ಕ್ರೈಂ: ಪರೀಕ್ಷೆ ಬರೆಯಲು ಹೋದ್ಳು ಮದ್ವೆಯಾಗಿ ಬಂದ್ಳು

ಬೆಂಗಳೂರು, ನ.18: ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ನಾಟಕೀಯ ರೀತಿಯಲ್ಲಿ ಅಪರಹಣವಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ನ.18ರಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಬರೆಯಲು ಹಾಸನ ನಗರದ ಬಿಇಜಿ ಕಾಲೇಜಿಗೆ ಬಂದಿದ್ದ ಸೌಮ್ಯಳನ್ನು ಮೂವರು ಯುವಕರು ಅಪಹರಣ ಮಾಡಿದ್ದರು ಎಂದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪಹರಣಕಾರರ ಬೆನ್ನತ್ತಿದ ಪೊಲೀಸರು ಹಲವು ಕಡೆ ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಆದರೆ ಸೌಮ್ಯ ತನ್ನ ಪ್ರಿಯಕರ ಚೇತನ್ ನೊಂದಿಗೆ ಠಾಣೆಗೆ ಬಂದು ಪೊಲೀಸರ ಮುಂದೆ ಪ್ರೀತಿಸುತ್ತಿರುವ ವಿಷಯ ಬಾಯ್ಬಿಟ್ಟಿದ್ದಾಳೆ. ಅಲ್ಲದೆ ಇಬ್ಬರು ಕುಶಾಲನಗರದ ಬಳಿ ಮದುವೆಯಾಗಿರುವುದಾಗಿ ಘೋಷಿಸಿದ್ದಾಳೆ.

ಹಲವು ವರ್ಷಗಳಿಂದ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ಹಿನ್ನೆಲೆಯಲ್ಲಿ ನಾವು ಮನೆಬಿಟ್ಟು ಹೋಗಿದ್ದೆವು ಎಂದಿದ್ದಾಳೆ.

ಸೌಮ್ಯ ಹಾಗೂ ಚೇತನ್ ಇಬ್ಬರು ಮದುವೆಗೆ ಪ್ರಾಪ್ತ ವಯಸ್ಕರಾಗಿದ್ದು ಇಬ್ಬರಿಗೂ ವಿವಾಹ ಮಾಡುವಂತೆ ಪೊಲೀಸರು ಇಬ್ಬರ ಮನೆಯವರ ಮನವೊಲಿಸಿದ್ದಾರೆ. ಕೊನೆಗೂ ಈ ಜೋಡಿಹಕ್ಕಿ ದಾಂಪತ್ಯ ಬಂಧನಕ್ಕೆ ಒಳಪಟ್ಟಿದ್ದಾರೆ.

ಸ್ನೇಹಿತರ ಸಹಾಯದೊಂದಿದೆ ಪ್ರೇಯಸಿ ಸೌಮ್ಯಳನ್ನು ಕರೆದೊಯ್ದಿದ್ದ ಚೇತನ್,ಕುಶಾಲನಗರ ಸಮೀಪದ ಹೋಂಸ್ಟೇನಲ್ಲಿ ತಂಗಿದ್ದ, ಈ ಜಾಡು ಹಿಡಿದು ಹೊರಟ ಎಸ್ಐ ವಿಜಯಕೃಷ್ಣ ನೇತೃತ್ವದ ತಂಡ ಸ್ಥಳವನ್ನ ಪತ್ತೆ ಹಚ್ಚಿ ಇಂದು ಪ್ರೇಮಿಗಳನ್ನು ಕರೆತಂದರು. ಬಳಿಕ ವಿಚಾರಣೆ ವೇಳೆ ಇದು ಅಪಹರಣವಲ್ಲ ಪ್ರೇಮ ಪ್ರಕರಣ ಎಂಬುದು ಗೊತ್ತಾಗಿದೆ. ವಿದ್ಯಾರ್ಥಿನಿಯೂ ತನ್ನ ಇಷ್ಟದಂತೆಯೇ ಚೇತನ್ ಜೊತೆ ಹೋಗಿದ್ದಳು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರೋದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ..

ಸಿಎಂ ಭದ್ರತಾ ಪೇದೆ ಮರಣ

ಸಿಎಂ ಭದ್ರತಾ ಪೇದೆ ಮರಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆಯಲ್ಲಿದ್ದ ಕೆಎಸ್ಆರ್ಪಿ ಮುಖ್ಯಪೇದೆ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮಂಗಳೂರು ಮೂಲದ 55 ವರ್ಷದ ನಾಣಿಯಪ್ಪಗೌಡ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಕಾವೇರಿ ನಿವಾಸದ ಬಳಿ ಇರುವ ಪೊಲೀಸ್ ಕಾಟೇಜ್ ನ ಮೆಟ್ಟಿಲಿನ ಕಂಬಿಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
9 ದಿನಗಳ ಕಾಲ ರಜೆ ಪಡೆದು ನಾಣಿಯಪ್ಪಗೌಡ ಕುಟುಂಬಸಹಿತ ಮಂಗಳೂರಿಗೆ ಹೋಗಿದ್ರು. ನಿನ್ನೆಯಷ್ಟೇ ಕರ್ತವ್ಯಕ್ಕೆ ಹಾಜರಾದ ಅವರನ್ನು ಪೊಲೀಸ್ ಕಾಟೇಜ್ ನಿರ್ವಹಣೆ ಮಾಡಲು ನಿಯೋಜಿಸಲಾಗಿತ್ತು.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ರು. ನಾಣಿಯಪ್ಪಗೌಡ ಅವರು ಮಧುಮೇಹದಿಂದ ಬಳಲುತ್ತಿದ್ದರು ತೀವ್ರ ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿಬಂದಿದೆ
ಅಸ್ವಾಭಾವಿಕ ಮರಣ ಪ್ರಕರಣ

ಅಸ್ವಾಭಾವಿಕ ಮರಣ ಪ್ರಕರಣ

ಬ್ರಹ್ಮಾವರ: ದಿನಾಂಕ 20/11/2013ರಂದು ಬೆಳಗ್ಗೆ ಪಿರ್ಯಾದಿದಾರರಾದ ದೇವದಾಸ ನಾಯ್ಕ (43) ತಂದೆ ದಿ. ರುಕ್ಕಯ್ಯ ನಾಯ್ಕ, ವಾಸ ಗರಡಿಬೆಟ್ಟು, ಚಾಂತಾರು ಗ್ರಾಮ ಇವರ ಭಾವ ನರಸಿಂಹ ನಾಯ್ಕ (45) ಎಂಬವರು ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಆದರ್ಶ ನಗರದಲ್ಲಿರುವ ವಾಸ್ತವ್ಯದಲ್ಲಿರುವ ಮನೆಯಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿಯವರು ಚಿಕಿತ್ಸೆ ಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಮೃತ ಪಟ್ಟಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ದೇವದಾಸ ನಾಯ್ಕ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 55/13 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.

ಹುಡುಗಿ ಕಾಣೆ

ಹುಡುಗಿ ಕಾಣೆ

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣಿಯಾಗಿದ್ದಾಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಬಂಡಿಮಾಂಕಳಮ್ಮ ದೇವಾಲಯದ ಬಳಿ ವಾಸವಾಗಿರುವ ಪರ್ವಿನ್ ರವರ ಮಗಳಾದ 9ನೇ ತರಗತಿ ವಿದ್ಯಾರ್ಥಿನಿ, ಸೋನಿ ಎಂಬುವರು ಕೆಂಬೋಡಿ ಬಳಿ ಶಾಲೆಗೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿ, ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣಿಯಾಗಿರುತ್ತಾಳೆ. ಈ ಬಗ್ಗೆ ಪರ್ವಿನ್ ರವರು ನೀಡಿದ ದೂರಿನ ಮೇರೆಗೆ ದಿನಾಂಕ 19/11/2013 ರಂದು ಪ್ರಕರಣ ದಾಖಲಾಗಿರುತ್ತದೆ.

ಶಿವಮೊಗ್ಗ ಠಾಣೆ

ಶಿವಮೊಗ್ಗ ಠಾಣೆ

ಶಿರಾಳಕೊಪ್ಪ ಠಾಣೆ
ಮುಸ್ತಾಕ್ ಅಹ್ಮದ್ ಕೊಂ ರಹೀಸಾಬ್ 42 ವರ್ಷ ವಾಸ ಬಳ್ಳಿಗಾವಿ ಇವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ವಿಷದ ಹಾವು ಕಚ್ಚಿದ್ದರಿಂದ ಮೃತ್ತಪಟ್ಟಿರುತ್ತಾರೆ

ಅಕಸ್ಮಿಕ ಸಾವು

1.ಒಂದು ಗಂಡಸು ಸುಮಾರು 28 ವರ್ಷ 2) ಒಂದು ಹೆಂಗಸು 28 ವರ್ಷ ಇವರುಗಳು ಯಾವುದೋ ಕಾರಣಕ್ಕೆ ಕಿಕ್ಕಾನಿ ಕಾಡಿನ ಮದ್ಯ ಮರಕ್ಕೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾರೆ. ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ

ಚಿಕ್ಕಮಗಳೂರು

ಚಿಕ್ಕಮಗಳೂರು

ನಗರ ಪೊಲೀಸ್‌ ಠಾಣೆ ಮೊ.ಸಂ. 214/2013 - ಕಲಂ: 143 147 504 506 323 324 341 149 ಐಪಿಸಿ.. ಮಟನ್‌ ಮಾರ್ಕೆಟ್‌ ಹತ್ತಿರ ಕುರಿ ತಲೆ-ಕಾಲು ಕ್ಲೀನ್ ಮಾಡಿದ ಕಸವನ್ನು, ಕಸದ ತೊಟ್ಟಿಗೆ ಹಾಕಲು ಹೋಗುವಾಗ ಮಾರ್ಕೇಟ್ ರಸ್ತೆ ನ್ಯಾಮತ್ ಹೊಟೇಲ್ ಹತ್ತಿರ ಗಲಾಟೆಯಾದ ವಿಚಾರ, ಕಸ ಹಾಕಲು ಮುಂದೆ ಹೋಗದಂತೆ, ತಡೆದು ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ತಲೆಗೆ ರಾಡಿನಿಂದ ಹೊಡೆದಿದ್ದು, ಶಾಫಾಜ್ ಜಗಳ ಬಿಡಿಸಲು ಬಂದಾಗ ಆತನನ್ನೂ ಕೂಡ ಗುಂಪಿನಲ್ಲಿದ್ದ ಇಬ್ಬರು ಓಡಿಸಿಕೊಂಡು ಹೋದಾಗ ಆತನ ಎಡ ಕಾಲಿಗೆ ಗಾಜಿನ ಚೂರು ತಾಗಿ ರಕ್ತ ಬಂದಿದ್ದು,ಇಬ್ಬರಿಗೂ ಕೈಗಳಿಂದ ಹೊಡೆದು ಸೂಳ* ಮಕ್ಕಳಾ ಎಂದು ಬೈದರು ನಮ್ಮನ್ನು ಚಿಕಿತ್ಸೆಗಾಗಿ ಎಂ.ಜಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+