ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರಳಿನ ಗೂಡು ನೀಡಿದ ವಸತಿ ಯೋಜನೆ

|
Google Oneindia Kannada News

ಕರ್ನಾಟಕವನ್ನು ಗುಡಿಸಲು ಮುಕ್ತವನ್ನಾಗಿಸಲು ಸರ್ಕಾರ ಸಂಕಲ್ಪ ತೊಟ್ಟಿದ್ದು, 12 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣದ ಗುರಿ ಹಾಕಿಕೊಂಡಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಿದೆ.

* ಹಾವೇರಿ ಜಿಲ್ಲೆ ಹೊಸ ಕಿತ್ತೂರು ಗ್ರಾಮದ ಸುಜಾತ ಮತ್ತು ಅದೇ ಜಿಲ್ಲೆಯ ದೇವಿ ಹೊಸೂರು ಗ್ರಾಮದ ಚಂದ್ರಕಲಾ ಅವರು ಬಸವ ವಸತಿ ಯೋಜನೆಯ ಫಲಾನುಭವಿಗಳು. ಯೋಜನೆ ಬಗ್ಗೆ ಅನುಭವ ಹಂಚಿಕೊಂಡ ಅವರು, 'ಬಾಡಿಗೆ ಮನೆಗಳಲ್ಲಿ ವಾಸವಿದ್ದು ಬಾಡಿಗೆ ಕಟ್ಟಲಾಗದೆ ಸಂಕಷ್ಟದಲ್ಲಿದ್ದೆವು. ಇಂದು ಬಸವ ವಸತಿ ಯೋಜನೆ ಮೂಲಕ ರಾಜ್ಯ ಸರ್ಕಾರ ನಮಗೆ ನೆರಳಿನ ಗೂಡು ನೀಡಿದೆ' ಎಂದು ಸಂತಸ ಹಂಚಿಕೊಂಡರು. [ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಆಹ್ವಾನ]

Success story of Vasathi Yojane scheme

ಕ್ಷೀರಧಾರೆ : ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸುಮಾರು 7.5 ಲಕ್ಷ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿದೆ. ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 2 ರಿಂದ 4 ರೂ.ಗಳಿಗೆ ಏರಿಕೆ ಮಾಡಿದೆ. [ಹಾಲು ಮಾರಾಟದಿಂದ ಬರುವ ಲಾಭ ರೈತರಿಗೆ ಸೇರಿದ್ದು, ಡೇರಿಗಳಿಗಲ್ಲ!]

* ಕೊಪ್ಪಳದ ಮಲ್ಲಪ್ಪ ಹಿರೇಸಿಂಧೋಗಿ ಅವರು ಕ್ಷೀರಧಾರೆಯ ಫಲಾನುಭವಿಗಳು. 'ಪ್ರೋತ್ಸಾಹಧನ 4 ರೂ. ಏರಿಸಿರುವುದರಿಂದ ರೈತ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ರಾಜ್ಯದಲ್ಲಿ ಹೈನುಗಾರಿಕೆಗೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಿ, ಪ್ರೋತ್ಸಾಹಧನವನ್ನು ಇನ್ನೂ 2 ರೂ. ಹೆಚ್ಚಿಸಿದಲ್ಲಿ ರೈತರಿಗೆ ಇನ್ನೂ ನೆಮ್ಮದಿ ತರಲಿದೆ' ಎಂದು ಅಭಿಪ್ರಾಯಪಟ್ಟರು.

ಹೀಗೆ ಕರ್ನಾಟಕ ರಾಜ್ಯ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಸಾಧಿಸಿರುವ ಯಶಸ್ಸಿನ ಕಥೆಗಳು ಫಲಾನುಭವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹವರ ಬದುಕು ಯೋಜನೆಗಳ ಅನುಭವದ ಬಳಕೆ ನೊಂದವರ ಬಾಳಿಗೆ ಬೆಳಕಾಗಬಲ್ಲದು ಎಂಬುದು ನಮ್ಮ ಆಶಯ.

ಸಂದರ್ಶನ ಮತ್ತು ಬರಹ
ಮಂಜುನಾಥ ಬಾಬು ಟಿ.ಸಿ. ಮತ್ತು ಎಂ. ಕೇಶವಮೂರ್ತಿ

English summary
Success story of Vasathi Yojane. Chief Minister Siddaramaiah interact with beneficiaries of scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X