ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಗೀತೆ ಕತ್ತರಿ: ಯುಟ್ಯೂಬಲ್ಲಿ ಕೇಳಿ, ಅಭಿಪ್ರಾಯ ತಿಳಿಸಿ

|
Google Oneindia Kannada News

ಬೆಂಗಳೂರು, ಜ. 11 : ನಾಡಗೀತೆಗೆ ಕತ್ತರಿ ಹಾಕುವ ಮತ್ತು ಧಾಟಿಯಲ್ಲಿನ ಬದಲಾವಣೆ ಚರ್ಚೆ ಇದೀಗ ಸಾರ್ವಜನಿಕ ವಲಯಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಸಾಹಿತಿಗಳು, ಚಿಂತಕರು ಮತ್ತು ರಾಜಕಾರಣಿಗಳ ನಡುವಿದ್ದ ವಿಚಾರದ ಮೇಲೆ ಜನರಿಗೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ದೊರೆತಿದೆ.

ಯು ಟ್ಯೂಬ್ ನಲ್ಲಿ ನಾಡಗೀತೆಯ ಪ್ರಕಾರಗಳನ್ನು ಹರಿಯಬಿಡಲಾಗಿದೆ. ಕುವೆಂಪು ಅವರ 'ಕೊಳಲು' ಕವನ ಸಂಕಲದ 2 ನಿಮಿಷ 30 ಸೆಕೆಂಡ್ ಪದ್ಯವನ್ನು ಮತ್ತು ಕವಿ ಚೆನ್ನವೀರ ಕಣವಿ ಸಮಿತಿ ಶಿಫಾರಸು ಮಾಡಿದ್ದ ಹೊಸ ಗೀತೆಯನ್ನು ಆಲಿಸಬಹುದಾಗಿದೆ.[ನಾಡಗೀತೆ ಕತ್ತರಿ ಪ್ರಯೋಗಕ್ಕೆ ಭುಗಿಲೆದ್ದ ಆಕ್ರೋಶ]

karnataka

ಅಡ್ರೆಸ್ ಬದಲು ಯೂ ಟ್ಯೂಬ್ ನಲ್ಲಿ 'Nadageete' ಎಂದು ನೇರವಾಗಿ ಬರೆದರೂ ರಾಜ್ಯ ಸರ್ಕಾರದ ಲಾಂಛನವಿರುವ ಎರಡು ಗೀತೆ ತೆರೆದುಕೊಳ್ಳತ್ತದೆ. ಇಲ್ಲಿ ನಾಗರಿಕರು ಗೀತೆಯನ್ನು ಆಲಿಸಿ ಅಭಿಪ್ರಾಯ ತಿಳಿಸಬಹುದಾಗಿದೆ.

ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂತರ್ಜಾಲ ತಾಣ kannadasiri.in ಕ್ಕೂ ಭೇಟಿ ನೀಡಿ ಎರಡೂ ಬಗೆಯ ಗೀತೆ ಕೇಳಬಹುದು. ಗೀತೆ ಆಲಿಸಿದ ನಾಗರಿಕರು ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.

2 ನಿಮಿಷ 30 ಸೆಕೆಂಡ್ ನ ಗೀತೆ

ನಾಡಗೀತೆ ಕತ್ತರಿಸುವ ಬಗ್ಗೆ ಗೊಂದಲಗಳು ಏರ್ಪಟ್ಟಿದ್ದು ನಾಗರಿಕರ ಅಭಿಪ್ರಾಯ ಸಂಗ್ರಹಿಸಲು ಇಂಥ ಕ್ರಮಕ್ಕೆ ಮುಂದಾಗಲಾಗಿದೆ. ಜನರ ಭಾವನೆಗಳನ್ನು ರಾಜ್ಯ ಸರ್ಕಾರ ಗೌರವಿಸಲಿದ್ದು ಒಂದು ಹಂತದ ಪ್ರತಿಕ್ರಿಯೆ ಗಮನಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಶಿಫಾರಸು ಮಾಡಿರುವ ಗೀತೆ

English summary
State Government released Two version of State anthem in You Tube to get people opinion about trimming of State anthem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X