ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿ ಸುರಂಗ ಮಾರ್ಗ ಪತ್ತೆ?
ಹುಬ್ಬಳ್ಳಿ, ಅಕ್ಟೋಬರ್. 28: ಹುಬ್ಬಳ್ಳಿಯ ಕಾರವಾರ ರಸ್ತೆ ಸಮೀಪ ಲೇಔಟ್ ನಿರ್ಮಾಣ ಮಾಡಲು ನೆಲ ಸಮತಟ್ಟು ಮಾಡುವ ವೇಳೆ ಗುಹೆ ರೀತಿಯ ರಚನೆಯೊಂದು ಪತ್ತೆಯಾಗಿದ್ದು ಪೊಲೀಸರಿಗೆ ಗೊಂದಲ ಮೂಡಿಸಿತ್ತು. ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುತ್ತೆ ಎಂಬ ಸುದ್ದಿ ಹರಡಿದ್ದು ಜನರ ಕುತೂಹಲಕ್ಕೂ ಕಾರಣವಾಗಿತ್ತು.
ಕಾರವಾರ ರಸ್ತೆಯ ಮೇಲ್ಸೆತುವೆ ಸಮೀಪ ಖಾಸಗಿ ಬಿಲ್ಡರ್ ನಿವೇಶನ ಸಮತಟ್ಟುಗೊಳಿಸಲು ಗುಡ್ಡ ಅಗೆಸುತ್ತಿದ್ದಾಗ ಈ ಗುಹೆ ಪತ್ತೆಯಾಗಿತ್ತು. ಗುಹೆ ಮೂಲಕ ಕಾಶ್ಮೀರಕ್ಕೆ ತೆರಳುತ್ತಿದ್ದರು ಎಂದು ಕೆಲವರು ಹೇಳಿದರೆ, ಇದು ಬಾಬಾ ಬುಡನ್ ಗಿರಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಊಹಾಪೋಹ ಹಬ್ಬಿಸಿದ್ದರು.ಪರಿಣಾಮ ಕೆಲವೇ ಗಂಟೆಗಳ ಅಂತರದಲ್ಲಿ ಸಾವಿರಾರು ಜನ ಸೇರಿದರು.[ನೇಮಕಾತಿ ಆದೇಶವಿಲ್ಲ. ಆದರೂ ದುಡಿಯುವುದು ತಪ್ಪಿಲ್ಲ]

ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಇದು ಭೂಮಿಯ ರಚನೆ ಅಷ್ಟೇ. 8-9 ಅಡಿ ಉದ್ದ ಇರಬಹುದು. ಗುಹೆ ಅಥವಾ ಸುರಂಗ ಮಾರ್ಗ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದ್ದಾರೆ.[ಹುಬ್ಬಳ್ಳಿ ದಸರಾ ನೋಡಿಕೊಂಡು ಬನ್ನಿ]
ಹಿರಿಯ ಶಿಕ್ಷಕಿ ಅನುರಾಧಾ ಯಶವಂತ್ ಕಿತ್ತೂರ್ ನಿಧನ
ಬೆಳಗಾವಿಯ ಹಿರಿಯ ಶಿಕ್ಷಕಿ ಅನುರಾಧಾ ಯಶವಂತ್ ಕಿತ್ತೂರ್ (99) ಬುಧವಾರ ನಿಧನರಾಗಿದ್ದಾರೆ. 'ಅನುತೈ' ಎಂದೇ ಪ್ರಖ್ಯಾತರಾಗಿದ್ದ ಅನುರಾಧಾ ಭಗವದ್ಗೀತೆ ಯಲ್ಲಿ ಪಾಂಡಿತ್ಯ ಸಂಪಾದಿಸಿಕೊಂಡಿದ್ದರು.
ಕ್ರೀಡಾ ಸ್ಪರ್ಧೆಗಳಲ್ಲೂ ಸದಾ ಮುಂದೆ ಇರುತ್ತಿದ್ದ ಕಿತ್ತೂರ್ ಅವರು 1941 ರಲ್ಲೇ ಬಿಎ ಪದವಿ ಗಳಿಸಿದ್ದರು. ಸಂತ್ ಪೌಲ್ ಶಾಲೆಯಲ್ಲಿ 32 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದ ಅನುರಾಧಾ ಮರಾಠಿ ಮತ್ತು ಸಂಸ್ಕೃತವನ್ನು ಬೋಧನೆ ಮಾಡುತ್ತಿದ್ದರು. ಬೆಳಗಾವಿಯಲ್ಲಿ ಮೊದಲ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೂ ಕಾರಣವಾಗಿದ್ದರು.












Click it and Unblock the Notifications