ವಿದ್ಯಾರ್ಥಿಗಳ ಚಿಂತೆ ದೂರ ಮಾಡಿದ ವಿದ್ಯಾಸಿರಿ

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅತಿ ಹೆಚ್ಚಿನ ಬೇಡಿಕೆ ಇರುವುದರಿಂದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ದೊರಕದ ಕಾರಣ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳಿಗೆ ಊಟ ವಸತಿ ಸಹಾಯ ಯೋಜನೆಯನ್ನು ವಿದ್ಯಾಸಿರಿ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದೆ.

* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಆದರ್ಶ ಎಂಬ ವಿದ್ಯಾಸಿರಿ ಫಲಾನುಭವಿ ತಮ್ಮ ಅನುಭವ ಹಂಚಿಕೊಂಡರು. 'ಹಾಸ್ಟೆಲ್‌ನಲ್ಲಿ ಸ್ಥಳ ದೊರೆಯಲಿಲ್ಲ. ನನ್ನ ಶಿಕ್ಷಣದ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು. ವಿದ್ಯಾಸಿರಿ ಯೋಜನೆಯಿಂದಾಗಿ ಇಂದು ನೆಮ್ಮದಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದೇನೆ' ಎಂದು ಯೋಜನೆಯನ್ನು ಶ್ಲಾಘಿಸಿದರು. [ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜಿಗೆ ಅರ್ಜಿ ಆಹ್ವಾನ]

Success story of Vidya Siri scheme

* ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನ ಬಸವರಾಜ ಅವರು, 'ವಿದ್ಯಾಸಿರಿ ಅಡಿ ದೊರಕುತ್ತಿರುವ ಸೌಲಭ್ಯಕ್ಕೆ ಸಂತಸ ವ್ಯಕ್ತಪಸಿದರು. ಆದರೆ, ಇದನ್ನು ಇನ್ನೂ ಹೆಚ್ಚು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. [ಕೃಷಿಯ ಬಗ್ಗೆ ಮಂಡ್ಯ ರೈತರಿಗೆ ವಿದ್ಯಾರ್ಥಿಗಳ ಪಾಠ]

* ಗುಲಬರ್ಗಾ ಜಿಲ್ಲೆಯ ಶಹಾಪೂರ ತಾಲ್ಲೂಕಿನ ದಸ್ತಾಪುರ್ಕಿ ಗ್ರಾಮದ ಶಕುಂತಲಾ ಅವರು, 'ಸರ್ಕಾರವು ವರ್ಷಕ್ಕೆ ಸರಿ ಸುಮಾರು 12 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ವಿದ್ಯಾರ್ಥಿನಿಯರ ವಿಧ್ಯಾಭ್ಯಾಸಕ್ಕೆ ಯೋಜನೆಯಿಂದ ಅನುಕೂಲವಾಗಿದೆ' ಎಂದರು.

ಮೈತ್ರಿ ಯೋಜನೆ : ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವ ಲಿಂಗ ಅಲ್ಪಸಂಖ್ಯಾತರಿಗಾಗಿ ರಾಜ್ಯ ಸರ್ಕಾರ ಮೈತ್ರಿ ಯೋಜನೆಯನ್ನು ರೂಪಿಸಿದೆ.

* ವಿಜಯಪುರದ ಸತೀಶ್ ಮತ್ತು ಶಬ್ಬೀರ್ ಲಿಂಗತ್ವ ಅಲ್ಪ ಸಂಖ್ಯಾತರು ಯೋಜನೆ ಬಗ್ಗೆ ಅಭಿಪ್ರಾಯ ಹಂಚಿಕೊಂಡರು, 'ಮೈತ್ರಿ ಯೋಜನೆ ಜಾರಿಗೆ ಬಂದಮೇಲೆ ನಾವು ಮುಖ್ಯ ವಾಹಿನಿಗೆ ಬರುವಂತಾಗಿದ್ದೇವೆ. ಸರ್ಕಾರ ನೀಡುತ್ತಿರುವ ಪ್ರಾಥಮಿಕ ಸೌಲಭ್ಯ ಸಂತಸ ತಂದಿದೆಯಾದರೂ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಿ ಎಂಬುದು ನಮ್ಮ ಆಶಯ' ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+