ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 12 ರಂದು ರಾಜ್ಯಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನ

ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ 'ವಿವೇಕ್ ಬ್ಯಾಂಡ್-2016'ಜನವರಿ 12 ರಂದು ಆರಂಭ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ 'ವಿವೇಕ್ ಬ್ಯಾಂಡ್-2016' ಇದೇ ಬರುವ ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಜನವರಿ 12, 2017 ರಂದು ಸ್ವಾಮಿ ವಿವೇಕಾನಂದರ 154ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್‍ಬ್ಯಾಂಡ್‍ನ್ನು ಧರಿಸಲಿದ್ದು, ವಿವೇಕಾನಂದರು ಯುವಜನರಿಗೆ ನೀಡಿದ 'ಉತ್ತಮನಾಗು-ಉಪಕಾರಿಯಾಗು' (BE GOOD - DO GOOD) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ.

ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಜನವರಿ 12, 2017 ರಿಂದ 26 ಜನವರಿ 2017 ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 12 ಲಕ್ಷ ಯುವಕ- ಯುವತಿಯರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಸಾಮಾಜಿಕ ಸಂಸ್ಥೆ 'ಸಮರ್ಥ ಭಾರತ' ಈ ಯುವ ಅಭಿಯಾನವನ್ನು ಆಯೋಜಿಸಿದೆ.

ಯುವ ಜನತೆಯನ್ನು ಪ್ರೇರೇಪಿಸುವ ಕಾರ್ಯ

ಯುವ ಜನತೆಯನ್ನು ಪ್ರೇರೇಪಿಸುವ ಕಾರ್ಯ

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಗುಣ ಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ "ಉತ್ತಮನಾಗು-ಉಪಕಾರಿಯಾಗು" ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ.

ವಿವೇಕ್ ಬ್ಯಾಂಡ್

ವಿವೇಕ್ ಬ್ಯಾಂಡ್" ಅಭಿಯಾನದ ಪ್ರಚಾರ

ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್‍ಸೈಟ್, ಸಾಮಾಜಿಕ ಜಾಲತಾಣಗಳು , ವಾಟ್ಸಪ್, ಮತ್ತು ಎಸ್‍ಎಮ್‍ಎಸ್ ಗಳನ್ನು ಬಳಸುವ ಮೂಲಕ "ವಿವೇಕ್ ಬ್ಯಾಂಡ್" ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ವಿವೇಕ್ ಬ್ಯಾಂಡ್ ಧರಿಸುವವರಿಗೆ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

 'ಕಾರ್ನಿಯಾ ಅಂಧತ್ವ'ದ ಕುರಿತು ಸಾಮಾಜಿಕ ಜಾಗೃತಿ

'ಕಾರ್ನಿಯಾ ಅಂಧತ್ವ'ದ ಕುರಿತು ಸಾಮಾಜಿಕ ಜಾಗೃತಿ

ಈ ವರ್ಷ ವಿವೇಕ್ ಬ್ಯಾಂಡ್ ಅಭಿಯಾನವು ಭಾರತ ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಲ್ಲಿ ಒಂದಾದ 'ಕಾರ್ನಿಯಾ ಅಂಧತ್ವ'ದ ಕುರಿತು ಸಾಮಾಜಿಕ ಜಾಗೃತಿ ಮೂಡಿಸಿ, ಅದನ್ನು ಹೋಗಲಾಡಿಸುವ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನಕ್ಕೆ ಬೆಂಬಲ ನೀಡಿದ್ದು, ಯುವಜನತೆಯಲ್ಲಿ ನೇತ್ರದಾನದ ಕುರಿತು ಜಾಗೃತಿಯನ್ನು ಮೂಡಿಸಿ ಅವರು ನೇತ್ರದಾನದ ಪ್ರತಿಜ್ಞೆ ಕೈಗೊಳ್ಳಬೇಕೆಂದು ಮನವಿ ಮಾಡಿದೆ.

ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು,ಸಮಾಜದ ಅನೇಕ ಕ್ಷೇತ್ರಗಳಲ್ಲಿ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ .

ನಮ್ಮ ಅಭಿಯಾನದ ರಾಯಭಾರಿಗಳು

ನಮ್ಮ ಅಭಿಯಾನದ ರಾಯಭಾರಿಗಳು

ಸ್ಮೃತಿ ಇರಾನಿ, ವೀರೇಂದ್ರ ಹೆಗ್ಗಡೆ, ನಿರ್ಮಲನಂದನಾಥ ಸ್ವಾಮೀಜಿ, ರವಿಶಂಕರ್ ಗುರೂಜಿ, ಲಕ್ಷ್ಮಿ ಗೋಪಾಲಸ್ವಾಮಿ, ಭಾವನಾ ಚಿರಂಜಯ್
ಅಶ್ವಿನ್ ಅಂಗಡಿ, ಶರತ್ ಗಾಯಕ್ವಾಡ್,ಡಾ|| ಅಣ್ಣಾದೊರೈ, ಇಸ್ರೋ ವಿಜ್ಞಾನಿಗಳು
ನ್ಯಾ.ಮೂ. (ನಿವೃತ್ತ ) ಶಿವರಾಜ ಪಾಟೀಲ್, ಡಾ|| ದೇವಿ ಶೆಟ್ಟಿ,
ಶ್ರೀನಗರ ಕಿಟ್ಟಿ , ಬಿ.ಸಿ. ಪಾಟೀಲ್, ಮಮತಾ ಪೂಜಾರಿ,
ಚಕ್ರವರ್ತಿ ಸೂಲಿಬೆಲೆ, ಮಿಥುನ್ ಅಭಿಮನ್ಯು, ಗುರುಕಿರಣ್ ಮುಂತಾದವರು ನಮ್ಮ ಅಭಿಯಾನದ ರಾಯಭಾರಿಗಳು

ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯ

ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯ

ಜನವರಿ 05 2017 ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ. ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು www.samarthabharata.org , www.vivekband.com
ವೆಬ್‍ಸೈಟ್ ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: : 8861201060, 9663330692 ಇಮೈಲ್ ವಿಳಾಸ: [email protected]

English summary
Statewide mega youth campaign VIVEK BAND-2017 to begin on January 12 in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X