥವಾ ತೀವ್ರ ಆಯಾಸದ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಟ್ಟಿನಲ್ಲಿ ವಾಕಿಂಗ್ ಆರೋಗ್ಯಕ್ಕೆ ಅತ್ಯುತ್ತಮವಾದರೂ ಬೇಸಿಗೆಯಲ್ಲಿ ಸರಿಯಾದ ಸಮಯ ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+