ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಇಳಿಮುಖವಾದ ಕೊರೊನಾ ಸೋಂಕು: 9,808 ಪ್ರಕರಣಗಳು ಪತ್ತೆ

|
Google Oneindia Kannada News

ಬೆಂಗಳೂರು, ಜೂನ್ 08: ಕರ್ನಾಟಕದಲ್ಲಿ ಕೊರೊನಾ ಸೋಂಕು ಇಳಿಮುಖ ಕಂಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 9,808 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 27,17,289ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 179 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 32,099ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ದಾಖಲೆ: ಭಾರತೀಯರಿಗೆ ಖುಷಿ ಕೊಡುವ ಅಂಕಿ-ಅಂಶಗಳು!ಕೊರೊನಾ ದಾಖಲೆ: ಭಾರತೀಯರಿಗೆ ಖುಷಿ ಕೊಡುವ ಅಂಕಿ-ಅಂಶಗಳು!

ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 23,449 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 24,60,165ಕ್ಕೆ ಏರಿಕೆಯಾಗಿದೆ. ಇನ್ನು 2,25,004 ಸಕ್ರಿಯ ಪ್ರಕರಣಗಳಿವೆ.

State Reports 9808 New Covid 19 Cases on June 08

ಬೆಂಗಳೂರಿನಲ್ಲಿ ಇಂದು 2,028 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,87,146ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 44 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ 24 ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ 44, ಗ್ರಾಮಾಂತರದಲ್ಲಿ 8, ಶಿವಮೊಗ್ಗ 10, ಹಾವೇರಿ 3, ಧಾರವಾಡದಲ್ಲಿ 9, ಹಾಸನದಲ್ಲಿ 9, ಮೈಸೂರಿನಲ್ಲಿ 15 ಪ್ರಕರಣಗಳು ಸೇರಿವೆ.

ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 2,028, ಬೆಳಗಾವಿಯಲ್ಲಿ 443, ಬಳ್ಳಾರಿಯಲ್ಲಿ 212, ಚಿಕ್ಕಬಳ್ಳಾಪುರದಲ್ಲಿ 173, ಚಿಕ್ಕಮಗಳೂರು 287, ದಕ್ಷಿಣ ಕನ್ನಡದಲ್ಲಿ 525, ದಾವಣಗೆರೆಯಲ್ಲಿ 384, ಹಾಸನದಲ್ಲಿ 659, ಮೈಸೂರಿನಲ್ಲಿ 974, ಶಿವಮೊಗ್ಗದಲ್ಲಿ 703, ತುಮಕೂರಿನಲ್ಲಿ 589, ಉಡುಪಿಯಲ್ಲಿ 205, ಉತ್ತರ ಕನ್ನಡದಲ್ಲಿ 187 ಪ್ರಕರಣಗಳು ವರದಿಯಾಗಿವೆ.

Recommended Video

Stories of Strength : Corona ಗೆದ್ದು ಮನೆಗೆ ಬಂದ 98 ವರ್ಷದ ತಾತನಿಗೆ ಭರ್ಜರಿ ಸ್ವಾಗತ | Oneindia Kannada

ರಾಜ್ಯಾದ್ಯಂತ ಇಂದು 1,30,224 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 9,808 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 7.53ಕ್ಕೆ ಇಳಿದಿದೆ.

English summary
Karnataka reported 9808 new COVID-19 cases, 179 deaths and 23,449 recoveries in the last 24 hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X