ಡಿಮ್ಯಾಂಡ್ ಮಾಡಿ ಐಷಾರಾಮಿ ವಾಹನ ಪಡೆದ ಅಬಕಾರಿ ಸಚಿವ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ದುಬಾರಿ ಉಬ್ಲೋ ವಾಚಿನ ವಿವಾದದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶ ವಿದೇಶದಲ್ಲಿ ಸುದ್ದಿಯಾಗಿ ಮುಜುಗರ ಅನುಭವಿಸಿದ್ದು ತಿಳಿದಿರಬಹುದು. ಈಗ ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ಐಷಾರಾಮಿ ವಾಹನಕ್ಕಾಗಿ ಡಿಮ್ಯಾಂಡ್ ಮಾಡಿ ಪಡೆದ ಸುದ್ದಿ ರಾಷ್ಟ್ರೀಯ ಸುದ್ದಿವಾಹಿನಿಗಳನ್ನು ಮುಟ್ಟಿದೆ.

ಅಬಕಾರಿ ಸಚಿವ ಮನೋಹರ್ ತಹಸೀಲ್ದಾರ್ ಅವರಿಗೆ ಟಾಯೋಟಾ ಫಾರ್ಚುನರ್ ವಾಹನವನ್ನು ನೀಡಲಾಗಿದೆ. ಮನೋಹರ್ ಅವರಿಗೆ ಬೆನ್ನು ನೋವಿನ ಸಮಸ್ಯೆಯಿದೆ ಎಂದು ವರದಿಗಳು ಹೇಳಿವೆ. ಸರ್ಕಾರದ ನಿಯಮಗಳ ಪ್ರಕಾರ ಸಚಿವರು ಐಷಾರಾಮಿ ವಾಹನಗಳನ್ನು ಹೊಂದುವಂತಿಲ್ಲ.[ಮನೋಹರ್ ತಹಶೀಲ್ದಾರ್ ಪರಿಚಯ]

ನಾಲ್ಕು ದಶಕಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿರುವ ಮನೋಹರ್‌ ತಹಶೀಲ್ದಾರ್‌ ಅವರು ಸರ್ಕಾರದ ನಿಯಮ ಮೀರಿ ಐಷಾರಾಮಿ ವಾಹನವನ್ನು ಬಳಸುತ್ತಿದ್ದಾರೆ ಎಂಬುದು ಸುದ್ದಿ. 13ಲಕ್ಷಕ್ಕಿಂತ ಕಡಿಮೆ ವೆಚ್ಚ ವಾಹನಗಳನ್ನು ಬಳಸಲು, ಅದಕ್ಕೆ ಅಗತ್ಯವಾದ ಇಂಧನ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಸರ್ಕಾರದಿಂದ ಮನೋಹರ್ ತಹಸೀಲ್ದಾರ್ ಅವರಿಗೆ ನೀಡಲಾಗಿರುವ ವಾಹನದ ಬೆಲೆ 25 ಲಕ್ಷ ರು ಮೀರುತ್ತದೆ.[ಸಿದ್ದರಾಮಯ್ಯ, ಸಚಿವರ ಪ್ರಯಾಣ ಭತ್ಯೆ 11 ಕೋಟಿ!]

Suffering from back pain, Excise Minister Manohar Tahsildar

4 ಬಾರಿ ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿರುವ ಹಾವೇರಿ ಮೂಲದ ಮನೋಹರ್‌ ತಹಶೀಲ್ದಾರ್‌ (69) ಅವರಿಗೆ ಟೊಯೋಟಾ ಇನ್ನೋವಾ ವಾಹನ ನೀಡಲಾಗಿತ್ತು. ಆದರೆ, ಟೊಯೋಟಾ ಫಾರ್ಚುನರ್ ಗಾಗಿ ಬೇಡಿಕೆ ಸಲ್ಲಿಸಿ, ಪಡೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್, 'ನಾನು ಬೆಂಗಳೂರಿನಿಂದ ನನ್ನ ಕ್ಷೇತ್ರಕ್ಕೆ(ಹಾವೇರಿ ಜಿಲ್ಲೆ ಹಾನಗಲ್) ತೆರಳಲು ಫಾರ್ಚುನರ್ ವಾಹನ ಬೇಡಿಕೆ ಸಲ್ಲಿಸಿ ಪಡೆದುಕೊಂಡಿದ್ದು ನಿಜ. ನನಗೆ ಬೆನ್ನು ನೋವಿನ ಸಮಸ್ಯೆಯಿದ್ದು 300ಪ್ಲಸ್ ಕಿ.ಮೀ ಪ್ರಯಾಣಿಸಲು ಉತ್ತಮ ವಾಹನ ಅಗತ್ಯವಿದೆ.ಆರೋಗ್ಯದ ದೃಷ್ಟಿಯಿಂದ ವಾಹನ ಪಡೆದುಕೊಂಡಿದ್ದೇನೆ. ಐಷಾರಾಮಿ ವಾಹನದಲ್ಲಿ ಮಾತ್ರ ಓಡಾಡಬೇಕು ಎಂದೆನಿಲ್ಲ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After massive controversy over Karnataka Chief Minister Siddaramaiah's expensive watch, now Karnataka's Excise Minister Manohar Tahsildar has landed in a row over alleged allotment of an expensive luxury car.
Please Wait while comments are loading...