ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌: ಸರ್ಕಾರಕ್ಕೆ 629 ಕೋಟಿ ರೂ. ಹೊರೆ

ಬೆಂಗಳೂರು, ಮೇ 28: ಈ ಹಿಂದಿನ ಕಾಂಗ್ರೆಸ್ ಸರ್ಕಾರ 2018-19 ನೇ ಸಾಲಿಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಘೋಷಿಸಲಾಗಿತ್ತು. ಆದರೆ ಸರ್ಕಾರ ರಚನೆಯಲ್ಲಿನ ವಿಳಂಬದಿಂದಾಗಿ ಆದೇಶ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ.

ಈ ಯೋಜನೆ ಅನುಷ್ಠಾನ ಮಾಡಿದರೆ ಸರ್ಕಾರದ ಮೇಲೆ 629 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಕುರಿತು ಆರ್ಥಿಕ ಇಲಾಖೆ ಒಪ್ಪಿಗೆಗಾಗಿ ಸಾರಿಗೆ ಇಲಾಖೆ ಕಡತ ರವಾನಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಿಸುತ್ತಿವೆ.

ಒಟ್ಟಾರೆ ಪಾಸ್ ವೆಚ್ಚದಲ್ಲಿ ಶೇ.50 ಸರ್ಕಾರದಿಂದ ಸಹಾಯಧನ, ಶೇ.25 ಮೊತ್ತ ವಿದ್ಯಾರ್ಥಿಗಳಿಂದ ಮತ್ತು ಉಳಿದ ಶೇ.25 ಮೊತ್ತವನ್ನು ನಿಗಮವೇ ಭರಿಸುತ್ತಿದೆ. 2017ರಲ್ಲಿ ಎಸ್‌ಸಿಪಿ, ಡಿಎಸ್‌ಪಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿತ್ತು. ಬಜೆಟ್‌ನಲ್ಲಿ ಘೋಷಿಸಿರುವಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ವಿತರಿಸಿದಲ್ಲಿ, ವಿದ್ಯಾರ್ಥಿಗಳ ಸಂಖ್ಯೆ ಶೇ.20-25 ರಷ್ಟು ಏರಿಕೆಯಾಗಲಿದೆ.

State govt to bear Rs 629 crore of burden to free bus pass\

ಪಾಸಿನ ದರ ಉಚಿತವಾಗಿದ್ದು, ಪಾಸ್ ಮುದ್ರಾಣಾ ವೆಚ್ಚ, ವಿತರಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.2017-18 ನೇ ಸಾಲಿನಲ್ಲಿ ನಿಗಮಗಳು 18.29 ಲಕ್ಷ ವಿದ್ಯಾರ್ಥಿಗಳಿಗಹೆ ಉಚಿತ ಹಾಗೂ ರಿಯಾಯಿತಿ ದರದ ಬಸ್ ಪಾಸ್ ವಿತರಿಸಿತ್ತು.

2018-19 ನೇ ಸಾಲಿನಲ್ಲಿ ಉಚಿತ ಪಾಸು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 22 ರಿಂದ 23 ಲಕ್ಷದವರೆಗೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಚಿತ ಬಸ್ ಪಾಸ್ ವಿತರಿಸಲು 1,955.06 ಕೋಟಿ ರೂ. ವೆಚ್ಚವಾಗಲಿದೆ. 2018-19 ನೇ ಸಾಲಿನ ಬಜೆಟ್‌ನಲ್ಲಿ ಪಾಸ್‌ಗೆ 836.98 ಕೋಟಿ ರೂ. ಸಹಾಯ ಧನ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+