ರಾಜ್ಯ ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಮಾತ್ರ ಕೆಲಸ?
ಬೆಂಗಳೂರು, ಜೂನ್ 6: ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸಕ್ಕೆ ಸೀಮಿತಗೊಳಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ಸರ್ಕಾರಿ ನೌಕಕರಲ್ಲಿ ಕಾರ್ಯಕ್ಷಮತೆ, ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಚಿಂತನೆ ರೂಪುಗೊಂಡಿದೆ. ಮುಂದುವರೆದಿರುವ ರಾಷ್ಟ್ರಗಳು ಹಾಗೂ ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ವಾರದಲ್ಲಿ ಐದು ದಿನ ಕೆಲಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸುವ ಚಿಂತನೆಯನ್ನು ಎಚ್‌ಡಿ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕುಟುಂಬದವರೊಂದಿಗೆ ವಾರಾಂತ್ಯದಲ್ಲಿ ಎರಡು ದಿನ ಕಾಲ ಕಳೆಯಬಹುದಾಗಿದೆ. ಪ್ರವಾಸ, ವಿಹಾರ ಕೈಗೊಂಡು ಕೆಲಸಕ್ಕೆ ಮರಳುವಾಗ ಉತ್ತಮ ಮನಸ್ಸಿನಿಂದ ಬರಬಹುದಾಗಿದೆ.ಆದರೆ ಸೋಮವಾರದಿಂದ ಶುಕ್ರವಾದವರೆಗೆ ಕೆಲಸ ಮಾಡಿ ಶನಿವಾರ ಮತ್ತು ಭಾನುವಾರ ಖುಷಿಯಾಗಿರಲು ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ.

ಕೆಲವು ಜಯಂತಿ ದಿನಗಳಂದು ರಜೆಯನ್ನು ರದ್ದುಗೊಳಿಸಲಾಗುತ್ತದೆ. ಬದಲಿಗೆ ಆಯಾ ಸಮುದಾಯದವರು ಬೇಕಾದರೆ ನಿರ್ಬಂಧಿತ ರಜೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಾಮಾನ್ಯ ದಿನಗಳ ಕಚೇರಿ ಕೆಲಸದ ಅವಧಿಯನ್ನು ಕನಿಷ್ಠ 1 ತಾಸಿನಿಂದ ಒಂದೂವರೆ ಗಂಟೆ ಕಾಲ ವಿಸ್ತರಣೆ ಮಾಡಲಾಗುತ್ತದೆ.
ಸದ್ಯ ರಾಜ್ಯ ಸರ್ಕಾರಿ ನೌಕರರ ಕೆಲಸದ ಸಮಯ ಬೆಳಗ್ಗೆ 10.30ರಿಂದ ಸಂಜೆ 5.30. ಮಧ್ಯಾಹ್ನ ಒಂದು ತಾಸು ಭೋಜನ ವಿರಾಮ. ಅಂದರೆ ದಿನಕ್ಕೆ ಆರು ತಾಸು ತಾಸು ಕೆಲಸ ಮಾಡಬೇಕಿದೆ ಇದನ್ನು ಒಣದರಿಂದ ಒಂದೂವರೆ ತಾಸು ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications