ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಪೇದೆಗಳಿಗೆ ಕೇವಲ 99 ರೂ. ಪ್ಲ್ಯಾನ್ ಆಧಾರಿತ ಸಿಮ್‌!

By Nayana
|
Google Oneindia Kannada News

ಬೆಂಗಳೂರು, ಜು.14: ಪೊಲೀಸ್‌ ಇಲಾಖೆಯು ಐಪಿಎಸ್‌, ಡಿವೈಎಸ್‌ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ರೀತಿ ಇನ್ನುಮುಂದೆ ಕಾನ್‌ಸ್ಟೆಬಲ್‌ಗಳಿಗೂ ಉಚಿತವಾಗಿ ಸಿಮ್ ಕಾರ್ಡ್‌ ನೀಡಲು ಮುಂದಾಗಿದೆ.

ಈ ರೀತಿಯಾಗಿ ಕಾನ್‌ಸ್ಟೆಬಲ್‌ಗಳಿಗೆ ಉಚಿತ ಸಿಮ್‌ ಕೊಡುವುದರಿಂದ ಕೆಳಹಂತದ ಸಿಬ್ಬಂದಿಯನ್ನು ಸಾರ್ವಜನಿಕರು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವುದರ ಜತೆಗೆ ಪೊಲೀಸರ ಮೈಗಳ್ಳತನಕ್ಕೆ ಕಡಿವಾಣ ಬೀಳಲಿದೆ ಎನ್ನುವುದು ಪೊಲೀಸ್‌ ಇಲಾಖೆಯ ನಂಬಿಕೆಯಾಗಿದೆ.

ಬೆಂಗಳೂರಲ್ಲಿ ಪಾನಮತ್ತ ಪೊಲೀಸರು ಮೇಲಾಧಿಕಾರಿಯನ್ನೇ ಥಳಿಸಿದರುಬೆಂಗಳೂರಲ್ಲಿ ಪಾನಮತ್ತ ಪೊಲೀಸರು ಮೇಲಾಧಿಕಾರಿಯನ್ನೇ ಥಳಿಸಿದರು

ಈಗಾಗಲೇ ರಾಜ್ಯಾದ್ಯಂತ ಜಾರಿಗೆ ತಂದಿರುವ ಹೊಸ ಬೀಟ್‌ ವ್ಯವಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ 287,868 ಪೊಲೀಶರಿಗೆ ಪ್ರತ್ಯೇಕ ನಂಬರ್‌ ವಿತರಿಸಲಾಗುತತ್ದೆ. ಮಾಸಿಕ 99 ರೂ.ನ ವಿಶೇಷ ಪ್ಲ್ಯಾನ್‌ ನೀಡಲಾಗುತ್ತಿದ್ದು, ಇಲಾಖೆಯ ಕೆಲಸಕ್ಕಾಗಿ ಮಾತ್ರವೇ ಸಿಮ್‌ ಬಳಸಬೇಕೆಂದು ಷರತ್ತು ವಿಧಿಸಲಾಗಿದೆ.

State govt provides mobile SIM worth Rs.99 plan!

ಪ್ರದೇಶಕ್ಕೊಬ್ಬ ಕಾನ್‌ಸ್ಟೆಬಲ್‌ನಂತೆ ಹೊಸ ಬೀಟ್‌ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಪದ್ಧತಿಯನ್ವಯ ಒಂದು ಗ್ರಾಮ ಅಥವಾ ಏರಿಯಾಗೆ ಒಬ್ಬ ಪೇದೆ ಹಾಗೂ ಎಎಸ್‌ಐ ನಿಯೋಜಿಸಲಾಗಿದೆ. ಆ ಪ್ರದೇಶದ ಸಂಪೂರ್ಣ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳಬೇಕಾಗುತ್ತದೆ. ಈ ಕುರಿತು ಬಿಎಸ್‌ಎನ್‌ಎಲ್‌ ಕಂಪನಿ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
It is strange but true that the state government has decided to provide mobile SIM for 28,889 police constables that is too Rs.99 plan for a month. If bill would exceeds that the same will be paid by the constables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X