ಕ್ರೈಂ ರೌಂಡಪ್: ಸೈಕೋ ರವಿ ಬಂಧನ ಇನ್ನಷ್ಟು ಸುದ್ದಿ
ಬೆಂಗಳೂರು, ಅ.22: ಮಕ್ಕಳ ಕಳ್ಳ ಸೈಕೊ ರವಿಯನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತನ ವಿಚಾರಣೆ ವೇಳೆ ಬೆಂಗಳೂರಿನ 8 ಪ್ರಕರಣ ಸೇರಿದಂತೆ ರಾಜ್ಯಾದ್ಯಂತ 61 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಮಧುಗಿರಿಯಲ್ಲಿ ದೀಕ್ಷಾ (8) ಎಂಬ ಬಾಲಕಿಯನ್ನು ಅಪಹರಿಸಿ ಕೊರಟಗೆರೆಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೈಮೇಲಿದ್ದ ಆಭರಣಗಳನ್ನು ಕಳಚಿಕೊಂಡಿದ್ದಾನೆ. ಆ ಆಭರಣಗಳು ರೋಲ್ ಗೋಲ್ಡ್ ಎಂದು ಗೊತ್ತಾಗಿ ಬಾಲಕಿಯ ಕೊಲೆಗೆ ಯತ್ನಿಸಿದ್ದಾನೆ.
ಆದರೆ ಕೊಲ್ಲಲು ಮನಸ್ಸಾಗದೆ ಬೆಂಗಳೂರು, ಕೋಲಾರಗಳಲ್ಲಿ ಎರಡು-ಮೂರು ದಿನ ಇದ್ದು ಮುಳಬಾಗಿಲಿಗೆ ಕರೆದೊಯ್ದು ಪಾಳುಬಾವಿಗೆ ಎಸೆಯಲು ಯತ್ನಿಸಿದ್ದು, ಜನರನ್ನು ನೋಡಿ ವಾಪಸ್ ಕೊರಟಗೆರೆಗೆ ಕರೆತಂದಿದ್ದಾನೆ.
ಮತ್ತೆ ಎರಡು ದಿನ ಕಳೆದು ಮುಳಬಾಗಿಲಿಗೆ ಕರೆತಂದು ಬಾಲಕಿಯಿಂದ ಆಕೆಯ ತಂದೆಯ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ನಿಮ್ಮ ಮಗಳು ಮುಳಬಾಗಿಲಿನಲ್ಲಿದ್ದಾಳೆ ಬಂದು ಕರೆದೊಯ್ಯಿರಿ ಎಂದು ತಿಳಿಸಿದ್ದ. ಅದರಂತೆ ಬಾಲಕಿಯ ತಂದೆ ಮಧುಗಿರಿ ಪೊಲೀಸರೊಂದಿಗೆ ಬಂದು ಮಗಳನ್ನು ಕರೆದೊಯ್ದರಾದರೂ ಆ ವೇಳೆ ಆರೋಪಿ ತಲೆ ಮರೆಸಿಕೊಂಡಿದ್ದ.
ಈ ಘಟನೆಯ ನಂತರ ಸೈಕೊ ರವಿ ಮಡಿವಾಳ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಪೊಲೀಸರ ವಿಚಾರಣೆ ವೇಳೆ ನಗರದಲ್ಲಿ ನಡೆದಿದ್ದ 8 ಪ್ರಕರಣಗಳ ಬಗ್ಗೆ ಮಾತ್ರ ಬಾಯಿ ಬಿಟ್ಟಿದ್ದ. ಬಾಲಕಿ ದೀಕ್ಷಾಳ ಅಪಹರಣ ಪ್ರಕರಣದ ತನಿಖೆ ಮುಂದುವರೆಸಿದ ಮಧುಗಿರಿ ಪೊಲೀಸರಿಗೆ ಆಕೆಯನ್ನು ಅಪಹರಿಸಿದ್ದು ಸೈಕೊ ರವಿ ಎಂದು ಗೊತ್ತಾಗಿ ಜೈಲಿನಲ್ಲಿರುವ ಆತನನ್ನು ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಉಡುಪಿ
ಜೀವ ಬೆದರಿಕೆ ಪ್ರಕರಣ
ಉಡುಪಿ ದಿನಾಂಕ 20/10/2013 ರಂದು ಪಿರ್ಯಾದಿದಾರರಾದ ಸತೀಶ್ ಬಂಗೇರಾ (32) ತಂದೆ ದಿ ನಾದು ಸುವರ್ಣ ವಾಸ ಸುವರ್ಣ ನಿಲಯ ಸಂತೆಕಟ್ಟೆ ನಯಂಪಳ್ಳಿ ಪುತ್ತೂರು ಗ್ರಾಮರವರು ಸ್ನೇಹಿತಾರದ ಸಖೇಶ್ ಮತ್ತು ಪ್ರಶಾಂತ್ ರೊಂದಿಗೆ ನಿಟ್ಟೂರಿನ ತಂಗದಂಗಡಿಯ ಪ್ರೈಮರಿ ಸ್ಕೂಲ್ ಬಳಿ ರಾತ್ರಿ ಸುಮಾರು 12:30 ಗಂಟೆಗೆ ನೆಡೆದುಕೊಂಡು ಹೋಗಿತ್ತಿರುವಾಗ ತನಗೆ ಪರಿಚಯವಿದ್ದ ದೊಡ್ಡಣಗುಡ್ಡೆಯ ಶೈಲು,ಶೀರಿಬೀಡು ಟವರ್ಸ್ ನ ಶರ್ವೀನ್, ಲಕ್ಷ್ಮೀ ನಗರದ ರವಿ ಮತ್ತು ನಯಂಪಳ್ಳಿಯ ಗ್ಲಾಡ್ವೀನ್ ರವರು ಆಕ್ಟೀವಾ ಹೊಂಡಾದಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಶೈಲು ಕೈಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ತಲೆಯ ಎಡಬದಿಗೆ ಹೋಡೆದು ರಕ್ತಗಾಯವಾಗಿದ್ದು , ಆ ಸಮಯದಲ್ಲಿ ಪಿರ್ಯಾದಿದಾರರು ತಲೆಯನ್ನು ಬಗ್ಗಿಸದೇ ಇದ್ದಲ್ಲಿ ಮಾರಣಾಂತಿಕೆ ಗಾಯವಾಗಿ ಸ್ಥಳದಲ್ಲಿ ಸತ್ತು ಹೋಗುತ್ತಿದ್ದರು ಹಾಗೂ ಬಲಗಾಲಿಗೆ ರಕ್ತಗಾಯ ಮಾಡಿದ್ದು ಆ ಕೃತ್ಯವನ್ನು ತಪ್ಪಸಿಲು ಬಂದ ಪಿರ್ಯಾದಿದಾರರ ಸ್ನೇಹಿತರಾದ ಸುಖೇಶ್ ಮತ್ತು ಪ್ರಶಾಂತ್ ರವರಿಗೂ ಕೂಡ ಆಪಾದಿತರೆಲ್ಲರು ಸೇರಿ ಹಲ್ಲೆ ನಡೆಸಿದ್ದು ಅವರಿಗೆ ಸಹ ಗಾಯಗಳುಂಟಾಗಿದ್ದು.
ಅಲ್ಲಿಗೆ ಕಾರಿನಲ್ಲಿ ಬಂದ ರೋಷನ್ ರವರನ್ನು ಕಂಡು ಆರೋಪಿತರು ಮುಂದೆ ನೋಡಿಕೊಳ್ಳುವುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದು ಪಿರ್ಯಾದಿದಾರರ ಚಿಕಿತ್ಸೆಯ ಬಗ್ಗೆ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಸತೀಶ್ ಬಂಗೇರಾರವರು ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 424/13 ಕಲಂ: 341, 504, 323, 506, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿವಮೊಗ್ಗ ಕ್ರೈಂ
ಭದ್ರಾವತಿ ಗ್ರಾಮಾಂತರ; ವರದಕ್ಷಿಣೆ ಕಿರುಕುಳ;
ಪಿರ್ಯಾದಿ ಶ್ರೀಮತಿ ಶಬನಾ ಬಾನು ವಾಸ; ದೊಣಬಗಟ್ಟ ಭದ್ರಾವತಿ ಇವರು 8 ವರ್ಷದಹಿಂದೆ ಯೂಸೂಫ ಅಲಿಯವರೊಂದಿಗೆ ಮದುವೆ ಆಗಿದ್ದು ಮಕ್ಕಳಾಗಲಿಲ್ಲ ಎಂದು ತನ್ನ ಅಣ್ಣನಿಗೆ ಮೈದುನ ಸಿದ್ದೀಕ್ ನು ಬೇರೆ ಮದುವೆ ಮಾಡುವುದಾಗಿ ಹೇಳಿ ಆಗಾಗ್ಗೆ ಕಿರುಕುಳಕೊಡುತ್ತಿದ್ದು ಸಿದ್ದೀಕನ ಮಗಳು ಸೈಯದ್ ಮೈದಿಯಂಬುವವಳನ್ನು ಮನೆಯಲ್ಲಿಯೇ ಸಾಕಿಕೊಂಡಿದ್ದು ಆತಳಿಗೆ ಕೊಡಿಸಿದ ಬಟ್ಟೆಯ ವಿಚಾರದಲ್ಲಿ ಪಿರ್ಯಾದಿಯವರಿಗೆ ಅವಾಚ್ಯವಾಗಿ ಬೈದು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಚಿತ್ರದುರ್ಗ ನಗರ
ಮಾರಣಾಂತಿಕ ಅಪಘಾತ ಪ್ರಕರಣ :
ಯಾವುದೋ ವಾಹನ ಡಿಕ್ಕಿ, ವ್ಯಕ್ತಿಯ ಸಾವು :
ಹಿರಿಯೂರು, ಅಕ್ಟೋಬರ್. 22 :: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ವ್ಯಕ್ತಿಗೆ ತೀವ್ರ ಸ್ವರೂಪದ ಪೆಟ್ಟುಗಳು ಬಿದ್ದು ಮೃತಪಟ್ಟಿರುವ ಘಟನೆ ವಿಎಂಪಿ ಹೋಟೆಲ್ ಬಳಿ ಎನ್‍ಹೆಚ್-4 ರಸ್ತೆಯಲ್ಲಿ ಈ ದಿನ ಬೆಳಿಗ್ಗೆ ನಡೆದಿದೆ. ಸಂತೇಪೇಟೆ ವಾಸಿ ಗಂಗಾಧರಪ್ಪ (60) ಎಂಬುವವರು ತನ್ನ ಮೊಮ್ಮಗಳಿಗೆ ಮೇಕೆ ಹಾಲನ್ನು ತರಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರಪ್ಪ ರವರನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ದಾವಣಗೆರೆ ಕ್ರೈಂ
ಹರಿಹರ (ಗ್ರಾ) ಪೊಲೀಸ್ ಠಾಣೆ ಗುನ್ನೆನಂ: 38/2013, ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ: 20-10-2013 ರಂದು ಮದ್ಯಾಹ್ನ 12-00 ಪಿ.ಎಂ ಗೆ ಈ ಕೇಸಿನ ಪಿರ್ಯಾದಿ ರವಿಕಿರಣ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ, ಪಿರ್ಯಾದಿಯ ತಂದೆ ಮತ್ತು ತಮ್ಮ ಸಚಿನ್ ಇಬ್ಬರೂ ಬೆಳಗ್ಗೆ ತಮ್ಮ ಜಮೀನಿಗೆ ಬೋರ್‌ವೆಲ್ ನೀರು ಹಾಯಿಸಲೆಂತಾ ಹೋಗಿದ್ದು, ಬೆಳಗ್ಗೆ 10-15 ಎ.ಎಂ ಗೆ ಸಚಿನ್ನನು ಬೋರ್‌ವೆಲ್‌ನ ಸ್ಟಾಟರ್ ಬೋರ್ಡ್ ಅನ್ನು ತೆಗೆದು ಸ್ಟಾರ್ಟ್ ಮಾಡಲು ಹೋದಾಗ ಆಕಸ್ಮಿಕವಾಗಿ ಬೋರ್ಡಿನಿಂದ ಕರೆಂಟ್ ಶಾಕ್ ಹೊಡೆದು ತೀವೃ ಅಸ್ವಸ್ಥಗೊಂಡಿದ್ದವನನ್ನು ಕೂಡಲೇ ಬೈಕಿನಲ್ಲಿ ಕೂರಿಸಿಕೊಂಡು ಹರಿಹರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಸಚಿನ್ನನು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಸಾವಿನ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ, ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಇದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಕೋಲಾರ
ಮಾರಾಣಾಂತಿಕ ರಸ್ತೆ ಅಪಘಾತ:
ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಕ್ಯಾಲನೂರು ಗ್ರಾಮದ ಗೇಟ್ ಬಳಿ ಸಂಭವಿಸಿರುತ್ತದೆ. ದಿನಾಂಕ ೧೯-೧೦-೨೦೧೩ ರಂದು ಬೆಳಿಗ್ಗೆ ೬-೪೫ ಗಂಟೆಯಲ್ಲಿ ತಾವರೆಕೆರೆ ಗ್ರಾಮದ ವಾಸಿ ಬಸವರಾಜ್ ರವರು ಕೆ-೦೭, ಯು-೮೪೪೮ ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರದಿಂದ ತಮ್ಮ ಗ್ರಾಮಕ್ಕೆ ಹೋಗಲು ಬರುತ್ತಿದ್ದು. ಈ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ-೦೭, ಎಪ್-೧೪೬೨ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜ್ ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ.












Click it and Unblock the Notifications