ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿದ ಬಿಸಿಲ ಧಗೆ, ಮಡಿಕೆ ವ್ಯಾಪಾರ ಬಲು ಜೋರು

By ಜಯಕುಮಾರ್ ದೇಸಾಯಿ, ರಾಯಚೂರು
|
Google Oneindia Kannada News

ರಾಯಚೂರು, ಮಾರ್ಚ್. 04: ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಕಾವು ಏರಿದೆ. ರಾಯಚೂರು ಜಿಲ್ಲೆಯಲ್ಲಿ ಸೂರ್ಯ ಸುಡುತ್ತಿದ್ದಾನೆ. ಬಿಸಿಲಿನ ತಾಪದಿಂದ ದಣಿದವರಿಗೆ ಮಡಿಕೆಯಲ್ಲಿಟ್ಟ ತಂಪು ನೀರು ಸಿಕ್ಕರೆ ಅದೆಷ್ಟೋ ನೋವುಗಳನ್ನು ಮರೆಸಬಹುದು.

ಬಿಸಿಲಿನ ನಾಡೆಂದೇ ಪ್ರಖ್ಯಾತಿ ಪಡೆದಿರುವ ಜಿಲ್ಲೆಯ ಸುತ್ತಮುತ್ತಲು ಕಲ್ಲಿನ ಗುಡ್ಡಗಾಡು ಪ್ರದೇಶ ಇರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರವು ಒಂದಂಶದಿಂದ ಬಿಸಿ ಏರಿಕೆ ಮಾಡಿದೆ. [ಲಾಠಿ ಚಾರ್ಜ್: ರೈತರ ಮೇಲಿನ ಎಲ್ಲ ಪ್ರಕರಣ ಹಿಂದಕ್ಕೆ]

summer

ಬರದ ಛಾಯೆಯಿಂದ ರೈತರು ಕಂಗಾಲಾಗಿದ್ದು ಮತ್ತೊಂದೆಡೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ.

ಮಡಿಕೆಗೆ ಮೊರ ಹೋದ ಜನತೆ
ಬಿಸಿಲಿನಿಂದ ಬಸವಳಿದ ದೇಹವನ್ನು ತಣ್ಣಗಾಗಿಸುವ ನೀರನ್ನುಇಟ್ಟುಕೊಳ್ಳಲು ಮಣ್ಣಿನ ಪಾತ್ರೆಗಳನ್ನೇ ಬಳಕೆ ಮಾಡಲಾಗುತ್ತಿದೆ. ನಗರದ ಹಲವು ಕಡೆ ಮಡಿಕೆಗಳ ಮಾರಾಟ ಶುರುವಾಗಿದ್ದು ನಾರಾಯಣಪೇಟೆಯಿಂದ ಆಗಮಿಸಿದ ಕುಂಬಾರ ವೆಂಕಟಯ್ಯ ಕಳೆದ 25 ವರ್ಷದಿಂದ ನಾನಾ ಮಡಿಕೆ ಮಾರಾಟದಲ್ಲಿ ತೊಡಗಿದ್ದಾರೆ.

ಜಾವ- ಗಡಾ,ಹೂಜಿ,ಕರೆ ಮಡಿಕೆ,ಸೇರಿದಂತೆ ನಾಲ್ಕಾರು ನಮೂನೆ ಮಡಿಕೆ ತಮ್ಮ 30 ರೂಪಾಯಿಯಿಂದ 150 ರೂ ವರೆಗೆ ದರವಿದ್ದು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸುತ್ತಾರೆ.[ಒಂದು ದುರ್ಘಟನೆ: ದೇಶದ ಬೆನ್ನೆಲುಬಿಗೆ ಬಾರಿಸಿದ್ರು]

summer

ಆಧುನಿಕ ಸ್ಪರ್ಶ
ಮಡಿಕೆಗೆ ಈ ಮುಂಚೆ ಕಂಠದ ಮುಖಾಂತರವೇ ನೀರನ್ನು ತೆಗೆದುಕೊಳ್ಳುವ ಮಾದರಿಯಲ್ಲಿದ್ದವು ಆದರೆ ಈಗ ಅವುಗಳಿಗೂ ಆಧುನಿಕ ಸ್ಪರ್ಶ ನೀಡಲಾಗಿದೆ. ತಳದಲ್ಲಿ ನಲ್ಲಿ ಜೋಡಣೆ ಮಾಡಲಾಗಿದ್ದು ಸುಲಭವಾಗಿ ನೀರು ಸಂಗ್ರಹಿಸಿ ಬಿರು ಬೇಸಿಗೆಯ ದಾಹವನ್ನು ತೀರಿಸಿಕೊಳ್ಳಬಹುದು.

English summary
Raichur: North Karnataka people has started summer suffering. Although people facing drinking water problem also. Raichur people go surrendered to their cool drinking by pots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X