ಕ್ರೈಂ: ಹೆದ್ದಾರಿಯ ಭೀಕರ ಅಪಘಾತ ಇನ್ನಿತರ ಸುದ್ದಿ

ಬೆಂಗಳೂರು, ಅ.15: ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿಟ್ಟೂರಿನಿಂದ ಗುಬ್ಬಿ ಕಡೆಗೆ ಸಾಗುತ್ತಿದ್ದ ಮೋಟರ್ ಸೈಕಲ್ ಸವಾರ ಕಳೆದ ರಾತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವಿನ ನಂತರ ಮೃತ ವ್ಯಕ್ತಿಯ ದೇಹ ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಹರಡಿಕೊಂಡಿದ್ದು ಹೃದಯ ವಿದ್ರಾವಕ ದೃಶ್ಯಕ್ಕೆ ಹೆದ್ದಾರಿಯ ಪ್ರಯಾಣಿಕರು ಮೂಕ ಸಾಕ್ಷಿಯಾಗಿದ್ದರು.

ಗುಬ್ಬಿ ಪೊಲೀಸ್ ಠಾಣೆ ಮೊ.ನಂ 211/13 ಕಲಂ; 279,304(a) ಐ.ಪಿ.ಸಿ & 134 (A)&(B) 187 IMV Act
ಪ್ರಕರಣದ ಸಾರಾಂಶ ಇಂತಿದೆ:

ಪಿರ್ಯಾದಿ ನಾಗೇಶ್ ನಿಟ್ಟೂರಿನಿಂದ ಗುಬ್ಬಿಗೆ ಎನ್.ಹೆಚ್ 206 ರಸ್ತೆಯಲ್ಲಿ ಮೋಟಾರ್ ಸೈಕಲ್ ನಲ್ಲಿ ರಾತ್ರಿ 9-30 ಗಂಟೆ ಸಮಯದಲ್ಲಿ ಬರುತ್ತಿದ್ದಾಗ, ಅದೇ ವೇಳೆಗೆ ಗುಬ್ಬಿ ಕಡೆಯಿಂದ ಈ ರಸ್ತೆಯಲ್ಲಿ ಯಾವುದೋ ಲಾರಿಯೊಂದನ್ನು ಅದರ ಚಾಲಕ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಟ್ಟೂರು ಆನಂದಪ್ಪನ ಜಮೀನಿನ ಸಮೀಪ ರಸ್ತೆಯಲ್ಲಿ ತನ್ನ ಮುಂದೆ ನಿಟ್ಟೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ, ಡಿಕ್ಕಿಹೊಡೆದು ಅಪಘಾತ ಉಂಟು ಮಾಡಿ ಸದರಿ ಲಾರಿಯನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ನಿಟ್ಟೂರು ಕಡೆಗೆ ಲಾರಿಯೊಂದಿಗೆ ಪರಾರಿಯಾದ.

ನಂತರ ಆ ಲಾರಿಯ ಹಿಂದೆಯೇ ಒಂದರ ಹಿಂದೊಂದು ಬಂದ ಐದಾರು ವಾಹನಗಳು ರಸ್ತೆಯ ಮೇಲೆ ಬಿದ್ದಿದ್ದ ಆ ವ್ಯಕ್ತಿಯ ಮೇಲೆ ಹಾಯ್ದುಹೋಗಿವೆ, ನಂತರ ತಾನು ಹತ್ತಿರ ಹೋಗಿ ನೋಡಿದಾಗ ಆ ವ್ಯಕ್ತಿ ಸ್ಥಳದಲ್ಲಿಯೇ ಸತ್ತಿದ್ದು, ವಾಹನಗಳು ಆತನ ಮೇಲೆ ಹಾಯ್ದುಹೋಗಿರುವುದರಿಂದ ಸದರಿ ವ್ಯಕ್ತಿಯನ್ನು ಗುರುತು ಹಿಡಿಯಲು ಸಾಧ್ಯವಾಗದಂತೆ, ದೇಹವೆಲ್ಲಾ ಛಿದ್ರವಾಗಿ ಹೋಗಿರುತ್ತೆ, ಈ ಅಪಘಾತ ಮಾಡಿ ಪರಾರಿಯಾದ ಲಾರಿಯ ನಂಬರ್ ನ್ನು ನೋಡಲು ಸಾಧ್ಯವಾಗಿರುವುದಿಲ್ಲ.ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಚಿಕ್ಕಮಗಳೂರು ಕ್ರೈಂ

ಚಿಕ್ಕಮಗಳೂರು ಕ್ರೈಂ

ಬಣಕಲ್ ಪೊಲೀಸ್ ಠಾಣೆ ಮೊ.ಸಂ. 114/2013 - ಕಲಂ: 279 337 304(ಎ) ಐಪಿಸಿ - ಶಿವಮೊಗ್ಗ ವಾಸಿ ಪಿರ್ಯಾದಿ ಶ್ರೇಯಸ್ ಧರ್ಮಸ್ಥಳಕ್ಕೆ ಹೋಗುವಾಗ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಸುಮಾರು 3 ಕಿ.ಮೀ ಮುಂದೆ ಚಾರ್ಮಡಿ ಘಾಟಿನಲ್ಲಿ ಸಂಜೆ 04-00 ಗಂಟೆ ಸಮಯಕ್ಕೆ ಎದುರುನಿಂದ ಬಂದ ನಂಬರ್ ಕೆಎ-46-4591 ರ ಕ್ರಿಮ್ ಕಲರ್ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಆಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಬಾಬ್ತು ಮೋಟರ್ ಸೈಕಲ್ಲಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮವಾಗಿ ಪಿರ್ಯಾದುದಾರರು ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಅವರ ಸ್ನೇಹಿತ ವಿಜಯ್ ರವರು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಪಿರ್ಯಾದಿಯವರ ಬಲ ಕಾಲಿಗೆ, ಬಲ ಕೈಗೆ ತಲೆಯ ಬಲ ಭಾಗಕ್ಕೆ ಬಲ ಕಣ್ಣಿನ ಬಳಿ ಪೆಟ್ಟಾಗಿ ರಕ್ತ ಗಾಯವಾಗಿದ್ದು, ವಿಜಯ್ ರವರ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದಾಗಿರುತ್ತೆ.

ಅಸ್ವಾಭಾವಿಕ ಮರಣ ಪ್ರಕರಣ

ಅಸ್ವಾಭಾವಿಕ ಮರಣ ಪ್ರಕರಣ

ಕಾಪು: ಕಟಪಾಡಿ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ, ಮೂಲತಃ ಹಾಸನ ಕಡೆಯವನಾದ ಅಂದಾಜು ಸುಮಾರು 40 ವರ್ಷ ಪ್ರಾಯದ ದೇವರಾಜ್ ಇವನು ಪೀಡ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೇ ವೀಪರೀತ ಮಧ್ಯ ಸೇವನೆ ಮಾಡುವ ಅಭ್ಯಾಸವಿದ್ದು ಈ ಹಿಂದೆ ಅನೇಕ ಸಲ ಬಿದ್ದವನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿ, ಗುಣಮುಖನಾಗಿರುತ್ತಾರೆ. ಈತನು ದಿನಾಂಕ 13-10-2013 ರಂದು ರಾತ್ರಿ ಸುಮಾರು 10:00 ಗಂಟೆಯ ನಂತರದಲ್ಲಿ ಕೋಟೆ ಗ್ರಾಮದ ಎಸ್.ವಿ.ಎಸ್. ಶಾಲೆಯ ಬಳಿಯಲ್ಲಿ ನಡೆದುಕೊಂಡು ಹೋಗುವಾಗ ಪೀಡ್ಸ್ ಬಂದು ರಸ್ತೆಯ ಬದಿಯಲ್ಲಿ ನಿಂತ ನೀರಿಗೆ ಕವುಚಿ ಬಿದ್ದು, ಏಳಲಾಗದೇ ಅಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ದೇವರಾಜ್ (61) ತಂದೆ: ಜಯಕುಲ ಮೇಸ್ತ್ರಿ ವಾಸ: ಇಂದಿರಾನಗರ ಕೋಟೆ ಗ್ರಾಮ ಉಡುಪಿರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 29/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪೇಪರ್ ಟೌನ್ ಠಾಣೆ : ಅಪಘಾತ ಪ್ರಕರಣ

ಪೇಪರ್ ಟೌನ್ ಠಾಣೆ : ಅಪಘಾತ ಪ್ರಕರಣ

ಪಿರ್ಯಾದಿ ಹೇಮಂತ್ ೨೭ ವರ್ಷ ವಾಸ ಬೆಂಗಳೂರು ಮತ್ತವರ ಸ್ನಹಿತರಾದ ರುದ್ರೇಶ್ , ಸತೀಶ ಕುಮಾರ್ , ಎಂ.ರಾಜು ಸ್ವಂತ ಉರಾದ ಹೆಬ್ರಿಗೆ ಬಂದು ವಾಪಸ್ಸು ಬೆಂಗಳೂರಿಗೆ ಹೋಗುತ್ತಿದ್ದಾಗ ಬಾರಂದೂರು ಕ್ರಾಸ್ ಹತ್ತಿರ ರುದ್ರೇಶನು ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಿಸಿ ಹುಣಸೆ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ರಾಜು ೩೦ವರ್ಷ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದು ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಚಿತ್ರದುರ್ಗ ನಗರ

ಚಿತ್ರದುರ್ಗ ನಗರ

ನಂ: ಕೆಎ-16/ಬಿ-7338 ನೇ ಆಟೋಗೆ ಯಾವುದೋ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಲಾರಿಯನ್ನು ನಿಲ್ಲಿಸದೇ ಹೋಗಿರುವ ಪರಿಣಾಮ ಆಟೋದಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಪಿಳ್ಳೇಕೆರನಹಳ್ಳಿ ಬಳಿ ದೇವಮ್ಮ ನಿಲಯ ಮುಂಭಾಗ ಎಸ್ ಹೆಚ್-19 ರಸ್ತೆಯಲ್ಲಿ ನಡೆದಿದೆ.

ಪಿಳ್ಳೇಕೆರನಹಳ್ಳಿ ವಾಸಿಗಳಾದ ಅಭಿಷೇಕ್ @ ಅಭಿ (19), ಕೀರ್ತಿಕುಮಾರ್ (16) ಮತ್ತು ಆಜಾದ್ ನಗರ ವಾಸಿ ನಯಾಜ್ (16) ಮೂರು ಜನರು ಆಟೋದಲ್ಲಿ ಬರುತ್ತಿದ್ದರು. ಅಭಿಷೇಕ್ @ ಅಭಿ (19) ಮತ್ತು ನಯಾಜ್ (16) ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಹಾಸನ

ಹಾಸನ

ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕುದುರುಗುಂಡಿ ಗ್ರಾಮದ ಶ್ರೀಮತಿ ಸುಶೀಲಮ್ಮ ಕೊಂ ಬಸವಯ್ಯ ವೇದಾವತಿ ಗ್ರಾಮರವರು ಗ್ರಾಮದ ಕೆರೆಯ ಏರಿ ಹಿಂಭಾಗದಲ್ಲಿರುವ ತಮ್ಮ ಬಾಬ್ತು ಗದ್ದೆಯಲ್ಲಿ ಯಾರೋ ಅಪರಿಚಿತ ಗಂಡಸು ಸುಮಾರು 25-30 ವರ್ಷ ವಯಸ್ಸಿನ ಗಂಡಸು ಈಗ್ಗೆ 3-4 ದಿವಸದ ಹಿಂದೆ ಮೃತಪಟ್ಟಿದ್ದು ದೇಹ ಊದಿಕೊಂಡು ವಾಸನೆ ಬರುತ್ತಿದ್ದು ಶವದ ಪಕ್ಕದಲ್ಲಿ ಒಂದು ಮದ್ಯದ ಖಾಲಿ ಸೀಸೆ, ಒಂದು ನೀರಿನ ಸೀಸೆ ಹಾಗೂ ಒಂದು ಪ್ಲಾಸ್ಟಿಕ್ ಲೋಟ ಸಹ ಬಿದ್ದಿದ್ದು ಆತ ಮದ್ಯದ ಅಮಲಿನಲ್ಲಿ ಜಮೀನಿನಲ್ಲಿ ಸುಧಾರಿಸಿಕೊಳ್ಳುವಾಗ ಮೃತಪಟ್ಟಿರುವಂತೆ ಕಂಡು ಬಂದಿರುತ್ತದೆ ಎಂದು ಶ್ರೀಮತಿ ಸುಶೀಲಮ್ಮ ಕೊಟ್ಟ ದೂರಿನ ಮೇರೆಗೆ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+