ನಂದಿ ಬೆಟ್ಟ ಅಭಿವೃದ್ಧಿ ಯೋಜನೆಗೆ 40 ಕೋಟಿ ಅನುದಾನ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್, 29 : ಪಂಚ ಗಿರಿಗಳ ಧಾಮ ನಂದಿ ಬೆಟ್ಟ ಪ್ರವಾಸಿ ತಾಣವನ್ನು ಜಗತ್ತಿನ ಅದ್ಭುತ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸುವ ಸಲುವಾಗಿ, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ 40 ಕೋಟಿ ರೂ ಅನುದಾನ ಮಂಜೂರು ಮಾಡಿದೆ.
ಜಿಲ್ಲಾಡಳಿತ ವತಿಯಿಂದ ನಂದಿ ಬೆಟ್ಟದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ. ಕೆ. ಸುಧಾಕರ್, 'ನಂದಿಬೆಟ್ಟದ ಖ್ಯಾತಿಯನ್ನು ದುಪ್ಪಟ್ಟು ಗೊಳಿಸಲು 25 ಕೋಟಿ ರೂ ವೆಚ್ಚದಲ್ಲಿ ರೋಪ್ ವೇ, 8 ಕೋಟಿಯಲ್ಲಿ ರಸ್ತೆ ಸಂಪರ್ಕ, 2.5 ಕೋಟಿಯಲ್ಲಿ ಉದ್ಯಾನವನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.[ಇದೇನಪ್ಪಾ ಇದು... ನಗು ಕಲಿಯೋಕೂ ಬಂತು ವಿಶ್ವವಿದ್ಯಾಲಯ]

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಮಾತನಾಡಿ, ಪಂಚಗಿರಿಗಳ ಧಾಮ, ಪಂಚ ನದಿಗಳ ಉಗಮ ಸ್ಥಳವಾದ ನಂದಿ ಬೆಟ್ಟ ಪ್ರವಾಸಿ ತಾಣವನ್ನು ಅಭಿವೃದ್ದಿ ಪಡಿಸಲು ನಂದಿ ಬೆಟ್ಟ ಹೆರಿಟೇಜ್ ಸರ್ಕಲ್ ಯೋಜನೆ ರೂಪಿಸಲಾಗಿದೆ.
ಇದರ ಅಡಿಯಲ್ಲಿ ಸುತ್ತಮುತ್ತಲಿನ ಪಂಚಗಿರಿಗಳು, ಸರ್. ಎಂ ವಿಶ್ವೇಶ್ವರಯ್ಯ ಅವರ ಮುದ್ದೇನ ಹಳ್ಳಿ, ಕಣಿವೆ ಬಸವಣ್ಣ ದೇವಸ್ಥಾನ ಹಾಗೂ ನಂದಿ ದೇವಸ್ಥಾನಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಚಿಂತಾಮಣಿಯಲ್ಲಿ ಕೈವಾರ ಹೆರಿಟೇಜ್, ಗೌರಿಬಿದನೂರಿನಲ್ಲಿ ವಿದುರಾಶ್ವತ ಹೆರಿಟೇಜ್ ಸೆಂಟರ್ ನಿರ್ಮಿಸಲಾಗುತ್ತದೆ ಹೇಳಿದರು.












Click it and Unblock the Notifications