Get Updates
Get notified of breaking news, exclusive insights, and must-see stories!

ಬೇಸಿಗೆಯ ಬಿಸಿ: 200 ಯೂನಿಟ್ ದಾಟಿದ ವಿದ್ಯುತ್ ಬಳಕೆ, ಗೃಹಜ್ಯೋತಿ ಇಲ್ಲ

ಮೈಸೂರು, ಮೇ 08: ಬಿರು ಬೇಸಿಗೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಫ್ಯಾನ್, ಎಸಿ ಬಳಕೆ ಸರಾಸರಿ ವಿದ್ಯುತ್ ಬಳಕೆ ಯೂನಿಟ್‌ ದಾಟುವಂತೆ ಮಾಡಿದ್ದು, ಹಲವು ಜನರು ಮೇ ತಿಂಗಳಿನಲ್ಲಿ ಉಚಿತ ವಿದ್ಯುತ್ ಬಿಲ್ ಬದಲು ಸಂಪೂರ್ಣ ಬಿಲ್ ಕಟ್ಟಬೇಕಿದೆ.

ಹೌದು, ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರದ 'ಗೃಹಜ್ಯೋತಿ' ಗ್ಯಾರಂಟಿ ಈ ಬಾರಿ ಕೈಕೊಟ್ಟಿದೆ. ಏಪ್ರಿಲ್ ತಿಂಗಳಿನ ಬೇಸಿಗೆಯ ಬಿಸಿ ಜನರಿಗೆ ತಟ್ಟಿದ್ದು, ಮೇ ತಿಂಗಳಿನಲ್ಲಿ ಪೂರ್ಣ ಬಿಲ್ ಕಟ್ಟುವಂತೆ ಮಾಡಿದೆ.

Summer Heat Many People Missed Gruha Jyothi Scheme Benefit

2023ರ ಆಗಸ್ಟ್‌ನಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗೃಹ ಬಳಕೆಯ 200 ಯೂನಿಟ್ ತನಕ ಶೂನ್ಯ ವಿದ್ಯುತ್ ಬಿಲ್ ಎಂದು ಹೇಳಿತ್ತು. ಆದರೆ ಈ ಬಾರಿ ಬೇಸಿಗೆಯ ಪರಿಣಾಮ ಸಾವಿರಾರು ಜನರು ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ.

ಯಾವ-ಯಾವ ಜಿಲ್ಲೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 42,384 ಗ್ರಾಹಕರು ಈ ತಿಂಗಳು ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗಿ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೆಸ್ಕ್ ಅಡಿ 22.33 ಲಕ್ಷ ಗೃಹ ಬಳಕೆ ಸಂಪರ್ಕಗಳಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯೊಂದರಲ್ಲಿಯೇ 26,958 ಗ್ರಾಹಕರು ಸಂಪೂರ್ಣ ಬಿಲ್ ಪಾವತಿ ಮಾಡಬೇಕಿದೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ತನಕ ಶೂನ್ಯ ಬಿಲ್ ಕರ್ನಾಟಕ ಸರ್ಕಾರದ ಗ್ಯಾರಂಟಿಯಾಗಿದೆ. ಆದರೆ ಬೇಸಿಗೆಯ ಕಾರಣಕ್ಕೆ ಸರಾಸರಿ ಬಳಕೆಯ ಮಿತಿಯನ್ನು ಗ್ರಾಹಕರು ಮೀರಿದ್ದು, ಸಂಪೂರ್ಣ ಬಿಲ್ ಪಾವತಿ ಮಾಡಬೇಕಿರುವುದು ಅನಿವಾರ್ಯವಾಗಿದೆ.

ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೊಳಿಸುವಾಗಲೇ 200 ಯೂನಿಟ್ ಉಚಿತ ವಿದ್ಯುತ್ ಎಂದು ವಾರ್ಷಿಕ ಸರಾಸರಿ ಬಳಕೆ ಆಧರಿಸಿ ಹೇಳಿತ್ತು. 200 ಯೂನಿಟ್ ದಾಟಿದರೆ ಸಂಪೂರ್ಣ ಬಿಲ್ ಪಾವತಿಸಬೇಕು ಎಂದು ಷರತ್ತು ಹಾಕಿತ್ತು. ಅದರಂತೆ ಏಪ್ರಿಲ್‌ನಲ್ಲಿ 200 ಯೂನಿಟ್‌ ಮೀರಿದವರು ಸಂಪೂರ್ಣ ಬಿಲ್‌ ಕಟ್ಟುತ್ತಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿಯ ಬೇಸಿಗೆಗೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಲಝಳ, ಬಿಸಿಗಾಳಿಯಿಂದಾಗಿ ಫ್ಯಾನ್ ಇಲ್ಲದೇ ಇರುವುದೇ ಕಷ್ಟ ಎನ್ನುವಂತಾಗಿದೆ. ಆದ್ದರಿಂದ ಮನೆಯಲ್ಲಿ ಸದಾ ಫ್ಯಾನ್, ಎಸಿ ಆನ್‌ ಆಗಿರುತ್ತಿದ್ದು, ವಿದ್ಯುತ್ ಬಳಕೆ ಹೆಚ್ಚಾಗಿದೆ.

ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಮುಂಗಾರು ಮಳೆ ಆರಂಭವಾದರೆ ಸಾಕು ಎಂದು ಕಾದು ಕುಳಿತಿದ್ದಾರೆ. ಇಂತಹ ಹೊತ್ತಿನಲ್ಲಿಯೇ ಏಪ್ರಿಲ್ ತಿಂಗಳ ಕರೆಂಟ್ ಬಿಲ್ ನೋಡಿ ಜನರು ಮತ್ತಷ್ಟು ಬೆವೆತು ಹೋಗಿದ್ದಾರೆ. ತೆರಿಗೆ ಸೇರಿ ಸಂಪೂರ್ಣ ಬಿಲ್ ಕಟ್ಟುವುದು ಜನರಿಗೆ ಅನಿವಾರ್ಯವಾಗಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಆರಂಭವಾಗಿದೆ. ಆದರೆ ಬೇಸಿಗೆಯ ಧಗೆಗೆ ಮಳೆ ಎಲ್ಲಿಗೂ ಸಾಲುತ್ತಿಲ್ಲ. ಮಳೆ ಕಡಿಮೆಯಾದ ಕ್ಷಣವೇ ಮತ್ತೆ ಸೆಕೆ ಆರಂಭವಾಗುತ್ತದೆ. ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಉಷ್ಣಾಂಶದಲ್ಲಿ ಇಳಿಕೆ ಕಂಡು ಬರಬಹುದು.

ಜೂನ್‌-ಸೆಪ್ಟೆಂಬರ್ ನೈಋತ್ಯ ಮುಂಗಾರು ಆರಂಭವಾದರೆ ಫ್ಯಾನ್, ಎಸಿಗಳ ಬಳಕೆ ಕಡಿಮೆಯಾಗಲಿದೆ. ಆಗ ವಿದ್ಯುತ್ ಬಳಕೆ ಪ್ರಮಾಣವೂ ಕಡಿಮೆಯಾಗಲಿದ್ದು, ಜನರು ಮತ್ತೆ ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಬಹುದು. ಆದರೆ ಮೇ ತಿಂಗಳಿನಲ್ಲಿ ಜನರು ಸಂಪೂರ್ಣ ಬಿಲ್ ಕಟ್ಟಲೇ ಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+