ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ
ಬೆಂಗಳೂರು, ಜನವರಿ 16: ರಾಜ್ಯ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮತದಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 2001ರ ಜನವರಿ 1ಕ್ಕೂ ಮೊದಲು ಜನಿಸಿರುವ ಎಲ್ಲರೂ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, 2001ರ ಜನವರಿ 1ಕ್ಕೂ ಮೊದಲು ಜನಿಸಿರುವ ಎಲ್ಲರೂ ಮತ ಚಲಾಯಿಸುವ ಅರ್ಹತೆ ಪಡೆಯಲಿದ್ದಾರೆ. ಇನ್ನೂ ಸಮಯ ಇರುವುದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ. ಮತದಾರರ ಪಟ್ಟಿ ಪರಿಶೀಲಿಸಿ ಹೆಸರು ಇದೆಯೋ ಇಲ್ಲವೇ ಪರಿಶೀಲಿಸಬೇಕು. ಜೊತೆಗೆ ಹೆಸರಿನಲ್ಲಿ ವ್ಯತ್ಯಾಸ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ನೋಡಬಹುದು. ಚುನಾವಣೆಯಲ್ಲಿ ಮತದಾನ ಮಾಡಬೇಕಾದರೆ ಹೆಸರು ಪಟ್ಟಿಯಲ್ಲಿ ಇರಲೇಬೇಕು. ಈ ಹಿಂದೆ ಹೆಸರು ಇತ್ತು, ಮತದಾರರ ಗುರುತಿನ ಚೀಟಿ ಇದೆ ಎಂಬ ಕಾರಣಕ್ಕೆ ಮತಚಲಾಯಿಸಲು ಸಾಧ್ಯವಿಲ್ಲ. ಈಗಿನ ಪಟ್ಟಿಯಲ್ಲಿ ಹೆಸರು ಇರಲೇಬೇಕು.

ತಮ್ಮ ಕುಟುಂಬದ ಹೆಸರು ಪರಿಶೀಲಿಸಿ, ಹೆಸರು ಸೇರಿಸಲು ಫಾರಂ 6 ಬಳಸಬೇಕು. ಖುದ್ದಾಗಿಯೇ ಅರ್ಜಿ ನೀಡಬೇಕು ಎಂದಿಲ್ಲ. ಆನ್ ಲೈನ್‌ನಲ್ಲಿ ಕೂಡ ರಿಜಿಸ್ಟ್ರೇಷನ್ ಮಾಡಬಹುದು. ಮನೆಗೆ ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಆಯೋಗದ ಅಧಿಕಾರಿಗಳು ಪಟ್ಟಿಗೆ ಹೆಸರು ಸೇರ್ಪಡೆ ಮಾಡುತ್ತಾರೆ ಎಂದರು.
2019 ರ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಒಟ್ಟು 2,54,55,976 ಪುರುಷ ಮತದಾರರು, 2,48,46,488 ಮಹಿಳಾ ಮತದಾರರು, 4,718 ತೃತೀಯ ಲಿಂಗಿಗಳು ಸೇರಿ ಒಟ್ಟು 5,03,07,182 ಮತದಾರರಿದ್ದಾರೆ. ಇಪಿ ಅನುಪಾತ 71.7 ಮತ್ತು ಲಿಂಗಾನುಪಾತ 973 ಇದೆ ಎಂದು ಮಾಹಿತಿ ನೀಡಿದರು.
ಯುವ ಮತದಾರರ ಸಂಖ್ಯೆ ಹೆಚ್ಚಾಗಬೇಕಿದೆ. ಪಟ್ಟಿಗೆ ಸೇರ್ಪಡೆಗೊಳ್ಳಲು ತುಂಬಾ ಜನರು ಹೆಸರು ನೀಡಿಲ್ಲ. ಸದ್ಯ, 7.12 ಲಕ್ಷ ಯುವ ಮತದಾರರಿದ್ದಾರೆ. ಆದರೆ 15 ಲಕ್ಷಕ್ಕೆ ತಲುಪುವುದು ನಮ್ಮ ಗುರಿ ಎಂದರು.

ಅಂಗವೈಕಲ್ಯವುಳ್ಳ ಮತದಾರರಿಗೆ ಈ ಬಾರಿ ಮನೆಯಿಂದ ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗುತ್ತದೆ. ವ್ಹೀಲ್ ಚೇರ್ ಇತ್ಯಾದಿ ಸೌಲಭ್ಯವೂ ಇದೆ. ಅಂಗವಿಕಲರು ಸೌಲಭ್ಯಕ್ಕೆ ಹೆಸರು ನೋಂದಣಿ ಮಾಡಿದರೆ ಅಂತಹವರಿಗೆ ಸಹಾಯ ಮಾಡಲು ಆಯೋಗ ಸಿದ್ಧವಿದೆ ಎಂದರು.
ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಇಲ್ಲದೇ ಇರುವವರು 1,25,715 ಇದ್ದಾರೆ. ಅವರ ಫೋಟೋ ಸಂಗ್ರಹಿಸಿ ತಿದ್ದುಪಡಿ ಮಾಡಲಾಗಿದೆ. ಆದರೂ 34,361 ಮಂದಿ ಇನ್ನೂ ಉಳಿದಿದ್ದಾರೆ. ಅವರು ಬೇರೆಡೆ ವಲಸೆ ಹೋಗಿದ್ದಾರೆ. ಅವರನ್ನೂ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೂ ಆಯೋಗ ಮುಂದಾಗಿದೆ ಎಂದು ತಿಳಿಸಿದರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ











Click it and Unblock the Notifications